ಶಿಕ್ಷಣದಿಂದ ಸಮಾಜದ ಸಮಗ್ರ ಅಭಿವೃದ್ಧಿ : ಶಿರಹಟ್ಟಿ

koppal
ಕೊಪ್ಪಳ,ಜು,೩೧: ಎಲ್ಲಾ ಕ್ಷೇತ್ರದ ಅಭಿವೃದ್ಧಿ ಶಿಕ್ಷಣರಂಗದಲ್ಲಿ ಅಡಗಿದೆ ಮೊದಲು ನಾವು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಬೇಕಾಗಿದೆ ಶಿಕ್ಷಣದಿಂದ ಸಮಾಜದ ಸಮಗ್ರ ಅಭಿವೃದ್ಧಿ ಕಾಣಲು ಸಾಧ್ಯವಾಗಿದ್ದು ಮಕ್ಕಳಿಗೆ ಮಾತೃಭಾಷೆಯಲ್ಲಿಯೇ ಮೊದಲು ಶಿಕ್ಷಣಪಡೆಯುವಂತಾಗಲಿ ಎಂದು ಉಪವಿಭಾಗಾಧಿಕಾರಿ ಇಸ್ಮಾಯಿಲ್‌ಸಾಹೇಬ್ ಶಿರಹಟ್ಟಿ ಹೇಳಿದರು.
ಅವರು ಇಲ್ಲಿಗೆ ಸಮೀಪದ ಬಹದ್ದೂರ ಬಂಡಿ ಗ್ರಾಮದಲ್ಲಿ ಜಾಮೀಯಾ ಮಸೀದ್ ಪಂಚಕಮೀಟಿ, ಕಟ್ಟಡ ಕಾರ್ಮಿಕರ ಸಂಘ, ಟಿಪ್ಪು ಸುಲ್ತಾನ ಕಮೀಟಿ, ಇಮ್ದಾದ್ ಕಮೀಟಿ, ನೌಜವಾನ ಕಮೀಟಿ ಇವುಗಳ ಸಂಯುಕ್ತಾಶ್ರಯದಲ್ಲಿ ರವಿವಾರ ಏರ್ಪಡಿಸಿದ ಪೇಶ ಇಮಾಮ್ ರವರ ನೂತನ ವಸತಿಗ್ರಹ ಕಟ್ಟಡದ ಶಂಕುಸ್ಥಾಪನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮುಂದುವರೆದು ಮಾತನಾಡಿದ ಅವರು ಮುಸ್ಲಿಂ ಸಮಾಜ ಶೈಕ್ಷಣಿಕವಾಗಿ ಹಿಂದುಳಿಯಬಾರದು ಮಕ್ಕಳಿಗೆ ಒಳ್ಳೆಯ ಸಂಸ್ಕಾರದ ಜೊತೆಗೆ ಶಿಕ್ಷಣಕೊಡಿಸಬೇಕು ನಮ್ಮ ಮಾತೃ ಭಾಷೆ ಉರ್ದು ಧಾರ್ಮಿಕಭಾಷೆ ಅರಬ್ಬಿಕ್ ಜೊತೆಗೆ ನ್ಮಮ ನಾಡಿನ ಭಾಷೆ ಕನ್ನಡ ಕಲಿಸುವಲ್ಲಿ ಮುಂದಾಗಬೇಕು ಶಿಕ್ಷಣಕ್ಕೆ ಹೆಚ್ಚು ವತ್ತುಕೊಡಬೇಕು ಪ್ರವಾದಿಗಳು ಶಿಕ್ಷಣಕ್ಕೆ ಹೆಚ್ಚುವತ್ತು ನೀಡಿದ್ದರು ಯಾವ ಪಾಲಕರು ತಮ್ಮ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಮತ್ತು ಒಳ್ಳೆಯ ಸಂಸ್ಕಾರ ನೀಡುತ್ತಾರೆಯೋ ಅವರೆಲ್ಲರೂ ಒಳ್ಳೆಯ ಜನರೆಂದು ಅವರು ಹೇಳಿದ್ದಾರೆ ಇಂದು ನಾವು ನಮ್ಮಮಕ್ಕಳಿಗೆ ಶಿಕ್ಷಣಕಲಿಸಿದರೆ ಅವರ ಮುಂಧಿನ ಭವಿಷ್ಯ ಉಜ್ವಲಗೊಳ್ಳುತ್ತದೆ ಎಂದು ಉಪವಿಭಾಗಾಧಿಕಾರಿ ಇಸ್ಮಾಯಿಲ್ ಸಾಹೇಬ ಶಿರಹಟ್ಟಿ ಹೇಳಿದರು.
ಕಾರ್ಯಕ್ರಮದಲ್ಲಿ ಜಾಮೀಯಾ ಮಸೀದಿ ಅಧ್ಯಕ್ಷ ಯಮನೂರ ಸಾಬ್ ಹಿರೇಮನಿ ಅಧ್ಯಕ್ಷತೆವಹಿಸಿದ್ದರು. ಮುಖಅಥಿತಿಗಳಾಗಿ ಕೊಪ್ಪಳ ನಗರಾಭಿವೃದ್ಧಿ ಪ್ರಾದಿಕಾರದ ಅಧ್ಯಕ್ಷ ಸಯ್ಯದ್ ಜುಲ್ಲು ಖಾದರ್ ಖಾದ್ರಿ ಸೇರಿದಂತೆ ಸಮಾಜದ ಮುಖಂಡರು ಮತ್ತು ವಿವಿಧ ಸಂಸ್ಥೆಗಳ ಜನಪ್ರತಿನಿಧಿಗಳಾದ ಅಮಜದ್ ಪಟೇಲ್, ಕೆ.ಎಮ್.ಸಯ್ಯದ್, ಚಾಂದ್ಪಾಷಾ ಕಿಲ್ಲೇದಾರ್, ಲಾಯಕ್ ಅಲಿ, ಪಾಷಾ ಕಾಟನ್, ಜಾಕೀರ್ ಹುಸೇನ್ ಕುಕನೂರ, ಮಾಬುಸಾಬ ಹಿರೇಮಸೂತಿ, ಮಾಬು ಹುಸೇನೆ ಬನ್ನಿಕೊಪ್ಪ, ನಜೀರ ಅಹಮ್ಮದ್ ಮುದಗಲ್, ಬಾಬುಸಾಬ್ ಹಾದರಮಗ್ಗಿ, ಬಾಶುಸಾಬ ಖತೀಬ, ಜಾಕೀರ ಸಾಬ್ ಕಿಲ್ಲೇದಾರ, ಮಾನವಿ ಪಾಷಾ, ಹುಸೇನ ಪೀರಾ ಚಿಕನ್, ಆದಿಲ್ ಪಟೇಲ್, ಜಮೀರ್ ಖಾದ್ರಿ, ಅಜ್ಜು ಖಾದರಿ, ಜಾಫರ್ ತಟ್ಟಿ, ರಫೀಕ್ ಶರೀಫ್, ಶಫೀಕ್ ಅಹಮ್ಮದ್, ಸಯ್ಯದ್ ನಾಸೀರುದ್ದೀನ್ ಹುಸೇನಿ, ಆಶೀಫ್ ಸರ್ಧಾರ, ಜಿಲಾನ್ ಸಾಬಾ ಮೈ ಲೈಕ್, ಮಹೇಬೂಬ ಅರಗಂಜಿ, ಸಿರಾಜ್ ಬಿಸರಳ್ಳಿ, ರಾಜಾಬಕ್ಷಿ, ಸಾದಿಕ್ ಅಲಿ, ಆಶಿಫ್ ಕರ್ಕಿಹಳ್ಳಿ, ಜಾಫರ್ ಸಾಬ್ ಸಂಗಟಿ, ಸಯ್ಯದ್ ಮಹೇಬೂಬ ಮಚ್ಚಿ, ಪೀರ್ ಸಾಬ್ ಬೆಳಗಟ್ಟಿ, ಪೀರಾಸಾಬ್ ಬಾಗವಾನ್, ಹಸನಸಾಬ್ ಹಿರೇಮಸೂತಿ, ಕಾಂಗ್ರಸ್ ಮುಖಂಡ ಶರಣಪ್ಪ ಕುರಿ ಮತ್ತಿತರರು ಮುಖ್ಯಅಥಿತಿಗಳಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು ಮಸೀದಿಯ ಪೇಶ್ ಇಮಾಮ್ ಹಾಫೀಸ್ .ನಸೀರುದ್ದೀನ್ ರವರು ವಿಶೇಷ ಪ್ರಾರ್ಥನೆ ನೆರವೇರಿಸಿದರು.ನಜೀರ್ ಮುದುಗಲ್ ರವರುಕಾರ್ಯಕ್ರಮ ನಿರೂಪಿಸಿದರೆ ಆಶೀಫ್ ಅಲಿ ಅವರು ಕೊನೆಯಲ್ಲಿ ವಂದಿಸಿದರು.

Please follow and like us:
error