You are here
Home > Koppal News-1 > ಶೌಚಾಲಯ ನಿರ್ಮಾಣ ಜಾಗೃತಿ : ಮುಧೋಳದಲ್ಲಿ ಹೋಬಳಿ ಮಟ್ಟದ ಕಾರ್ಯಗಾರ

ಶೌಚಾಲಯ ನಿರ್ಮಾಣ ಜಾಗೃತಿ : ಮುಧೋಳದಲ್ಲಿ ಹೋಬಳಿ ಮಟ್ಟದ ಕಾರ್ಯಗಾರ

swacha-bharat ಯಲಬುರ್ಗಾ ತಾಲೂಕಿನ ಎಲ್ಲ ೩೭ ಗ್ರಾಮ ಪಂಚಾಯತಿಗಳು ೨೦೧೬ ರ ಡಿಸೆಂಬರ್ ಒಳಗಾಗಿ ಬಯಲು ಬಹಿರ್ದೆಸೆ ಮುಕ್ತ ಗ್ರಾಮಗಳನ್ನಾಗಿಸಲು ಎಲ್ಲ ಸಾರ್ವಜನಿಕರು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಹಕಾರ ನೀಡಬೇಕು ಎಂದು ಯಲಬುರ್ಗಾ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಕೆ. ತಿಮ್ಮಪ್ಪ ಅವರು ಮನವಿ ಮಾಡಿದರು.
ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಯಲಬುರ್ಗಾ ತಾಲೂಕು ಮುಧೋಳ ಗ್ರಾಮದ ಪಂಚಾಯತಿ ಆವರಣದಲ್ಲಿ ಮಂಗಳವಾರದಂದು ಏರ್ಪಡಿಸಲಾಗಿದ್ದ ಹೋಬಳಿ ಮಟ್ಟದ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಎಲ್ಲ ಕುಟುಂಬಗಳು ವಯಕ್ತಿಕ ಶೌಚಾಲಯ ಹೊಂದುವುದು ಬಹು ಮುಖ್ಯವಾಗಿದೆ. ಆದರೆ ಕೆಲವು ಕುಟುಂಬಗಳು ಇನ್ನೂ ಬಯಲು ಬಹಿರ್ದೆಸೆಯನ್ನೆ ಅವಲಂಬಿಸಿರುವುದು, ಸಮುದಾಯ ಆರೋಗ್ಯ ಕಾರ್ಯಕ್ರಮಗಳಿಗೆ ತೊಡಕುಂಟಾಗಿದೆ. ಬರುವ ಡಿಸೆಂಬರ್ ೩೧ ರ ಒಳಗಾಗಿ ಯಲಬುರ್ಗಾ ತಾಲೂಕನ್ನು ಬಯಲು ಬಹಿರ್ದೆಸೆ ಮುಕ್ತ ತಾಲೂಕನ್ನಾಗಿ ನಿರ್ಮಿಸುವ ಗುರಿಯನ್ನು ಹೊಂದಲಾಗಿದೆ. ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ವಯಕ್ತಿಕ ಶೌಚಾಲಯ ನಿರ್ಮಿಸಲು ಪರಿಶಿಷ್ಟ ಜಾತಿ/ ಪ.ಪಂಗಡದವರಿಗೆ ೧೫ ಸಾವಿರ ರೂ. ಹಾಗೂ ಇತರೆ ವರ್ಗದವರಿಗೆ ೧೨ ಸಾವಿರ ರೂ. ಸಹಾಯಧನ ನೀಡಲಾಗುತ್ತಿದೆ. ಗ್ರಾಮ ಪಂಚಾಯತಿಗಳಲ್ಲಿನ ಜನಪ್ರತಿನಿಧಿಗಳಿಗೆ ಈ ನಿಟ್ಟಿನಲ್ಲಿ ಹೆಚ್ಚಿನ ಜವಾಬ್ದಾರಿ ಇದ್ದು, ವಯಕ್ತಿಕ ಶೌಚಾಲಯ ನಿರ್ಮಿಸಲು ಶೌಚಾಲಯ ರಹಿತ ಕುಟುಂಬಗಳಿಗೆ ಮನವೊಲಿಸಬೇಕಿದೆ. ಎಲ್ಲ ಸಾರ್ವಜನಿಕರು, ಜನಪ್ರತಿನಿಧಿಗಳು, ಅಧಿಕಾರಿಗಳು ಇದಕ್ಕೆ ಹೆಚ್ಚಿನ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಕಾರ್ಯಗಾರದಲ್ಲಿ ಹೋಬಳಿ ಮಟ್ಟದ ವ್ಯಾಪ್ತಿಯ ಗ್ರಾಮ ಪಂಚಾಯತಿಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ತಾ.ಪಂ. ಸದಸ್ಯರು, ಶಾಲಾ ಮುಖ್ಯೋಪಾಧ್ಯಯರು, ಪಿಡಿಓ ಗಳು, ಸ್ವ-ಸಹಾಯ ಸಂಘಗಳ ಪದಾಧಿಕಾರಿಗಳು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.

Leave a Reply

Top