ಸುರಕ್ಷಿತ ಶಿಕ್ಷಣ ಸುಸ್ಥಿರ ಸಮುದಾಯ ಬಾಂಧವಿ ದಿನಾಚರಣೆ ೨೦೧೬

bhandavi_school_koppal

ಬಾಂಧವಿಯು ತನ್ನ ೧೧ನೇ ವಾರ್ಷಿಕೋತ್ಸವ ಸಮಾರಂಭವನ್ನು ಡಿಸೆಂಬರ್ ೧೦ ಮಾನವ ಹಕ್ಕುಗಳ ದಿನದಂದು, ಚಿಕ್ಕಬೀಡ್ನಾಳ ಗ್ರಾಮದಲ್ಲಿರುವ ತನ್ನ ಆವರಣದಲ್ಲಿ ಆಚರಿಸಿತು.. ಬಾಂಧವಿ ಎಂಬುವುದು ೨೦೦೫ರಲ್ಲಿ ಬೆಂಗಳೂರಿನಲ್ಲಿ ಪ್ರಾರಂಭವಾಗಿದ್ದು, ಕಳೆದ ೯ ವರ್ಷಗಳಿಂದ ಇದು ಕೊಪ್ಪಳ ಜಿಲ್ಲೆಯ ಚಿಕ್ಕಬೀಡ್ನಾಳ ಗ್ರಾಮದಲ್ಲಿ ನಡೆಯುತ್ತಿದೆ. ಇದು, ಬಾಲ್ಯ ಮತ್ತು ಶಿಕ್ಷಣದ ಹಕ್ಕುಗಳು ನಿಷೇಧಿಸಲ್ಪಟ್ಟ, ಸಂಕಷ್ಟದಲ್ಲಿರುವ ಹೆಣ್ಣುಮಕ್ಕಳ ಸಬಲೀಕರಣದ ಕಾರ್ಯಕ್ರಮವಾಗಿದೆ.
ಬಾಂಧವಿ ವಿಸ್ತಾರ್ ಸಂಸ್ಥೆಯ ಒಂದು ಕಾರ್ಯಕ್ರಮವಾಗಿದ್ದು, ಉತ್ತರ ಕರ್ನಾಟಕದ ಕೆಲವು ಸಂಘ ಸಂಸ್ಥೆಗಳ ಮತ್ತು ಸರ್ಕಾರೀ ಸಂಸ್ಥೆಗಳ ಸಹಭಾಗಿತ್ವದಲ್ಲಿ ನಡೆಯುತ್ತಿದೆ. ಇದು ನಮ್ಮ ಸಮಾಜದಲ್ಲಿ ಹೆಣ್ಣುಮಕ್ಕಳ ಮೇಲಾಗುತ್ತಿರುವ ದೌರ್ಜನ್ಯಕ್ಕೆ ಪ್ರತಿಕ್ರಿಯೆಯಾಗಿ, ಹೆಣ್ಣುಮಕ್ಕಳ ಸಮಗ್ರ ಅಭಿವೃಧ್ಧಿಗೆ ಶ್ರಮಿಸುವುದರ ಮೂಲಕ ಸುಸ್ಥಿರ ಸಮುದಾಯ ಕಟ್ಟುವತ್ತ ದಾಪುಗಾಲು ಹಾಕುತ್ತಿದೆ.
ನಮ್ಮ ದೇಶದಲ್ಲಿ ಲಿಂಗತಾರತಮ್ಯ ಇದೆ. ಹಾಗಾಗಿ ಹೆಣ್ಣುಮಕ್ಕಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ಕೊಡಬೇಕು. ಬಾಂಧವಿ ಸೇವಾಕಾರ್ಯವನ್ನು ಮಾಡುವಂಥಹ ಟ್ರಸ್ಟ್ ಇಲ್ಲಿ ನೂರು ಜನಮಕ್ಕಳಿಗೆ ಉಳಿದುಕೊಳ್ಳುವ ಅವಕಾಶ ಕಲ್ಪಿಸಿದೆ ಎಂದ ಬಾಂಧವಿ ದಿನಾಚರಣೆಯ ಕಾರ್ಯಕ್ರಮ ಉಧ್ಘಾಟಿಸಿ ಪ್ರೊಫೆಸರ್ ಅಲ್ಲಮ ಪ್ರಭು ಬೆಟ್ಟದೂರು ಅವರು ಹೇಳಿದರು. ಕೊಪ್ಪಳ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸದಸ್ಯರಾದ  ಹನುಮಂತ ಬೀಚ್‌ಕಲ್ ಅವರು ಮಾತನಾಡಿ ವಿಸ್ತಾರ್ ಸಂಸ್ಥೆಯು ಹೆಸರೇ ಸೂಚಿಸುವಂತೆ ವಿಶಾಲ ಹೃದಯವಂತರು, ನಮ್ಮ ನಮ್ಮ ಮನೆಗಳಲ್ಲಿ ಎಲ್ಲಾ ಮಕ್ಕಲನ್ನು ನೋಡಿಕೊಳ್ಳುವುದು ಕಷ್ಟ, ಅಂಥದ್ದರಲ್ಲಿ ಇಲ್ಲಿ ಬೇರೆ ಬೇರೆ ಕಡೆಯಿಂದ ಮಕ್ಕಳನ್ನು ಕಲೆಹಾಕಿ ಚೆನ್ನಾಗಿ ನೋಡೊಕೊಳ್ಳುವುದು ಶ್ಲಾಘನೀಯ ಎಂದರು. ಶ್ರೀಮತಿ ಇಂದಿರಾ ಬಾವಿಕಟ್ಟೆಯವರು ಮಾತನಾಡಿ, ಬೆಂಗಳೂರಿನಿಂದ ಆಗಮಿಸಿ ನಮ್ಮ ಜಿಲ್ಲೆಯ ಮಕ್ಕಳಿಗೆ ಸೇವೆ ಸಲ್ಲಿಸುತ್ತಿರುವುದಕ್ಕೆ ಜಿಲ್ಲೆಯ ಪರವಾಗಿ ವಂದನೆಗಳನ್ನು ಸಲ್ಲಿಸಿದರು. ಕಾರ್ಯಕ್ರಮಕ್ಕೆ ಅತಿಥಿಗಳಾಗಿ, ವಿಸ್ತಾರ್ ಬೆಂಗಳೂರಿನಿಂದ ಶ್ರೀಮತಿ ಶಾಂತಿ, ಚಿಕ್ಕಬೀಡ್ನಾಳ ಪ್ರೈಮರಿ ಶಾಲೆಯ ಅಧ್ಯಾಪಕರು, ಬಾಂಧವಿ ಮಕ್ಕಳ ಪ್ರತಿನಿಧಿ, ದುರ್ಗಾ, ಮತ್ತು ವಿ.ಸಿ.ಸಿ. ಪೂರ್ವ ವಿದ್ಯಾರ್ಥಿಗಳ ಪ್ರತಿನಿಧಿ, ಶ್ರೀ ಧರ್ಮರಾಜ್ ಅವರು ವೇದಿಕೆ ಮೇಲೆ ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಬಾಂಧವಿ ಮಕ್ಕಳಿಂದ ನೃತ್ಯ, ನಾಟಕ, ಕೋಲಾಟ, ಅನುಭವ ಹಂಚಿಕೆ, ಸನ್ಮಾನ ಮತ್ತು ಬಾಂಧವಿಯ ವಾರ್ಷಿಕ ವರದಿ ಮಂಡನೆಯನ್ನು ಮಾಡಲಾಯಿತು.
ಕಾರ್ಯಕ್ರಮ ನಿರೂಪಣೆಯನ್ನು ಮಕ್ಕಳಾದ ಕುಮಾರಿ ದುರ್ಗಾ ಮತ್ತು ಅನ್ನಪೂರ್ಣ ಮತ್ತು ಅಕ್ಷಯ ಅವರು ಮಾಡಿದರು. ಸ್ವಾಗತವನ್ನು ಕುಮಾರಿ ಮರಿಯಮ್ಮ ಅವರು ಮಾಡಿದರು. ಪ್ರಾಸ್ತಾವಿಕ ನುಡಿಯನ್ನು ವಿಸ್ತಾರ್ ಸಂಸ್ಥೆಯ ಸಂಯೋಜಕಿ ಆಶಾ. ವಿ ಅವರು ಮಾಡಿದರು ಮತ್ತು ಬಾಂಧವಿಯ ವಾರ್ಷಿಕ ವರದಿಯನ್ನು ಕುಮಾರಿ ರೇಣುಕಾ ಹಾಲವರ್ತಿಯವರು ಮಂಡಿಸಿದರು.
ವಂದನೆಗಳೊಂದಿಗೆ,

Related posts

Leave a Comment