ಸರಸ್ವತಿ ವಿದ್ಯಾಮಂದಿರ ಶಾಲೆಯಲ್ಲಿ ಸಂಭ್ರಮದ ಟಿಪ್ಪು ಜಯಂತಿ

saraswati_vidyamandir_koppal
ಕೊಪ್ಪಳ: ೨೬೭ನೇ ಟಿಪ್ಪು ಜಯಂತಿಯನ್ನು ನಗರದ ಸರಸ್ವತಿ ವಿದ್ಯಾಮಂದಿರ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಸಡಗರ ಮತ್ತು ಸಂಭ್ರಮದಿಂದ ಆಚರಿಸಲಾಯಿತು.ಟಿಪ್ಪು ಸುಲ್ತಾನ್ ರ ಭಾವಚಿತ್ರಕ್ಕೆ ಪುಷ್ಪಾರ್ಪಣೆಮಾಡುವ ಮೂಲಕ ಸಂಸ್ಥೆಯ ಕಾರ್ಯದರ್ಶಿ ಆರ್.ಎಚ್.ಅತ್ತನೂರ ಕಾರ‍್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ಟಿಪ್ಪು ಸುಲ್ತಾನ್ ಒಬ್ಬ ವೀರ ರಾಜನಾಗಿದ್ದ ಬ್ರಿಟಿಷರ ಜೊತೆ ನಿರಂತರವಾಗಿ ೪ ಯುದ್ದಗಳನ್ನು ಮಾಡಿ ಅವರನ್ನು ಭಾರತದಿಂದ ಹೊಡೆದೋಡಿಸಲು ಪ್ರಯತ್ನಿಸಿದ ರಾಜ. ಟಿಪ್ಪು ಸುಲ್ತಾನ್ ಬ್ರಿಟಿಷರಿಗೆ ಸಿಂಹ ಸ್ವಪ್ನವಾಗಿದ್ದ. ರಾಷ್ಟ್ರರಕ್ಷಣೆಗಾಗಿ ತನ್ನ ಮಕ್ಕಳನ್ನೇ ಒತ್ತೆಯಿಟ್ಟಂತ ಧೀಮಂತ ತ್ಯಾಗಮಯಿ ರಾಜ. ಹಲವಾರು ಜನಪರ ಯೋಜನೆಗಳನ್ನು ಜಾರಿ ಮಾಡಿ ಜನರ ಅಭಿವೃದ್ದಿಗೆ ಪ್ರಯತ್ನಿಸಿದ್ದ. ಕಾವೇರಿ ನದಿಗೆ ಆಣೆಕಟ್ಟು ಕಟ್ಟಲು ಆ ಸಮಯದಲ್ಲೇ ಶಂಕುಸ್ಥಾಪನೆ ಮಾಡಿದ್ದ ಆತನ ತ್ಯಾಗ, ಬಲಿದಾನ, ಶೂರತನ ಎಲ್ಲರಿಗೂ ಸ್ಫೂರ್ತಿಯಾಗಬೇಕು ಎಂದು ಕರೆ ನೀಡಿದರು. ಇದೇ ಸಂದರ್ಭದಲ್ಲಿ ಶಿಕ್ಷಕರಾದ ಶರಣಪ್ಪ, ಜಿ.ಎಸ್.ಗೌಡರ, ಶ್ರೀಮತಿ ರೇಣುಕಾ ಅತ್ತನೂರ,ವಿದ್ಯಾರ್ಥಿ ಪಿರೋಜ್ ಟಿಪ್ಪು ಸುಲ್ತಾನ್ ಬದುಕಿನ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಪಾಲ್ಗೊಂಡಿದ್ದರು,

Please follow and like us:
error