ಸೀರತ್ ಉಪನ್ಯಾಸ ಕಾರ್ಯಕ್ರಮ

ಕೊಪ್ಪಳ ದಿ : ೦೯.೧೨.೨೦೧೬ ರಂದು ನಗರದ ತೆಗ್ಗಿನಕೇರಾ ಓಣಿಯಲ್ಲಿ ಪ್ರಾವಾದಿ ಮಹ್ಮದ್ ಸಲ್ಲಲ್ಲಾಹುಅಲೈಹಿ ವ ಸಲ್ಲಮ್ ರವರ ಜೀವನ ಸಂದೇಶ ಕುರಿತು ಸೀರತ್ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಆನಾಬ ಲಾಲ್‌ಹುಸೇನ್ ಕಂದ್ಗಲ್ ಅರಬ್ಬಿ ಶಿಕ್ಷಕರು ಇಲಕಲ್ ರವರಿಂದ ಉಪನ್ಯಾಸ ನೆರವೇರುವುದು.
ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ನಗರಸಭಾ ಅಧ್ಯಕ್ಷರಾದ ಮಹೇಂದ್ರ ಚೋಪ್ರಾ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾದ ಸೈಯದ್ ಜುಲ್ಲುಖಾದ್ರಿ, ಶ್ರೀಕಾಂತ ಕಟ್ಟಿಮನಿ, ಜನಾಬ ಖಾಜಾವಲಿ ಬನ್ನಿಕೊಪ್ಪ, ಸತೀಶ ಪಾಟೀಲ್, ಅಮ್ಮದ್ ಪಾಟೀಲ್, ಚನ್ನಪ್ಪ ಕೋಟ್ಯಾಳ, ದ್ಯಾಮಣ್ಣ ಚಿಲವಾಡಗಿ, ಬಸವರಾಜ ಮಡಿವಾಳ, ಜನಾಬ್ ಎಂ ಸಾದಿಕ್‌ಅಲಿ, ಸೈಯದ್ ಅಪ್ಜಲ್ ಪಟೇಲ್ ಸೈಯದ್ ಶಬ್ಬಿರ ಹಸೈನಿ, ಸುರೇಶ ಭೂಮರಡ್ಡಿ ಇನ್ನೂ ಮುಂತಾದವರು ಭಾಗವಹಿಸಲಿದ್ದಾರೆ ಆದ್ದರಿಂದ ಸರ್ವರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಉಪನ್ಯಾಸ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ತೆಗ್ಗಿನಕೇರಾ ಸುನ್ನಿ ಮುಸ್ಲಿಮ್ ಪಂಚ್ ಕಮೀಟಿಯು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Please follow and like us:
error