ಶಾಸಕರಿಂದ ರೂ.೫ ಕೋಟಿಯ ಚೆಕ್ ಡ್ಯಾಂ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ

koppal-mla
ಕೊಪ್ಪಳ:೧೧, ಕ್ಷೇತ್ರದ ಮುರ್ಲಾಪುರ, ಅಲಿಪುರ, ಬೈರಾಪುರ ಗ್ರಾಮಗಳಲ್ಲಿ ೨೦೧೫-೧೬ನೇ ಸಣ್ಣ ನೀರಾವರಿ ಯೋಜನೆಯಡಿಯಲ್ಲಿ ರೂ.೫ ಕೋಟಿಯ ಪಿಕಪ್ ಚೆಕ್ ಡ್ಯಾಂ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೇರವೇರಿಸಿ ಮಾತನಾಡಿದ ಶಾಸಕ ಕೆ.ರಾಘವೇಂದ್ರ ಹಿಟ್ನಾಳರವರು ರಾಜ್ಯ ಸರ್ಕಾರವು ಸಣ್ಣ ನೀರಾವರಿ ಯೋಜನೆ ಅಡಿಯಲ್ಲಿ ಚೆಕ್ ಡ್ಯಾಂಗಳ ನಿರ್ಮಾಣಕ್ಕೆ ಹೆಚ್ಚು ಅನುದಾನವನ್ನು ನೀಡುತ್ತಿದ್ದು, ಹರಿಯುವ ನೀರನ್ನು ನಿಲ್ಲಿಸಿ ಬರದಿಂದ ತತ್ತರಿಸಿರುವ ಈ ಭಾಗದ ಜನರಿಗೆ ಹೆಚ್ಚು ನೀರಿನ ಅನುಕೂಲವಾಗುವಂತೆ ಕ್ಷೇತ್ರದಲ್ಲಿ ನೀರಾವರಿ ಯೋಜನೆಗಳು ತ್ವರಿತ ಗತಿಯಲ್ಲಿ ಅನುಷ್ಠಾನಗೊಳ್ಳುತ್ತಿವೆ. ಇದರಿಂದ ಕ್ಷೇತ್ರದ ಒಣಬೇಸಾಯವು ಕಡಿಮೆಯಾಗಿದ್ದು ನೀರಾವರಿ ಬೇಸಾಯಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದ್ದು, ಇದರಿಂದ ಅಂತರರ್ಜಲವು ಹೆಚ್ಚಾಗುತ್ತಿದ್ದು, ರೈತರಿಗೆ ಬರುವ ದಿನಗಳಲ್ಲಿ ಹೆಚ್ಚು-ಹೆಚ್ಚು ಅನುಕೂಲವಾಗಲಿದ್ದು ಗ್ರಾಮಗಳಿಗೆ ಕುಡಿಯುವ ನೀರಿನಸೌಲಭ್ಯವು ಉಂಟಾಗಲಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿ.ಪಂ.ಸದಸ್ಯರಾದ ಎಸ್.ಬಿ.ನಾಗರಳ್ಳಿ, ಕೆ.ರಾಜಶೇಖರ ಹಿಟ್ನಾಳ, ಪ್ರಾಧಿಕಾರದ ಅಧ್ಯಕ್ಷರಾದ ಜುಲ್ಲು ಖಾದ್ರಿ, ಹಟ್ಟಿ ಭರಮಪ್ಪ, ಸುರೇಶ ಬೂಮರೆಡ್ಡಿ, ಬಸವರೆಡ್ಡಪ್ಪ ಹಳ್ಳಿಕೇರಿ, ಕೇಶವರೆಡ್ಡಿ, ತಾ.ಪಂ.ಸದಸ್ಯರಾದ ಡಾ||ಸಿದ್ದಲಿಂಗಸ್ವಾಮಿ ಇನಾಮದಾರ್, ನಿಂಗಪ್ಪ ಯತ್ನಟ್ಟಿ, ಬಸವರಾಜ ಹಾರಗೇರಿ, ಹೊನ್ನಪ್ಪ ಗೌಡ್ರು, ಪರಶುರಾಮ ಮೆಕ್ಕಿ, ನಜೀರ್ ಅಳವಂಡಿ, ಅನ್ವಾರ ಗಡಾದ, ವಿ.ಎಸ್.ಎಸ್.ಎನ್.ಅಧ್ಯಕ್ಷ ರವಿ ಸಂಗರಡ್ಡಿ, ಇಸ್ಮಾಯಿಲ್,

Please follow and like us:
error