ಸಿಜಿಕೆ ಬೀದಿರಂಗ ದಿನಾಚರಣೆ : ರಂಗ ಕಲಾವಿದೆ ಜಿ.ವಂದನಾರಿಗೆ ಸಿಜಿಕೆ ರಂಗ ಪುರಸ್ಕಾರ

ಕೊಪ್ಪಳ-ಸಿಜೆಕೆ-ಬೀದಿರಂಗದಿನಾಚರಣೆನಾಳೆ( ಜೂ. ೨೭) ಸಿಜಿಕೆ ಹುಟ್ಟುಹಬ್ಬ
ಕೊಪ್ಪಳದಲ್ಲಿ ಸಿಜಿಕೆ ಬೀದಿರಂಗ ದಿನಾಚರಣೆ : ರಂಗ ಕಲಾವಿದೆ ಜಿ.ವಂದನಾರಿಗೆ ಸಿಜಿಕೆ ರಂಗ ಪುರಸ್ಕಾರ
ಕೊಪ್ಪಳ ಜೂ. ೨೬: ಹೆಸರಾಂತ ರಂಗ ಕರ್ಮಿ ದಿವಂಗತ ಸಿಜಿಕೆ (ಸಿ ಜಿ ಕೃಷ್ಣಸ್ವಾಮಿ) ಅವರ ಹುಟ್ಟುಹಬ್ಬವನ್ನು ಸಿಜಿಕೆ ಬೀದಿರಂಗ ದಿನವನ್ನಾಗಿ ಜೂ. ೨೭ ರಂದು ಸೋಮವಾರ ರಾಜ್ಯಾದಾದ್ಯಂತ ಹಲವು ಸಂಘಟನೆಗಳು ವಿಶಿಷ್ಟವಾಗಿ ಆಚರಿಸುತ್ತಿವೆ.
ಕೊಪ್ಪಳದಲ್ಲಿ ಕವಿಸಮೂಹ ಬಳಗ ಹಾಗೂ ಕನ್ನಡನೆಟ್ ಡಾಟ್ ಕಾಂ ಬೆಂಗಳೂರಿನ ಕರ್ನಾಟಕ ಬೀದಿ ನಾಟಕ ಅಕಾಡೆಮಿ, ಅವಿರತ ಪುಸ್ತಕ ಹಾಗೂ ಬೆಂಗಳೂರು ಆರ್ಟ್ ಫೌಂಡೇಷನ್ ಸಹಯೋಗದಲ್ಲಿ ಬಹಾದ್ದೂರ ಬಂಡಿ ರಸ್ತೆಯ ಸರಸ್ವತಿ ವಿದ್ಯಾಮಂದಿರದಲ್ಲಿ ಸೋಮವಾರ ಮದ್ಯಾಹ್ನ ೩-೦೦ ಗಂಟೆಗೆ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ರಂಗಕಲಾವಿದೆ ಜಿ.ವಂದನಾ ಅವರಿಗೆ ಸಿಜಿಕೆ ರಂಗ ಪುರಸ್ಕಾರ ನೀಡಿ ಗೌರವಿಸಲಾಗುವುದು ಎಂದು ಕಾರ್ಯಕ್ರಮ ಸಂಚಾಲಕ, ಕನ್ನಡನೆಟ್ ಡಾಟ್ ಕಾಂ ಸಂಪಾದಕ ಎಚ್.ವಿ.ರಾಜಾಬಕ್ಷಿ ತಿಳಿಸಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೋರಾಟಗಾರ ಆರತಿ ತಿಪ್ಪಣ್ಣ ವಹಿಸುವರು. ಉದ್ಘಾಟನೆಯನ್ನು ಎ.ಎಂ.ಮದರಿ ಹಾಗೂ ಮುಖ್ಯ ಅತಿಥಿಗಳಾಗಿ ನಗರಸಭಾ ಸದಸ್ಯ ಮುತ್ತುರಾಜ್ ಕುಷ್ಟಗಿ, ನಾಟಕ ಅಕಾಡೆಮಿ ಸದಸ್ಯ ಹಾಲ್ಕುರಿಕೆ ಶಿವಶಂಕರ್, ಪಬ್ಲಿಕ್ ಟಿವಿ ಜಿಲ್ಲಾ ವರದಿಗಾರ ಮುಕ್ಕಣ್ಣ ಕತ್ತಿ ಉಪಸ್ಥಿತರಿವರು. ಕಾರ‍್ಯಕ್ರಮಕ್ಕೆ ಆಗಮಿಸಲು ಕವಿಸಮೂ ಸಂಚಾಲಕ ಸಿರಾಜ್ ಬಿಸರಳ್ಳಿ ಕೋರಿದ್ದಾರೆ.

Please follow and like us:
error