ಶ್ರೀ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಚೈತನ್ಯ ರಥ ಯಾತ್ರೆ ನ.೨೬ ರಂದು ಕೊಪ್ಪಳದಲ್ಲಿ ಬೃಹತ್ ಮೆರವಣಿಗೆ

ಕೊಪ್ಪಳ, ನ.೨೩ : ಕೂಡಲಸಂಗಮದಲ್ಲಿ ನಡೆಯುವ ರಾಷ್ಟ್ರೀಯ ವಿಚಾರಸಂಕಿರಣದ ಜಾಗೃತಿಗಾಗಿ ಸಾದ್ವಿ ಶಿರೋಮಣಿ ಶ್ರೀ ಶಿವಶವರಣೇ ಹೇಮರಡ್ಡಿ ಮಲ್ಲಮ್ಮ ಚೈತನ್ಯ ರಥಯಾತ್ರೆ ನ. ೨೬ ರಂದು ಬೆಳಗ್ಗೆ ಕೊಪ್ಪಳಕ್ಕೆ ಆಗಮಿಸಲಿದೆ ಎಂದು ರಡ್ಡಿ ಸಮಾಜದ ತಾಲೂಕು ಅಧ್ಯಕ್ಷ ಪ್ರಭು ಹೆಬ್ಬಾಳ ಅವರು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಡಿ. ೧೧ ರಂದು ಕೂಡಲಸಂಗಮದಲ್ಲಿ ಶ್ರೀ ಶಿವಶರಣೇ ಹೇಮರಡ್ಡಿ ಮಲ್ಲಮ್ಮ ಬದುಕಿನ ಕುರಿತು ವಿಚಾರಸಂಕಿರಣ ನಡೆಯಲಿದೆ. ಇದರ ಜಾಗೃತಿಗಾಗಿ ರಥಯಾತ್ರೆ ಶ್ರೀಶೈಲದಿಂದ ಹೊರಟಿದ್ದು, ಈಗ ರಾಜ್ಯವಾಪಿ ಸಂಚರಿಸುತ್ತಿದೆ.

hemareddy_mallamma_rathayatra
ಈಗಾಗಲೇ ಜಿಲ್ಲೆಯ ಗಂಗಾವತಿ, ಕನಕಗಿಯಲ್ಲಿ ಸಂಚಾರ ಮಾಡುತ್ತಿರುವ ರಥಯಾತ್ರೆ ಕೊಪ್ಪಳಕ್ಕೆ ನ. ೨೬ ರಂದು ಬೆಳಗ್ಗೆ ೮ ಗಂಟೆಗೆ ಆಗಮಿಸಲಿದೆ.
ನಗರದ ಗವಿಮಠದಿಂದ ಗಡಿಯಾರಕಂಬ, ಅಶೋಕವೃತ್ತ ಸೇರಿದಂತೆ ಪ್ರಮುಖ ಬೀದಿಯುದ್ದಕ್ಕೂ ಬೃಹತ್ ಮೆರವಣಿಗೆ ಸಾಗಲಿದೆ. ಈ ವೇಳೆಯಲ್ಲಿ ರಾಜ್ಯದ ನಾನಾ ಭಾಗಗಳ ಕಲಾತಂಡಗಳು, ವಿವಿಧ ವಾದ್ಯವೃಂದಗಳು, ಕುಂಭ, ಕಳಸ ಸೇರಿದಂತೆ ಅದ್ಧೂರಿ ಮೆರವಣಿಗೆಯನ್ನು ನಡೆಸಲಾಗುತ್ತದೆ.
ಮೆರವಣಿಗೆಗೆ ತಾಲೂಕಿನ ಎಲ್ಲಾ ಹಳ್ಳಿಗಳಿಂದ ಸಮಾಜ ಬಾಂಧವರು, ಇತರರು ಸೇರಿದಂತೆ ಬೃಹತ್ ಸಂಖ್ಯೆಯಲ್ಲಿ ಆಗಮಿಸಲು ವಿನಂತಿ. ನಂತರ ಕಿನ್ನಾಳ ರಸ್ತೆಯಲ್ಲಿರುವ ಹೇಮರಡ್ಡಿ ಮಲ್ಲಮ್ಮ ನಗರದಲ್ಲಿರುವ ಶ್ರೀ ಶಿವಶರಣೇ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದಲ್ಲಿ ಸಮಾರಂಭ ನಡೆಯಲಿದೆ. ಪ್ರಸಾದ ವ್ಯವಸ್ಥೆಯನ್ನು ಮಾಡಲಾಗಿದ್ದು. ಭಕ್ತಾಧಿಗಳು ಅಧಿಕ ಸಂಖೆಯಲ್ಲಿ ಆಗಮಿಸುವಂತೆ ಕೋರಲಾಗಿದೆ.
———–

Please follow and like us:
error