ಕೊಪ್ಪಳ:-೨೯, ನಗರದ ಜಿಲ್ಲಾ ಕಾಂಗ್ರೆಸ್ ಕಾರ್ಯಲಯಕ್ಕೆ ಆಗಮಿಸಿ ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳನ್ನು ಪಕ್ಷದ ಕಾರ್ಯಕರ್ತರನ್ನು ಬೇಟಿ ಮಾಡಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಸಚಿವೆ ಶ್ರೀಮತಿ ಉಮಾಶ್ರೀಯವರು ಪಕೃತಿ ಮುನಿಸಿರುವುದರಿಂದ ಇಡೀ ರಾಷ್ಟ್ರದಲ್ಲೇ ಬರ ತಾಂಡವ ವಾಡುತ್ತಿದೆ. ಇದು ರಾಜ್ಯದಲ್ಲಿಯೂ ತನ್ನ ಕೆನ್ನಾಲಿಗೆಯನ್ನು ಚಾಚಿದೆ. ಸರ್ಕಾರ ಬರನಿರ್ವಹಣೆಗೆ ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿದ್ದು ರಾಜ್ಯದ ಜನತೆಗೆ ಎಲ್ಲಿಯೂ ನೀರಿನ ತೊಂದರೆಯಾಗದಂತೆ ಹಾಗೂ ಜಾನುವಾರುಗಳಿಗೆ ಮೇವೂ ಹಾಗೂ ನೀರಿನ ಕೊರತೆ ಉಂಟಾಗದಂತೆ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ರಾಜ್ಯದ ಜನಪ್ರೀಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು ರಾಜ್ಯದ ಉದ್ದಗಲಕ್ಕೂ ಬರ ಅಧ್ಯಾಯನಕ್ಕೆ ಪ್ರವಾಸ ಕೈಗೊಂಡಿದ್ದು ಬರನಿರ್ವಹಣೆಗೆ ಹಣದಕೊರತೆ ಉಂಟಾಗದಂತೆ ನೋಡಿಕೊಳ್ಳುತ್ತಿದಾರೆ. ಬರನಿರ್ವಹಣೆಗೆ ವಿಶೇಷ ಅನುದಾನ ನೀಡುತ್ತಿದ್ದು, ರಾಜ್ಯದ ಎಲ್ಲಾ ಸಚಿವರು ಬರಕಾಮಗಾರಿಗಳಲ್ಲಿ ವಿಶೇಷವಾಗಿ ಮುತವರ್ಜಿ ವಹಿಸುತ್ತಿದ್ದಾರೆ. ವಿರೋದ ಪಕ್ಷದವರು ಬರದಬಗ್ಗೆ ಮಾತನಾಡುತ್ತಿರುವುದು ಅನಿವಾರ್ಯ ಹಾಗೂ ಅದು ಅವರಿಗೆ ಅಗತ್ಯವಾಗಿದೆ. ರಾಜ್ಯದ ಮುಖ್ಯಮಂತ್ರಿಗಳು ತಮ್ಮ ೫ ವರ್ಷದ ಅವಧಿಯನ್ನು ಪೂರ್ಣಗೊಳಿಸಲಿದ್ದು ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಮುಂದಿನ ಚುನಾವಣೆ ಎದುರಿಸಲಿದ್ದು ಬರುವ ಅವಧಿಗೆ ಶ್ರೀ ಸಿದ್ದರಾಮಯ್ಯನವರೆ ನಾಡಿನ ಮುಖ್ಯಮಂತ್ರಿಗಳಾಗಲಿದ್ದಾರೆ. ಪಕ್ಷದ ಚುನಾಯಿತ ಪ್ರತಿನಿಧಿಗಳು ಮುಖಂಡರು, ಹಾಗೂ ಕಾರ್ಯಕರ್ತರು ಸರ್ಕಾರದ ಸಾದನೆಗಳನ್ನು ಜನತೆಗೆ ವಿವರವಾಗಿ ತಿಳಿಸಿ ವಿರೋಧ ಪಕ್ಷದವರಿಗೆ ನಮ್ಮ ಸರ್ಕಾರದ ಸಾಧನೆಗಳನ್ನು ಹೆಮ್ಮೆಯಿಂದ ಹೇಳಿಕೊಳ್ಳಲು ಹಿಂಜರಿಯಬಾರದು ಎಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಪ್ರಾಸ್ತಾವಿಕವಾಗಿ ಶಾಸಕ ಕೆ.ರಾಘವೇಂದ್ರ ಹಿಟ್ನಾಳರವರು ಮಾತನಾಡಿ ಕ್ಷೇತ್ರದಲ್ಲಿ ಈಗಾಗಲೇ ೧ ಗೋಶಾಲೆಯನ್ನು ಪ್ರಾರಂಭಿಸಲಾಗುವುದು. ನಗರ ಹಾಗೂ ಗ್ರಾಮಗಳಲ್ಲಿ ಕುಡಿಯುವ ನೀರಿನ ತೊಂದರೆಯಾಗದಂತೆ ಕಾರ್ಯನಿರ್ವಹಿಸಲಾಗುತ್ತಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಕೆ.ಬಸವರಾಜ ಹಿಟ್ನಾಳ, ಜಿ.ಪಂ.ಸದಸ್ಯರಾದ ಎಸ್.ಬಿ.ನಾಗರಳ್ಳಿ, ಪ್ರಾಧಿಕಾರದ ಅಧ್ಯಕ್ಷರಾದ ಜುಲ್ಲು ಖಾದ್ರಿ, ನಗರಸಭೆ ಅಧ್ಯಕ್ಷರಾದ ಮಹೇಂದ್ರ ಚೋಪ್ರಾ, ಪಕ್ಷದ ಮುಖಂಡರಾದ ಮರ್ದಾನಲಿ ಅಡ್ಡೇವಾಲಿ, ಹೆಚ್.ಎಲ್.ಹಿರೇಗೌಡ್ರು, ಶಾಂತಣ್ಣ ಮುದುಗಲ್, ಹನುಮರೆಡ್ಡಿ ಹಂಗನಕಟ್ಟಿ, ಗಾಳೆಪ್ಪ ಪೂಜಾರ, ಮುತ್ತುರಾಜ ಕುಷ್ಟಗಿ, ಮೌಲಾ ಹುಸ್ಸೇನ ಜಮೇದಾರ, ಶ್ರೀಮತಿ ಇಂದಿರಾಭಾವಿ ಕಟ್ಟಿ, ಶ್ರೀಮತಿ ಶಕುಂತಲಾ ಹುಡೇಜಾಲಿ, ಬಾಷುಸಾಬ ಕತೀಬ್, ಅರ್ಜುನಸಾ ಕಾಟ್ವಾ, ಕಾಟನ್ ಪಾಷಾ, ನಾಗರಾಜ ಬಳ್ಳಾರಿ, ಮಾನ್ವಿಪಾಷಾ, ಬಸವರಡ್ಡೆಪ್ಪ ಹಳ್ಳಿಕೇರಿ, ಇನ್ನೂ ಅನೇಕ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದು ಕೃಷ್ಣ ಇಟ್ಟಂಗಿ ಕಾರ್ಯಕ್ರಮ ನಿರೂಪಿಸಿ ಕೊನೆಗೆ ವಂದಿಸಿದರು.
ಸರ್ಕಾರದಿಂದ ಸಮರ್ಥವಾಗಿ ಬರನಿರ್ವಹಣೆ-ಸಚಿವೆ ಶ್ರೀಮತಿ ಉಮಾಶ್ರೀ.
Leave a Reply
You must be logged in to post a comment.