ಶಿಕ್ಷಕರ ಅರ್ಹತಾ ಪ್ರಮಾಣ ಪತ್ರ ಪಡೆದುಕೊಳ್ಳಲು ಸೂಚನೆ

: ಸಾರ್ವಜನಿಕ ಶಿಕ್ಷಣ ಇಲಾಖೆಯು ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗೆ ಪೂರ್ವದಲ್ಲಿ ಅರ್ಹತಾ ಪ್ರಮಾಣಪತ್ರಕ್ಕಾಗಿ ೨೦೧೫ ನೇ ಸಾಲಿನಲ್ಲಿ ನಡೆಸಿದ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ (ಟಿಇಟಿ) ಯಶಸ್ವಿಯಾಗಿ, ಅರ್ಹತೆಯನ್ನು ಪಡೆದಿರುವ ಅಭ್ಯರ್ಥಿಗಳ ಅರ್ಹತಾ ಪ್ರಮಾಣಪತ್ರಗಳನ್ನು ಕೊಪ್ಪಳ ಡಿಡಿಪಿಐ ಅವರ ಕಚೇರಿಯಲ್ಲಿ ವಿತರಿಸಲಾಗುವುದು.
ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ಅರ್ಹತೆಯನ್ನು ಗಳಿಸಿದ ಅಭ್ಯರ್ಥಿಗಳು, ಸಂಬಂಧಪಟ್ಟ ದಾಖಲೆಗಳನ್ನು ಹಾಜರುಪಡಿಸಿ, ಖುದ್ದಾಗಿ ಪ್ರಮಾಣಪತ್ರಗಳನ್ನು ಪಡೆಯುವಂತೆ ಡಿಡಿಪಿಐ ಎ. ಶ್ಯಾಮಸುಂದರ್  ತಿಳಿಸಿದ್ದಾರೆ.

Leave a Reply