ಸಾಹಿತ್ಯ ಪ್ರಶಸ್ತಿಗಾಗಿ ಕನ್ನಡ ಪುಸ್ತಕಗಳಿಗೆ ಆಹ್ವಾನ

ವಿಶ್ವೇಶ್ವರಯ್ಯ ಪ್ರತಿಷ್ಠಾನವು ತನ್ನ ೨೪ನೇ ವರ್ಷದ ವಾರ್ಷಿಕೋತ್ಸವದ ಸವಿನೆನಪಿಗೆ, ಕನ್ನಡ ಸಾಹಿತ್ಯ ಕೃತಿಗಳನ್ನು ಆಹ್ವಾನಿಸಿದೆ.
ಈ ನಿಟ್ಟಿನಲ್ಲಿ ೨೦೧೪ ಹಾಗೂ ೨೦೧೫ನೇ ಸಾಲಿನಲ್ಲಿ ಪ್ರಕಟವಾದ ಕಥಾ ಸಂಕಲನ, ನಾಟಕ, ವಿಮರ್ಶೆ, ಕಾದಂಬರಿ, ಪ್ರವಾಸ ಸಾಹಿತ್ಯ., ವ್ಯಕ್ತಿ ಚರಿತ್ರೆ, ಜೀವನ ಚರಿತ್ರೆ, ವೈಚಾರಿಕ ಸಾಹಿತ್ಯ, ಅನುವಾದ ಸಾಹಿತ್ಯ, ಚುಟುಕು ಸಾಹಿತ್ಯ ಪ್ರಾಕಾರದಲ್ಲಿ, ಪ್ರಕಟವಾದ ಕೃತಿಗಳನ್ನು ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿಗೆ ಆಹ್ವಾನಿಸಿದೆ. ಪ್ರಶಸ್ತಿಯ ಮೊತ್ತ ೫೦೦೦ ರೂ. ನಗದು, ಸ್ಮರಣ ಫಲಕ, ಪ್ರಶಸ್ತಿ ಪತ್ರ ಹಾಗೂ ರಾಷ್ಟ್ರಮಟ್ಟದ ಸನ್ಮಾನವನ್ನು ಒಳಗೊಂಡಿದೆ. ಒಟ್ಟು ೧೦ ವಿಭಾಗದಲ್ಲಿ ಒಂದರಂತೆ ೧೦ ಕೃತಿಗಳನ್ನು ಆಯ್ಕೆ ಮಾಡಲಾಗುವುದು.
ವಿಶ್ವೇಶ್ವರಯ್ಯನವರ ಜನ್ಮದಿನವಾದ ಸಪ್ಟೆಂಬರ್ ೧೫ – ೨೦೧೬ ರಂದು ಬೆಂಗಳೂರು ನಗರದಲ್ಲಿ ಸಮಾರಂಭ ನಡೆಯಲಿದ್ದು, ೨ ವರ್ಷದಿಂದ ಒಟ್ಟು ೧೦ ಕೃತಿಗಳನ್ನು ಆಯ್ಕೆ ಮಾಡಲಾಗುತ್ತದೆ. ಲೇಖಕರು, ಪ್ರಕಾಶಕರು, ಆಸಕ್ತರು ೨೦೧೪-೧೫ನೇ ಸಾಲಿನಲ್ಲಿ ಪ್ರಕಟವಾದ ಪುಸ್ತಕದ ೩ ಪ್ರತಿ ಹಾಗೂ ಲೇಖಕರ ೨ ಭಾವಚಿತ್ರ ಮತ್ತು ಸಂಪೂರ್ಣ ಬಯೋಡಾಟಾದೊಂದಿಗೆ, ಜುಲೈ ೩೦-೨೦೧೬ ರೊಳಗೆ ಕೆಳಕಂಡ ವಿಳಾಸಕ್ಕೆ ಕಳುಹಿಸಲು ಕೋರಲಾಗಿದೆ.
ರಮೇಶ ಸುರ್ವೆ, ಅಧ್ಯಕ್ಷರು, ಭಾರತರತ್ನ ಸರ್. ಎಂ. ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಪ್ರತಿಷ್ಠಾನ ಟ್ರಸ್ಟ್ (ರಿ.), ನಂ. ೪೬೮, ೧೩ನೇ ಮುಖ್ಯರಸ್ತೆ, ೩ನೇ ಹಂತ, ಮಂಜುನಾಥನಗರ, ಬೆಂಗಳೂರು – ೫೬೦೦೧೦. ಮೊಬೈಲ್ : ೯೮೪೫೩೦೭೩೨೭.

Leave a Reply