ಶಾರದಮ್ಮ ವಿ ಕೊತಬಾಳ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

sharadamma-kotbal-collage-koppal
ಕೊಪ್ಪಳ : ನಗರದ ಶ್ರೀಗವಿಸಿದ್ಧೇಶ್ವರ ವಿದ್ಯಾವರ್ಧಕ ಟ್ರಸ್ಟ ಅಡಿಯಲ್ಲಿ ಬರುವ ಶ್ರೀಮತಿ ಶಾರದಮ್ಮ ವಿ ಕೊತಬಾಳ ಬಿ.ಬಿ.ಎ ,ಬಿ.ಸಿಎ ಹಾಗೂ ಬಿ.ಕಾಂ ಪದವಿ ಮಹಾವಿದ್ಯಾಲಯದಲ್ಲಿ ೬೧ ನೇ ಕನ್ನಡ ರಾಜ್ಯೋತ್ಸವವನ್ನು ಸಡಗರದಿಂದ ಆಚರಿಸಲಾಯಿತು. ಪ್ರಾಚಾರ್ಯ ರಾಜರಾಜೇಶ್ವರ ರಾವ್ ಮಾತನಾಡಿ ವಿದ್ಯಾರ್ಥಿಗಳು ಕನ್ನಡ ನಾಡು, ನುಡಿಯನ್ನು ಗೌರವಿಸಬೇಕು. ಪ್ರತಿಯೊಬ್ಬ ಕನ್ನಡಿಗನು ನಾಡು ನುಡಿಯ ರಕ್ಷಣೆಗೆ ಮುಂದಾಗಬೇಕು ಅಲ್ಲದೇ ಭಾಷಾಭಿಮಾನ ಮೂಡಿಸಿಕೊಳ್ಳಬೇಕೆಂದು ಮಾತನಾಡಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ರಾಮು ವಡಕಿ, ಶಿವಪ್ರಸಾದ ಹಾದಿಮನಿ, ಪ್ರದೀಪ ಬಳ್ಳೊಳ್ಳಿ, ಶಿವಬಸಪ್ಪ ಮಸ್ಕಿ, ಮಾರ್ಕಂಡಯ್ಯ, ಬಸವಂತಪ್ಪ, ಶಿವಯ್ಯ ಸಿಂಧೋಗಿಮಠ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾಲೇಜಿನ ಮುಂಭಾಗದಲ್ಲಿನ ಹಸಿರು ಹಾಸಿಗೆಯ ನೆಲದಲ್ಲಿ ಕನ್ನಡವೇ ಸತ್ಯ, ಕನ್ನಡವೇ ನಿತ್ಯ ಎಂಬ ಹೂವಿನ ಬರಹ ಆಕರ್ಷಕವಾಗಿ ಗಮನ ಸೆಳೆಯಿತು. ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.

Please follow and like us:
error