ಶ್ರೀನಿವಾಸ ಪಂಡಿತಗೆ ಶ್ರೀ ವಿಶ್ವಕರ್ಮ ಪ್ರಶಸ್ತಿ

vishwa_karma

ಧಾರವಾಡದಲ್ಲಿ ನಡೆದ ಸಮಗ್ರ ಕರ್ನಾಟಕ ವಿಶ್ವಕರ್ಮ ಸಮಾಜದ ವತಿಯಿಂದ ೬ನೇ ಶ್ರೀ ವಿಶ್ವಕರ್ಮ ಮಹೋತ್ಸವ ಕಾರ್ಯಕ್ರಮ ಪಾಟೀಲ ಪುಟ್ಟಪ್ಪ ಸಭಾ ಭವನದಲ್ಲಿ ನೆರವೇರಿಸಲಾಯಿತು. ಇದೇ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹನೀಯರಿಗೆ ಗೌರವಿಸಿ ಪ್ರಶಸ್ತಿ ನೀಡಲಾಯಿತು. ಅಂತರ್‌ರಾಷ್ತ್ರ್ರೀಯ ಮಟ್ಟದಲ್ಲಿ ಕರಾಟೆ ಕ್ರೀಡೆಯಲ್ಲಿ ಹೆಸರು ಮಾಡಿದ ಕೊಪ್ಪಳ ನಗರದ ಕರಾಟೆ ಪಟು ಶ್ರೀನಿವಾಸ ಪಂಡಿತ ಇವರನ್ನು ಸಚಿವರಾದ ವಿನಯ ಕುಲಕರ್ಣಿ ಸಂಸದ  ಪ್ರಲ್ಹಾದ ಜೋಷಿ ಅವರು ಶ್ರೀ ವಿಶ್ವಕರ್ಮ ಪ್ರಶಸ್ತಿ ಪ್ರದಾನ ಮಾಡಿದರು. ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಶ್ರೀಮತಿ ಸೀಮಾ ಮಸೂತಿ, ಅ ಭಾ ವಿ ಸ. ರಾಷ್ಟ್ರೀಯ ಉಪಾಧ್ಯೆಕ್ಷರಾದ  ಸಂತೋಷ ಬಡಿಗೇರ, ಶ್ರೀ ಮೌನೇಶ್ವರ ಸ್ವಾಮಿಜಿ ಮತ್ತು ವೇದ ಬ್ರಹ್ಮ ಶ್ರೀ ರಮೇಶ ಶರ್ಮಾ ಗುರೂಜಿ, ಇನ್ನಿತರ ರಾಜಕೀಯ ಮುಖಂಡರುಗಳು ಉಪಸ್ಥಿತರಿದ್ದರು.

Please follow and like us:
error