ಶಿಕ್ಷಣ ಬದುಕು ನಿರ್ಮಾಣದ ದಿಕ್ಸೂಚಿ ಕಾಸಿಂ ಸರದಾರ

shantiniketana_school_koppal shantiniketana_school_koppal1

ಶಿಕ್ಷಣ ಬದುಕು ನಿರ್ಮಾಣದ ದಿಕ್ಸೂಚಿ ಇದ್ದಂತೆ ಎಂದು ಸಿ.ಐ.ಟಿ.ಯು.ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಾಸಿಂ ಸರದಾರ ಹೇಳಿದರು.

ನಗರದ ಬಿ.ಎಸ್.ಜಿ.ಎಸ್ ಟ್ರಸ್ಟಿನ ಶಾಂತಿನಿಕೇತನ ಪಬ್ಲಿಕ್ ಸ್ಕೂಲಿನ ಶಾಲಾ ವಾರ್ಷಿಕೊತ್ಸವದ ನಿಮಿತ್ಯ
ನಡೆದ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರ ಮೇಲಿನಂತೆ ಹೇಳಿದರು

ಮುಂದುವರೆದು ಮಾತನಾಡಿದ ಅವರು ಶಿಕ್ಷಣವೆಂದರೆ ಬರೀ ಪಠ್ಯವಿಷಯಗಳನ್ನು ಮಾತ್ರ ಕಲಿಸುವುದಲ್ಲ ಇಂತಹ ಕ್ರೀಡಾ,ಸಾಹಿತ್ಯಿಕ,ಸಾಂಸ್ಕೃತಿಕ ಚಟುವಟಿಕೆಗಳನ್ನು ಪರಿಚಯಿಸಿದರೆ ಮಕ್ಕಳ ಸರ್ವಾಂಗೀಣ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಹೇಳಿದರು.

ನಗರಸಭೆ ಮಾಜಿಅಧ್ಯಕ್ಷರಾದ ಚಂದ್ರಶೇಖರ ಕವಲೂರ ಮಾತನಾಡಿ ಮಕ್ಕಳಲ್ಲಿ ಮೌಲ್ಯಗಳನ್ನು ಬಿತ್ತುವ ಕೆಲಸವನ್ನು ಶಿಕ್ಷಕವೃಂದ ಮಾಡಬೇಕು. ರಾಷ್ಟ್ರಕಟ್ಟಿದ ಗಾಂಧೀಜೀ,ಅಂಬೇಡ್ಕರರಂತಹ ನಾಯಕರ ಬಗ್ಗೆ ಮಕ್ಕಳಿಗೆ
ತಿಳಿಸಬೇಕು ಮತ್ತು ಅಜ್ಜ-ಅಜ್ಜಿಂದರ ದಿನ ಮಾಡಿದರೆ ಮಕ್ಕಳಿಗೆ ಹಿರಿಯರ ಬಗ್ಗೆ ಕಾಳಜಿ-ಅರಿವು ಮೂಡಿಸಲು ಸಾಧ್ಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯರಾದ ಮಲ್ಲಪ್ಪ ಕವಲೂರ, ಖಾಜಾವಲಿ ಬನ್ನಿಕೊಪ್ಪ, ಭರಮಗೌಡ್ರ ಗೆಜ್ಜಿ, ಟ್ರಸ್ಟನ ಅಧ್ಯಕ್ಷರಾದ ಬಸಪ್ಪ ಕುಕನೂರ, ಸೋಮಪ್ಪ ಕುಕನೂರ, ಭಾಗ್ಯನಗರ ಪ.ಪಂ. ಸದಸ್ಯ ವಿಜಯಕುಮಾರ ಪಾಟೀಲ, ನಿವೃತ್ತ ಉಪನ್ಯಾಸಕರಾದ ಲಿಂಗಣ್ಣ ಮೇಟಿ, ವೇದಿಕೆಯಲ್ಲಿದ್ದರು ಟ್ರಸ್ಟನ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಕುಕನೂರ ವೇದಿಕೆಯಲ್ಲಿದ್ದರು. ಶಾಲೆಗೆ ದಾನಗೈದ ನಿವೃತ್ತ ಉಪನ್ಯಾಸಕ ಚಂದ್ರಶೇಖರ ಗೌಡ ರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಶಾಲೆಯ ಮುಖ್ಯೊಪಾಧ್ಯಾಯರಾದ ಖಾಜಾವಲಿ ಕುದರಿಮೋತಿ ಸ್ವಾಗತಿಸಿದರು. ಶಿಕ್ಷಕಿ ಸುನಂದಾ ಬಳಗಾನೂರ ಮತ್ತು ರಾಜೇಶ ಸಸಿಮಠ ಕಾರ್ಯಕ್ರಮವನ್ನು ನಿರೂಪಿಸಿದರು. ಶ್ರೀಮತಿ ರೂಪ ಉತ್ತಂಗಿ ವಂದಿಸಿದರು.

ಸಂಜೆ ೬:೩೦ ಕ್ಕೆ ವಿದ್ಯಾರ್ಥಿಗಳಿಂದ ನಡೆದ ಸಾಂಸ್ಕ್ರತಿಕ ಕಾರ್ಯಕ್ರಮವನ್ನು ಸೈಯದ್ ಪೌಂಡೆಶನ ಅಧ್ಯಕ್ಷರಾದ ಕೆ.ಎಮ್.ಸೈಯದ್ ಉದ್ಘಾಟಿಸಿದರು. ಗಣ್ಯರಾದ ಡಾ.ಶ್ರೀವಾಸ ಹ್ಯಾಟಿ, ಸಂತೋಷ ದೇಶಪಾಂಡೆ, ಮಂಜುನಾಥ ಅಂಗಡಿ, ಹುಲುಗಪ್ಪ ಕಟ್ಟಿಮನಿ, ನದೀಮುಲ್ಲಾ, ಪಾಲ್ಗೊಂಡಿದ್ದರು. ನಂತರ ಮಕ್ಕಳಿಂದ ಸಾಂಸ್ಕ್ರತಿಕ ಕಾರ್ಯಕ್ರಮಗಳು ಜರುಗಿದವು ಎಂದು ಶಾಂತಿನಿಕೇತನ ಪಬ್ಲಿಕ್ ಶಾಲೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply