ಸಂಸದ ಸಂಗಣ್ಣ ಕರಡಿಯವರ ಯೋಗ- ಯೋಗದಿನಾಚರಣೆ ನಿಮಿತ್ಯ ವಿಶೇಷ ವಿಡಿಯೋ

ಮೋದಿಯವರ ವಿಶ್ವ ಯೋಗ ದಿನಾಚರಣೆಗೆ ಮಾರು ಹೋಗಿರುವ ಈ ಸಂಸದ ನಿತ್ಯ ಕೂಡಾ ತಪ್ಪದೇ ಮನೆಯಲ್ಲಿ ಯೋಗದಲ್ಲಿ ತೊಡಗಿಕೊಂಡಿದ್ದಾರೆ.

koppal-mp-karadi-sanganna

Sanganna-Karadi-Koppal-Mp-yoga

ಹೀಗೆ ತಲೆ ಕೆಳಗೆ ಕಾಲನ್ನು ಮೇಲೆ ಎತ್ತಿ ನಿಂತಿರುವವರು ಇವರೇನು ಸಾಮಾನ್ಯ ಜನರಲ್ಲ. ಇವರು ಒಬ್ಬ ಸಂಸದ. ಮೋದಿಯವರ ವಿಶ್ವ ಯೋಗ ದಿನಾಚರಣೆಗೆ ಮಾರು ಹೋಗಿರುವ ಈ ಸಂಸದ ನಿತ್ಯ ಕೂಡಾ ತಪ್ಪದೇ ಮನೆಯಲ್ಲಿ ಯೋಗದಲ್ಲಿ ತೊಡಗಿಕೊಂಡಿದ್ದಾರೆ. ಈ ಸಂಸದರೇ ಕೊಪ್ಪಳ ಜಿಲ್ಲೆಯ ಸಂಸದ ಸಂಗಣ್ಣ ಕರಡಿ. ಮೊದ ಮೊದಲು ಮನೆಯಲ್ಲಿ ವ್ಯಾಯಾಮ ಮಾಡಿಕೊಂಡಿದ್ದವರು ಈಗ ಯೋಗದತ್ತ ಒಲವು ಹರಿಸಿದ್ದಾರೆ. ಪ್ರತಿ ದಿನ ಬೆಳಿಗ್ಗೆ ೫.೩೦ ರಿಂದ ೬.೩೦ ರ ವರೆಗೆ ಯೋಗಾಬ್ಯಾಸದಲ್ಲಿ ತೊಡಗಿಕೊಳ್ಳುತ್ತಾರೆ. ಅವರ ಎಷ್ಟೇ ಬ್ಯೂಸಿ ಸೆಡ್ಯೂಲ್ ಇದ್ದರೂ ಕೂಡಾ ಯೋಗಾಸನ ಮಾಡುವದನ್ನು ತಪ್ಪಿಸುವುದಿಲ್ಲ.. ಕೆಲವೊಮ್ಮೆ ಕೆಲಸದ ನಿಮಿತ್ತ ದಿಲ್ಲಿ ಬೆಂಗಳೂರು ಎಲ್ಲಿಗೆ ಹೋದರೂ ಕೂಡಾ ನಿತ್ಯ ಯೋಗಾಸನ ಮಾಡುತ್ತಾರೆ. ಯೋಗಾಸನದಿಂದ ಆರೋಗ್ಯದಲ್ಲಿ ಯಾವದೇ ಏರು ಪೇರಾಗುವದಿಲ್ಲ. ಮನಸ್ಸನ್ನು ಹಿಡಿತದಲ್ಲಿಟ್ಟುಕೋಳ್ಳಲು ಸಾದ್ಯ ಹೀಗಾಗಿ ನಾನು ಪ್ರತಿದಿನ ಯೋಗಾಸನ ಮಾಡುತ್ತೇನೆ ಎನ್ನುತ್ತಾರೆ ಸಂಸದ ಸಂಗಣ್ಣ ಕರಡಿ.

ಪ್ರದಾನಿಯವರ ಯೋಗದಿಂದ ಪ್ರಭಾವಿತರಾದ ಸಂಗಣ್ಣ ಕರಡಿ ತಾವು ಕೂಡಾ ಯೋಗಾಭ್ಯಾಸ ಮಾಡಬೇಕು ಎಂದು ಆಲೋಚಿಸಿದರು. ಆರಂಭದಲ್ಲಿ ಯೋಗದ ಆಸಗಳಾವವು ಎಂಬುದು ಇವರಿಗೆ ತಿಳಿಯದ ಹಿನ್ನಲೆಯಲ್ಲಿ ಯೋಗ ಗುರುಗಳನ್ನು ಹುಡುಕಲು ಆರಂಭಿಸಿದಾಗ ಇವರಿಗೆ ಸಿಕ್ಕಿದ್ದು ಅಶೋಕ ಶಿಕ್ಷಕ. ಇವರು ಕೊಪ್ಪಳ ನಗರದ ವಿವಿಧ ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ಯೋಗಾಸನವನ್ನು ಹೇಳಿ ಕೊಡುತ್ತಿದ್ದರು ಇವರನ್ನು ತಮ್ಮ ಮನೆಗೆ ಕರೆಯಿಸಿ ತಮಗೂ ಕೂಡಾ ಯೋಗಾಸನದ ಕುರಿತು ಹೇಳಿ ಕೋಡಿ ಎಂದು ಕೇಳಕೊಂಡರು. ಇನ್ನು ಯೋಗಾಸನ ಮಾಡಲು ನನಗೆ ಬೇರೆಡೆ ಬರಲು ಆಗುವದಿಲ್ಲ ನೀವೇ ನಿಮ್ಮ ಸಮಯವನ್ನು ಬಿಡುವ ಮಾಡಿಕೊಂಡು ನಮ್ಮ ಮನೆಗೆ ಬಂದು ಯೋಗಾಸನ ಕಲಿಸಿ ಕೋಡಬೇಕು ಎಂದು ಕೇಳಿಕೊಂಡರು ಸಂಗಣ್ಣ ಕರಡಿ. ಇದಕ್ಕೆ ಒಪ್ಪಿದ ಅವರು ಕಳೆದ  ಒಂದು ವರೆ ವರ್ಷದಿಂದ ಸಂಗಣ್ಣ ಕರಡಿ ಅವರ ಮನೆಗೆ ಬಂದು ಯೋಗಾಸನವನ್ನು ಕಲಿಸಿ ಕೋಡುತ್ತಿದ್ದಾರೆ. ಸಂಗಣ್ಣ ಕರಡಿ ಅವರು ಯೋಗಾಸನದ ಆಸವನ್ನು ಅರಗಿಸಿಕೋಂಡಿದ್ದಕ್ಕೆ ಅವರು ಕೂಡಾ ಹರ್ಷ ವ್ಯಕ್ತ ಪಡಿಸುತ್ತಿದ್ದಾರೆ.. Watch this video

Please follow and like us:
error