You are here
Home > Koppal News-1 > ಶಾಲಾ ವಾರ್ಷಿಕೋತ್ಸವ ಮಕ್ಕಳ ಪ್ರತಿಭೆ ಅನಾವರಣಕ್ಕೆ ಉತ್ತಮ ವೇದಿಕೆ

ಶಾಲಾ ವಾರ್ಷಿಕೋತ್ಸವ ಮಕ್ಕಳ ಪ್ರತಿಭೆ ಅನಾವರಣಕ್ಕೆ ಉತ್ತಮ ವೇದಿಕೆ

educare_school_koppal_annual_day educare_school_koppal-1ಕೊಪ್ಪಳ, ೦೭- ಮಕ್ಕಳಲ್ಲಿ ಆಗಾದವಾದ ಶಕ್ತಿ ಅಡಗಿದ್ದು ಶಾಲಾ ವಾರ್ಷಿಕೋತ್ಸವ ಮಕ್ಕಳ ಪ್ರತಿಭೆ ಅನಾವರಣಕ್ಕೆ ಉತ್ತಮ ವೇದಿಕೆ ಎಂದು ನಿವೃತ್ತ ಉಪನ್ಯಾಸಕ ಶರಣಪ್ಪ ಎ.ಜಿ. ಹೇಳಿದರು.
ಅವರು ನಗರದ ಕಿನ್ನಾಳ ರಸ್ತೆಯಲ್ಲಿರುವ ಕಾಯಕ ಎಜ್ಯುಕೇಶನಲ್ ಟ್ರಸ್ಟನ ಎಜ್ಯುಕೇರ ಸ್ಕೂಲ್‌ನ ಪ್ರಥಮ ವಾರ್ಷಿಕೋತ್ಸವದಲ್ಲಿ ಸರಸ್ವತಿ ಪೂಜೆ ಹಾಗೂ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಮಕ್ಕಳಿಗೆ ಪ್ರಶಸ್ತಿ ವಿತರಿಸಿ ಮಾತನಾಡುತ್ತಿದ್ದರು.
ಬಾಲ್ಯದಲ್ಲೆ ಮಕ್ಕಳ ಪ್ರತಿಭೆಗೆ ತಕ್ಕಂತೆ ಪ್ರೋತ್ಸಾಹ ನೀಡಿ ದೇಶದ ಉತ್ತಮ ಸಾಧಕರಾಗಿ ಬೆಳೆಯುವಂತೆ ಮಾಡಬೇಕು ಎಂದು ಹೇಳಿದ ಇವರು ಇಂದಿನ ಮಕ್ಕಳಲ್ಲಿ ಭಾರತದ ಭವಿಷ್ಯ ಅಡಗಿದೆ ಎಂದರು.
ಮಕ್ಕಳಲ್ಲಿ ಭಗವಂತನಿರುತ್ತಾನೆ ಜಗತ್ತಿನ ಎಲ್ಲ ಮಕ್ಕಳ ಬುದ್ಧಿಶಕ್ತಿ ಸಮಾನವಾಗಿರುತ್ತದೆ ಶಿಕ್ಷಕರು-ಪಾಲಕರು ಅವರ ಆಸಕ್ತಿಗೆ ಅನುಗುಣವಾಗಿ ಶಿಕ್ಷಣ ಒದಗಿಸಿ ಉತ್ತಮ ಪ್ರಜೆಯನ್ನಾಗಿಸಿ ಎಂದು ಕರೆ ನೀಡಿದರು.
ಮನೆಯಲ್ಲಿ ಪಾಲಕರು ಟಿವಿಯಿಂದ ಹೊರ ಬಂದು ಮಕ್ಕಳ ಕಲಿಕೆಗೆ ಉತ್ತಮ ವಾತಾವರಣ ನಿರ್ಮಿಸಿಕೊಡಬೇಕು. ಮಕ್ಕಳಿಗೆ ಎಲ್ಲವನ್ನು ಕೊಟ್ಟು ಕಲಿಕೆಗೆ ಉತ್ತಮ ವಾತಾವರಣ ಇರದಿದ್ದಲ್ಲಿ ಮಕ್ಕಳು ವಿದ್ಯಾವಂತರಾಗುವುದಿಲ್ಲವೇಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಮಕ್ಕಳಿಂದ ಆಕರ್ಶಕ ವೇಷ-ಭೂಷಣ (ಛದ್ಮ) ಸ್ಪರ್ಧೇ ಏರ್ಪಡಿಸಲಾಗಿತ್ತು. ಕ್ರೀಡಾ ಕೂಟದಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದ ಮಕ್ಕಳು ಹಾಗೂ ಪಾಲಕರಿಗೆ ಪ್ರಶಸ್ತಿ ವಿತರಿಸಲಾಯಿತು.
ಕಾರ್ಯಕ್ರಮದ ವೇದಿಕೆ ಮೇಲೆ ಹಿರಿಯ ವೈದ್ಯರಾದ ಡಾ|| ರಾಧಾಬಾಯಿ ಕುಲಕರ್ಣಿ, ಇನ್ನರ ವಿಲ್ಹ್ ಕ್ಲಬ್ ಅಧ್ಯಕ್ಷೆ ಸುಧಾ ಶೆಟ್ಟರ, ಸಂಸ್ಥೆಯ ನಿರ್ದೇಶಕ ರಾಜೇಶ ಯಾವಗಲ್ಲ ಇದ್ದರು. ಸಂಸ್ಥೆಯ ಉಪಾಧ್ಯಕ್ಷ ಸಂತೋಷ ದೇಶಪಾಂಡೆ ಅಧ್ಯಕ್ಷತೆ ವಹಿಸಿದ್ದರು. ಸಾಯಭಾ ವಂದಿಸಿದರು.
ಪ್ರಾರಂಭದಲ್ಲಿ ಸ್ವಾಗತವನ್ನು ಸಹ ಶಿಕ್ಷಕಿ ಜ್ಯೋತಿ ಮಾಡಿದರೆ, ಸಹಶಿಕ್ಷಕಿ ಸುಭಾಂಗಿ ಅವರಾಧಿ ಪ್ರಾಸ್ತಾವಿಕವಾಗಿ ಮಾತನಾಡಿದರೆ, ಸಹಶಿಕ್ಷಕಿ ಕವಿತಾ ಅಳವಂಡಿ ನಿರೂಪಿಸಿದರು. ಪ್ರಶಸ್ತಿ ವಿತರಣೆಯನ್ನು ಸಹ ಶಿಕ್ಷಕಿ ರಶ್ಮಿ ಕೊನೆಯಲ್ಲಿ ಸಹ ಶಿಕ್ಷಕಿ ಸಾಯಭಾ ವಂದಿಸಿದರು.

Leave a Reply

Top