You are here
Home > Koppal News-1 > ಶ್ರೀ ಯಾಜ್ಞವಲ್ಕ್ಯ ಗುರುಗಳ ಜಯಂತಿ ನಿಮಿತ್ಯ ಬೃಹದಾರಣ್ಯಕ ಉಪನಿಷತ್ ಪ್ರವಚನ

ಶ್ರೀ ಯಾಜ್ಞವಲ್ಕ್ಯ ಗುರುಗಳ ಜಯಂತಿ ನಿಮಿತ್ಯ ಬೃಹದಾರಣ್ಯಕ ಉಪನಿಷತ್ ಪ್ರವಚನ

ಕೊಪ್ಪಳ, ೧೪- yajnavalka ವೇದಗಳ ನದಿಯನ್ನೆ ಹರಿಸಿದ ಮಹಾ ತಪಸ್ವಿ ಸಾಧಕರಾದ ಶ್ರೀ ಯಾಜ್ಞವಲ್ಕ್ಯ ಗುರುಗಳು ವಿಶ್ವದ ಶ್ರೇಷ್ಠ ವೃಷಿಗಳು ಎಂದು ಪಂ.ರಘು ಪ್ರೇಮಾಚಾರ್ಯ ಮುಳಗುಂದ ಹೇಳಿದರು.
ಅವರು ಮಂಗಳವಾರ ದಂದು ನಗರದ ಶ್ರೀವಿಠ್ಠಲ ಕೃಷ್ಣ ದೇವಸ್ಥಾನದಲ್ಲಿ ಶ್ರೀಮದ್ಯೋಗೀಶ್ವರ ಯಾಜ್ಞವಲ್ಕ್ಯ ಪ್ರತಿಷ್ಠಾನ ದಿಂದ ಹಮ್ಮಿಕೊಂಡಿದ್ದ ಶ್ರೀ ಯಾಜ್ಞವಲ್ಕ್ಯ ಗುರುಗಳ ಜಯಂತಿ ನಿಮಿತ್ಯ ಬೃಹದಾರಣ್ಯಕ ಉಪನಿಷತ್ ಪ್ರವಚನ ನೀಡಿದರು.
ಯಾಜ್ಞವಲ್ಕ್ಯರು ಸಾಕ್ಷತ ಪರಮಾತ್ಮ ಅವತಾರ ಶ್ರೀ ಸೂರ್ಯದೇವರ ಪರಮಾವತಾರ ಅವರಿಂದ ನೇರವಾಗಿ ವಿದ್ಯೆಯನ್ನು ಪಡೆದ ಪರಮ ತಪಸ್ವಿ ಎಂದು ಹೇಳಿದರು.
ವೃಷಿಗಳ ಸಾಧನೆಗೆ ಅವರು ರಚಿಸಿದ ಉಪನಿಷತ್ ಹಾಗೂ ವೇದಗಳೆ ಸಾಕ್ಷಿ ಅವರು ರಚಿಸಿದ ನಮಗೆ ನೀಡಿದ ಶುಖ್ಲ ಯಜುರ್ವೇದವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿ ಯೊಬ್ಬರ ಮೇಲಿದೆ. ಪಾಠಶಾಲೆ ಯನ್ನು ಪ್ರಾರಂಭಿಸಿ ವೇದ ಉಳಿಸಿ ಎಂದು ಹೇಳಿದರು.
ಶ್ರೀ ಯಾಜ್ಞವಲ್ಕ್ಯರು ಮೂವರು ಪತ್ನಿಯರನ್ನು ಹೊಂದಿದ್ದರು. ಸಂಸಾರದೊಂದಿಗೆ ಸಾಧನೆ ಮಾಡಿ ವಿಶ್ವಕ್ಕೆ ಸಾಧನೆಗೆ ಯಾವುದು ಅಡ್ಡಿ ಆಗ ದು ಎಂಬ ಮಾತನ್ನು ಸಾರಿದ ಚೇತನರು ಅವರ ಸಾಧನೆ ಅವರ ತಪ ಶಕ್ತಿಯನ್ನು ತೋರುತ್ತದೆ ಎಂದು ಹೇಳಿದರು.
ಭಜನೆ : ದೇವಸ್ಥಾನದಲ್ಲಿ ಶ್ರೀ ಮೈತ್ರೇಯ ಭಜನಾ ಮಂಡ ಳಿಯಿಂದ ಒಂದು ತಾಸುಗಳ ಕಾಲ ಶ್ರೀ ಯಾಜ್ಞವಲ್ಕ್ಯ ಗುರುಗಳ ನಾಮ ಸ್ಮರಣೆ ಎರಡು ನೂರಕ್ಕೂ ಹೆಚ್ಚು ಮಹಿಳೆಯರಿಂದ ಎಕಕಾಲಕ್ಕೆ ನಡೆಯಿತು.
ಶ್ರೀ ಯಾಜ್ಞವಲ್ಕ್ಯ ಗುರುಗಳ ಜಯಂತಿ ಅಂಗವಾಗಿ ಸೋಮವಾರ ರಾತ್ರಿ ಗುರುಗಳ ಭಾವ ಚಿತ್ರ ಮೆರವಣಿಗೆ, ಭಜನೆ, ಕೋಲಾಟ ಜರುಗಿದವು. ಮಂಗ ಳವಾರ ಬೆಳಿಗ್ಗೆ ತೊಟ್ಟಿಲು ಸೇವೆ ಶ್ರೀ ವಿಠ್ಠಲ ಕೃಷ್ಣ ಹಾಗೂ ಶ್ರೀಪ್ರಾಣದೇವರಿಗೆ ಪಂಚಾಮೃತ ಅಭಿಕ್ಷೇಕ ಶ್ರೀಗುರುಗಳ ಅಷ್ಟೋತ್ತರ ತೀರ್ಥ-ಪ್ರಸಾದ ಜರುಗಿತು.
ಕಾರ್ಯಕ್ರಮವನ್ನು ಪ್ರತಿಷ್ಠಾನದ ಕಾರ್ಯದರ್ಶಿ ವೇಣುಗೋಪಾಲ ಜಹಗೀರದಾರ ನಿರೂಪಿಸಿ ನಿರ್ವಹಿಸಿದರು. ಸಂಜೆ ಸೇವಾಕರ್ತರಿಗೆ ಫಲ ಮಂತ್ರಾಕ್ಷತಿ ನೀಡಲಾಯಿತು ಎಂದು ಪ್ರತಿಷ್ಠಾನದ ಅಧ್ಯಕ್ಷ ರಮೇಶ ಜಹಗಿರದಾರ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.

Leave a Reply

Top