ಶಾಲೆಯಿಂದ ಹೊರಗುಳಿಯುವ ಮಕ್ಕಳು ಕುಟುಂಬಕ್ಕೆ ಮತ್ತು ಸಮಾಜಕ್ಕೆ ಯಾವುದೇ ಕೊಡುಗೆ ನೀಡಲು ಸಾಧ್ಯವಿಲ್ಲ : ಡಾ. ವನಿತಾ ತೊರವಿ

toravi
ಕೊಪ್ಪಳ ಜು.೩೦ : ಹದಿನಾಲ್ಕು ವರ್ಷದೊಳಗಿನ ಮಕ್ಕಳನ್ನು ದುಡಿಮೆಗೆ ಬಳಸುವವರಿಗೆ ಕಾನೂನಿನಲ್ಲಿ ಇದೀಗ ಕಟ್ಟುನಿಟ್ಟಿನ ಕಾಯ್ದೆ ಜಾರಿಗೆ ಬಂದಿದ್ದು, ನಿಯಮವನ್ನು ಉಲ್ಲಂಘಿಸುವವರಿಗೆ ಕಠಿಣ ಶಿಕ್ಷೆ ಕಾದಿದೆ ಕಾರ್ಮಿಕ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಸಹಾಯವಾಣಿ- ಮತ್ತು ಶಿಕ್ಷಣ ಇಲಾಖೆ ಹಲವಾರು ಸಂಘಸಂಸ್ಥೆಗಳ ಮತ್ತು ಆಟೋ ಚಾಲಕರ, ಗ್ಯಾರೇಜ ಮಾಲಕರ ಸಹಯೋಗದಲ್ಲಿ ನಾವು ಈಗಾಗಲೇ ನಾವು ೯೭೯೪ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಿದ್ದೇವೆ ಶಾಲೆಯಿಂದ ಹೊರಗುಳಿಯುವ ಮಕ್ಕಳು ಕುಟುಂಬಕ್ಕೆ ಮತ್ತು ಸಮಾಜಕ್ಕೆ ಯಾವುದೇ ಕೊಡುಗೆ ನೀಡಲು ಸಾಧ್ಯವಿಲ್ಲ ಅಕ್ಷರ ಜ್ಞಾನ ಪಡೆದರೆ ಸ್ವಾವಲಂನೆಯಾಗಿ ಬದುಕುವುದಷ್ಟೆ ಸಂಪನೂಲ ವ್ಯಕ್ತಿಯಾಗಿ ಸಮಾಜ ದೇಶಕ್ಕೆ ಒಳ್ಳೆ ಕೊಡುಗೆ ನೀಡಬಹುದು ಎಂದು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯೆ ಡಾ. ವನಿತಾ ಎನ್. ತೊರವಿ ಅವರು ಹೇಳಿದರು.

ಅವರು ನಗರದ ಪತ್ರಿಕಾ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ಜಿಲ್ಲೆಯ ಕೋಳಿಫಾರಂ, ಹೋಟೆಲ್, ಗ್ಯಾರೇಜ್, ಸೀಡ್ಸ್ ಕಂಪನಿಗಳ ಮಾಲೀಕರುಗಳಿಗೆ ಮತ್ತು ಪಾಲಕರುಗಳಿಗೆ ಬಾಲಕಾರ್ಮಿಕ ನಿಷೇಧ ಮತ್ತು ನಿಯಂತ್ರಣ ಕಾಯ್ದೆ ಕುರಿತು ಕಾನೂನು ಅರಿವು ನಾವು ನೀಡಿದ್ದೇವೆ ರಾಜ್ಯದ ಇತರೆ ಜಿಲ್ಲೆಗಳಿಗೆ ಹೋಲಿಸಿದಾಗ ಬಾಲಕಾರ್ಮಿಕ ಪದ್ಧತಿ ಹಾಗೂ ಬಾಲ್ಯ ವಿವಾಹ ಇವರೆಡೂ, ಉತ್ತರ ಕರ್ನಾಟಕದಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ಶಾಲೆ ಬಿಟ್ಟ ಮಕ್ಕಳನ್ನು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಪುನಃ ಶಾಲೆಗೆ ಸೇರಿಸುವ ಕಾರ್ಯದಲ್ಲಿ ನಿರತವಾಗಿರುವುದರ ಜೊತೆಗೆ, ಮಕ್ಕಳನ್ನು ದುಡಿಮೆಗೆ ಬಳಸುವವರನ್ನು ಹಾಗೂ ಬಾಲ್ಯವಿವಾಹ ಪ್ರೋತ್ಸಾಹಿಸುವವರನ್ನು ಶಿಕ್ಷೆಗೆ ಗುರಿಪಡಿಸಲು ಮುಂದಾಗುತ್ತಿದೆ. ೧೪ ವರ್ಷದೊಳಗಿನ ಮಕ್ಕಳನ್ನು ಮನೆಗೆಲಸವೂ ಸೇರಿದಂತೆ ಯಾವುದೇ ಕೆಲಸಗಳಿಗೆ ಬಳಸುವಂತಿಲ್ಲ. ಇದನ್ನು ಉಲ್ಲಂಘಿಸುವವರಿಗೆ ಕಠಿಣ ಶಿಕ್ಷೆ ಕಾದಿದೆ. ಬಾಲಕಾರ್ಮಿಕ ನಿಷೇಧ ಮತ್ತು ನಿಯಂತ್ರಣ ಕಾಯ್ದೆಯಲ್ಲಿ ಕಠಿಣ ಶಿಕ್ಷೆಗೆ ಅವಕಾಶ ಕಲ್ಪಿಸಲಾಗಿದೆ. ಆದರೆ ಬಹಳಷ್ಟು ಜನರಿಗೆ ಕಾಯ್ದೆ, ಕಾನೂನಿನ ಅರಿವಿಲ್ಲ. ಕಾನೂನಿನ ಅರಿವಿಲ್ಲ ಎಂದು ಕಾಯ್ದೆ ಉಲ್ಲಂಘಿಸಿದಲ್ಲಿ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಇದಕ್ಕಾಗಿ ಕಾನೂನಿನ ಅರಿವು ಕಾರ್ಯಕ್ರಮಗಳನ್ನು ಆಯೋಜಿಸಿ ಅರಿವು ನೀಡಿದ್ಧೇವೆ ಕಾನೂನು ಅರಿವು ಇಲ್ಲ ಎಂದು ಪಾಲಕರು ಹಾಗೂ ಅಂಗಡಿಗಳ ಮಾಲಕರುಗಳು ನುಣಿಚಿಕೊಳ್ಳುವಹಾಗಿಲ್ಲ ಎಂದು ಅವರು ಎಚ್ಚರಿಸಿದರು

ಮುಂದುವರೆದು ಮಾತನಾಡಿದ ಅವರು ಬಡತನ, ನಿರುದ್ಯೋಗ, ಅನಕ್ಷರತೆ, ವಲಸೆ ಮುಂತಾದ ಕುಂಟು ನೆಪವೊಡ್ಡಿ, ಹಣ ಹಾಗೂ ದುಡಿಮೆಯ ತಾತ್ಕಾಲಿಕ ಆಸೆಗಾಗಿ ಮಕ್ಕಳನ್ನು ಮನೆಗೆಲಸಕ್ಕೆ, ಹೋಟೆಲ್, ಗ್ಯಾರೇಜ್, ಕೋಳಿ ಫಾರಂ, ಸೀಡ್ಸ್ ಕಂಪನಿ ಮುಂತಾದ ಕಡೆ ದುಡಿಮೆಗೆ ಕಳುಹಿಸುವ ಮೂಲಕ ಪಾಲಕರೇ ತಮ್ಮ ಮಕ್ಕಳ ಭವಿಷ್ಯವನ್ನು ಹಾಳು ಮಾಡುತ್ತಿರುವುದು ದುರಾದೃಷ್ಟಕರ ಸಂಗತಿಯಾಗಿದೆ. ಶಾಲೆಯಿಂದ ಹೊರಗುಳಿಯುವ ಮಕ್ಕಳು ಕುಟುಂಬಕ್ಕೆ ಮತ್ತು ಸಮಾಜಕ್ಕೆ ಯಾವುದೇ ಕೊಡುಗೆ ನೀಡಲು ಸಾಧ್ಯವಿಲ್ಲ. ಮಕ್ಕಳು ಶಿಕ್ಷಣ ಪಡೆದು ವಿದ್ಯಾವಂತರಾದರೆ, ದೇಶ ಅಭಿವೃದ್ಧಿಯಾದಂತೆ. ಈ ನಿಟ್ಟಿನಲ್ಲಿ ೨೦೨೦ ರೊಳಗಾಗಿ ರಾಜ್ಯವನ್ನು ಬಾಲಕಾರ್ಮಿಕ ಮುಕ್ತ ರಾಜ್ಯವನ್ನಾಗಿಸಲು ಆಯೋಗವು ಕಾರ್ಯಕ್ರಮಗಳನ್ನು ರೂಪಿಸುತ್ತಿದೆ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯೆ ವನಿತಾ ಎನ್. ತೊರವಿ ಅವರು ಹೇಳಿದರು.

ಈ ಸಂದರ್ಭದಲ್ಲಿ ಸಾರ್ವಕನಿಕ ಶಿಕ್ಷಣ ಇಲಾಖೆಯ ಶರಣಪ್ಪ, ರೋಹಿಣಿ ಕೋಟಗಾರ್ ಬಸವರಾಜ ಹಿರೇಗೌಡ್ರ ಶರಣಪ್ಪ ಸಿಂಗನಾಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Please follow and like us:
error