ಶಿಕ್ಷಕರ ದಿನಾಚರಣೆ : ಜಿಲ್ಲೆಯಲ್ಲಿ ಸೆ. ೦೮ ರಂದು ಆಚರಣೆ

: ಇದೇ ಸೆ. ೦೫ ರಂದು ಶಿಕ್ಷಕರ ದಿನಾಚರಣೆಯನ್ನು ಆಚರಿಸಬೇಕಾಗಿದ್ದು, ಅಂದು ಗಣೇಶ ಚತುರ್ಥಿ ಹಬ್ಬ ಇರುವ ಕಾರಣ ಕೊಪ್ಪಳದಲ್ಲಿ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆಯನ್ನು ಸೆ. ೦೫ ರ ಬದಲಿಗೆ ಸೆ. ೦೮ ರಂದು ಆಚರಿಸಲು ನಿರ್ಧರಿಸಲಾಗಿದೆ ಎಂದು ಡಿಡಿಪಿಐ ಶ್ಯಾಮಸುಂದರ್ ಅವರು ತಿಳಿಸಿದ್ದಾರೆ.
ಸೆ. ೦೫ ರಂದು ಗಣೇಶ ಚತುರ್ಥಿ ಹಬ್ಬ ಇರುವ ಕಾರಣ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಸೆ. ೦೫ ರ ಬದಲಿಗೆ ೦೮ ರಂದು ಆಚರಿಸಲು ಅನುಮತಿ ನೀಡುವಂತೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು ಮನವಿ ಸಲ್ಲಿಸಿದ್ದರು. ಮನವಿ ಕುರಿತು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತರಲಾಗಿದೆ. ಈ ಹಿನ್ನೆಲೆಯಲ್ಲಿ ಕೊಪ್ಪಳದಲ್ಲಿ ಶಿಕ್ಷಕರ ದಿನಾಚರಣೆಯನ್ನು ಸೆ. ೦೫ ರ ಬದಲಿಗೆ ಸೆ. ೦೮ ರಂದು ಆಚರಿಸಲಾಗುವುದು ಎಂದು ಡಿಡಿಪಿಐ ಶ್ಯಾಮಸುಂದರ್  ತಿಳಿಸಿದ್ದಾರೆ.

Please follow and like us:
error