ಶೌಚಾಲಯ ನಿರ್ಮಿಸಿಕೊಳ್ಳುವಂತೆ ಗ್ರಾಮಸ್ಥರ ಮನವೊಲಿಕೆ

ಜಿಲ್ಲೆಯ ಆಯ್ದ ೪೭ ಗ್ರಾಮ ಪಂಚಾಯಿತಿಗಳನ್ನು ಡಿಸೆಂಬರ್ ಅಂತ್ಯದೊಳಗೆ ಸಂಪೂರ್ಣ ಬಯಲು ಬಹಿರ್ದೆಸೆ ಮುಕ್ತ ಗ್ರಾಮ ಪಂಚಾಯತಿkoppal_news_koppal_zpಗಳನ್ನಾಗಿಸಲು, ಈ ಗ್ರಾಮಗಳಲ್ಲಿ ಶೌಚಾಲಯ ನಿರ್ಮಿಸಿಕೊಳ್ಳುವಂತೆ ಗ್ರಾಮಸ್ಥರ ಮನವೊಲಿಕೆ ಕಾರ್ಯವನ್ನು ತೀವ್ರಗೊಳಿಸಲಾಗಿದೆ ಎಂದು ಜಿಲ್ಲಾ ಪಂಚಾಯತಿ ಯೋಜನಾ ನಿರ್ದೇಶಕ ರವಿ ಬಸರಿಹಳ್ಳಿ ತಿಳಿಸಿದ್ದಾರೆ.
ಜಿಲ್ಲೆಯನ್ನು ಬಯಲು ಬಹಿರ್ದೆಸೆ ಮುಕ್ತ ಮಾಡುವ ನಿಟ್ಟಿನಲ್ಲಿ ಕಳೆದ ತಿಂಗಳು, ಸಮುದಾಯ ಆಧಾರಿತ ಸಂಪೂರ್ಣ ಸ್ವಚ್ಛತೆ ಬಗ್ಗೆ ತರಬೇತಿ ಪಡೆದಿದ್ದ ಗ್ರಾ.ಪಂ ಅಧ್ಯಕ್ಷರು, ಪಿಡಿಒ ಗಳು ಹಾಗೂ ಪ್ರೇರೇಪಕರು ತಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪರಿಣಾಮಕಾರಿಯಾಗಿ ಪ್ರಚೋದನಾ ಕಾರ್ಯ ಮಾಡುತ್ತಿದ್ದು, ಬೆಳಿಗ್ಗೆ ಗ್ರಾಮಗಳಿಗೆ ಭೇಟಿ ಮಾಡಿ ಬಯಲು ಶೌಚಕ್ಕೆ ಹೋಗುವ ಗ್ರಾಮಸ್ಥರನ್ನು ತಡೆದು ನಿರಂತರ ಪ್ರಚೋದನಾಕಾರ್ಯದ ಮೂಲಕ ಮನವೊಲಿಸಲಾಗುತ್ತದೆ.
ಜಿ.ಪಂ ಯೋಜನಾ ನಿರ್ದೇಶಕ ರವಿ ಬಸರಿಹಳ್ಳಿ ಅವರು, ಪ್ರಚೋದನಾ ಕಾರ್ಯದ ಪರಿಶೀಲನೆಗೆ ಕುಣಿಕೇರಿ, ಹಲಗೇರಿ, ಮತ್ತು ಕೋಳೂರು ಗ್ರಾ.ಪಂ ಗಳಿಗೆ ಭೇಟಿ ನೀಡಿ ಪ್ರಚೋದನಾ ಕಾರ್ಯ ಪರಿಶೀಲಿಸಿದ್ದು, ಬಯಲು ಶೌಚಕ್ಕೆ ಹೋಗುವುದನ್ನು ತಡೆಯುವಂತೆ ಪ್ರೇರೇಪಕರಿಗೆ ಸೂಚಿಸಿದರು. ಕೊಪ್ಪಳ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಮೂರ್ತಿ ಅವರು, ಗುಳದಳ್ಳಿ ಗ್ರಾ.ಪಂ ಗೆ ಭೇಟಿ ನೀಡಿ ಪ್ರೇರೇಪಕರ ಕಾರ್ಯವನ್ನು ಪರಿಶೀಲಿಸಿದರು. ೪೭ ಗ್ರಾಮಗಳ ಪೈಕಿ ಕೊಪ್ಪಳ ತಾಲೂಕಿನ ಗುಳದಳ್ಳಿ, ಹಾಲವರ್ತಿ, ಕುಣಿಕೇರಿ, ಹಲಗೇರಿ, ಲೇಬಗೇರಿ, ಕಲ್‌ತಾವರಗೇರಾ, ಬೇವಿನಹಳ್ಳಿ, ಹಿಟ್ನಾಳ, ಹಟ್ಟಿ, ಅಗಳಕೇರಾ, ಬಂಡಿಹರ್ಲಾಪುರ, ಬಿಸರಳ್ಳಿ, ಗಂಗಾವತಿ ತಾಲೂಕಿನ ಚಿಕ್ಕಡಣಕಲ್, ಆಗೋಲಿ, ಹೊಸಕೇರಾ, ಸುಳೇಕಲ್, ಸಿದ್ದಾಪುರ, ಶ್ರೀರಾಮನಗರ, ಮುಸ್ಟೂರು, ಜೀರಾಳ, ಕುಷ್ಟಗಿ ತಾಲೂಕಿನ ಕೊರಡಕೇರಾ, ಕಂದಕೂರು, ಹನುಮನಾಳ, ಯಲಬುರ್ಗಾ ತಾಲೂಕಿನ ಮಾಟಲದಿನ್ನಿ, ಹಿರೇಬಿಡನಾಳ ಗ್ರಾಮಗಳಲ್ಲಿ ಪರಿಣಾಮಕಾರಿ ಪ್ರಚೋದನಾ ಕಾರ್ಯವನ್ನು ನಿರಂತರವಾಗಿ ಕೈಗೊಳ್ಳಲಾಗುತ್ತಿದೆ.
ಪ್ರತಿ ಗ್ರಾಮಗಳಲ್ಲಿ ಜಾಗೃತಿ ತಂಡ ರಚನೆ ಮಾಡಲಾಗಿದ್ದು, ಗ್ರಾಮದ ಸದಸ್ಯರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಗ್ರಾಮದ ಮುಖಂಡರು, ಯುವಕರು, ಮಹಿಳೆಯರು ಹಾಗೂ ಮಕ್ಕಳನ್ನು ಒಳಗೊಂಡ ಸಮಿತಿಯು ಪ್ರತಿದಿನ ಗ್ರಾಮದ ಸ್ವಚ್ಛತೆ ಕುರಿತು ಶೌಚಕ್ಕೆ ತೆರಳುವ ಜನರನ್ನು ತಡೆದು ಮನವೊಲಿಸಲಾಗುತ್ತಿದೆ. ಈ ಜಾಗೃತಿ ಸಮಿತಿಯನ್ನು ಗ್ರಾ.ಪಂ ಅಭಿವೃದ್ಧಿ ಅಧಿಕಾರಿ/ಕಾರ್ಯದರ್ಶಿ, ಎಸ್‌ಬಿಎಂ ಜಿಲ್ಲಾ ಸಮಾಲೋಚಕರು , ಎನ್‌ಆರ್‌ಎಲ್‌ಎಂ ಸಿಬ್ಬಂದಿ ಪರಿಶಿಲಿಸುತ್ತದೆ ಎಂದು ಜಿ.ಪಂ ಯೋಜನಾ ನಿರ್ದೇಶಕರು  ತಿಳಿಸಿದ್ದಾರೆ.

Please follow and like us:
error