You are here
Home > Koppal News-1 > ಶ್ರೀಗವಿಮಠದಲ್ಲಿ ಅಕ್ಷರಾಭ್ಯಾಸ

ಶ್ರೀಗವಿಮಠದಲ್ಲಿ ಅಕ್ಷರಾಭ್ಯಾಸ

ಕೊಪ್ಪಳ : ಸಂgavimath-sri srigavimath-koppal-aksharabhyasಸ್ಥಾನ ಶ್ರೀಗವಿಮಠದಲ್ಲಿ ದಿನಾಂಕ ೨೭-೦೫-೨೦೧೬ ರಂದು ಶುಕ್ರವಾರ ಬೆಳಿಗ್ಗೆ ೯ ರಿಂದ ೧೧.೩೦ ರವರೆಗೆ ಶ್ರೀಮ.ನಿ.ಪ್ರ.ಜ ಶ್ರೀಗವಿಸಿದ್ದೇಶ್ವರ ಮಹಾಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ಹೊಸದಾಗಿ ಶಾಲೆಗೆ ಪ್ರವೇಶ ಪಡೆಯುವದಕ್ಕಿಂತ ಮುಂಚಿತವಾಗಿನ ಮಕ್ಕಳಿಗೆ ಅಕ್ಷರಾಭ್ಯಾಸ ಪ್ರಾರಂಭ ಮಾಡಿಸುವಂತಹ ಕಾರ್ಯಕ್ರಮ ನೂತನ ದಾಸೋಹ ಭವನದಲ್ಲಿ ಜರುಗಿತು.
ಈ ಸಂದರ್ಭದಲ್ಲಿ ಪೂಜ್ಯರು ಮಾತನಾಡಿ ಎಲ್ಲಾ ಪಾಲಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸಿಕೊಟ್ಟು ತಮ್ಮ ಮಕ್ಕಳನ್ನೇ ಆಸ್ತಿಯನ್ನಾಗಿಸಬೇಕು. ಈ ನಾಡಿನ ಪ್ರತಿಯೊಬ್ಬ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ಏಕೆಂದರೆ ಅಕ್ಷರ ಕ್ರಾಂತಿ ಮನುಷ್ಯನ ಬದುಕನ್ನು ಬದಲಿಸಬಹುದು. ಇಂದು ಅಕ್ಷರಾಭ್ಯಾಸ ಮಾಡಿಸಿಕೊಂಡ ಮಕ್ಕಳು ನಾಳೆ ದೊಡ್ಡ ದೊಡ್ಡ ಸ್ಥಾನಕ್ಕೇರುವಂತಾಗಲಿ ಎಂದು ಆಶಿರ್ವದಿಸಿದರು.
ನಗರ ಹಾಗೂ ವಿವಿಧ ಗ್ರಾಮಗಳ ಭಕ್ತಾಧಿಗಳು ತಮ್ಮ ಮಕ್ಕಳನ್ನು ಈ ಅಕ್ಷರಾಭ್ಯಾಸ ಕಾರ್ಯಕ್ರಮಕ್ಕೆ ಕರೆತಂದು ಪೂಜ್ಯ ಶ್ರೀಗಳ ಹಸ್ತಾಕ್ಷರಗಳಿಂದ ತಮ್ಮ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿದರು.

Leave a Reply

Top