ಶಾಸಕ ಇಕ್ಬಾಲ್ ಅನ್ಸಾರಿ ಆಪ್ತ ಸಹಾಯಕನ ಪುತ್ರ ಗುಂಡಿಗೆ ಬಲಿ

sudan_shoot_out-3 sudan_shoot_out-4ಉತ್ತರ ಆಪ್ರಿಕಾದಲ್ಲಿ ಕೆಲಸ ಮಾಡುತ್ತಿದ್ದ ಕೊಪ್ಪಳ ಮೂಲದ ವ್ಯಕ್ತಿಯನ್ನು ಗುಂಡಿಟ್ಟು ಹತ್ಯೆ ಮಾಡಲಾಗಿದೆ. ಸೈಯದ್ ಫಾರೂಕ್ ಬಾಷಾ ಖಾದ್ರಿ ( 25) ಶನಿವಾರ ದುಷ್ಕರ್ಮಿಗಳ ಗುಂಡಿಗೆ ಬಲಿಯಾದ ಯುವಕ. ಗಂಗಾವತಿಯ ಶಾಸಕ ಇಕ್ಬಾಲ್ ಅನ್ಸಾರಿಯವ ಆಪ್ತ ಸಹಾಯಕ ಸೈಯದ್ ಬದ್ರುದ್ದಿನ್ ಅವರ ಪುತ್ರ ಉತ್ತರ ಆಪ್ರಿಕಾದ ಸೂಡಾನ್ ನ ಸಾಪ್ಟವೇರ್ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿ 2 ವರ್ಷಗಳಿಂದ ಕೆಲಸ ಮಾಡುತ್ತಿದ್ದ . ಕಂಪನಿಯ ವಾಹನದಲ್ಲಿ ಕೆಲಸ ತೆರಳುತ್ತಿರುವಾಗ ಅಪರಿಚಿತ ದುಷ್ಕರ್ಮಿಗಳು ನಡೆಸಿದ ಗುಂಡಿನ ದಾಳಿಗೆ ಫಾರೂಖ್ ಮತ್ತು ವಾಹನದ ಚಾಲಕ ಮೃತಪಟ್ಟಿದ್ದಾನೆ. ಮೃತದೇಹವನ್ನು ಭಾರತಕ್ಕೆ ತರಲು ಸಹಾಯ ಮಾಡುವಂತೆ ವಿದೇಶಾಂಗ ಇಲಾಖೆಗೆ ಮನವಿ ಮಾಡಿಕೊಳ್ಳಲಾಗಿದ್ದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿ ಸೂಕ್ತ ಸಹಾಯ ಮಾಡುವುದಾಗಿ ಹೇಳಿ ಸಂಬಂದಪಟ್ಟವರಿಗೆ ಸೂಕ್ತ ವ್ಯವಸ್ಥೆ ಮಾಡುವಂತೆ ಸೂಚಿಸಿದ್ದಾರೆ. ಸೈಯದ್ ಬದ್ರುದ್ದಿನ್ ರ ಕುಟುಂಬಸ್ಥರು ಆಂದ್ರದ ಕರ್ನೂಲ್ ನಲ್ಲಿ ವಾಸವಾಗಿದ್ದಾರೆ.

Leave a Reply