ವೃದ್ದಾಶ್ರಮದಲ್ಲಿ ಹೊಸ ವರ್ಷ ಆಚರಣೆ

akkamahadevi_mahila_mandalaಕೊಪ್ಪಳ : ನಗರದ ಶ್ರೀ ಮೈತ್ರಿ ಅಸೋಸಿಯೇಷನ್ (ರಿ) ವೃದ್ಧ ಆಶ್ರಮದಲ್ಲಿ ಅಕ್ಕಮಹಾದೇವಿ ಮಹಿಳಾ ಮಂಡಳಿ ವತಿಯಿಂದ ಹೊಸವರ್ಷವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ವೃದ್ಧ ಆಶ್ರಯದಲಿ ಇರುವಂತಹ ಹಿರಿಯರಿಗೆ ಬಟ್ಟೆ, ಹಣ್ಣು, ಕೇಕ್, ಬಿಸ್ಕೇಟ್‌ಗಳನ್ನು ಕೊಟ್ಟು ಅವರ ಮಾತುಗಳನ್ನು ಆಲಿಸಿ ಸಾಂತ್ವಾನ ಹೇಳಿದರು, ಇತರ ನಮ್ಮ ಮಹಿಳಾ ಮಂಡಳಿಯರವರು ಹೊಸವರ್ಷವನ್ನು ವಿಜೃಂಭಣೆಯಿಂದ ಆಚರಿಸಿದರು. ನಂತರ ಮಳೆಮಲ್ಲೇಶ್ವರ ದೇವಸ್ಥಾನಕ್ಕೆ ಹೋಗಿ ಅಲ್ಲಿರುವ ಮಂಗಗಳಿಗೂ ಸಹ ಹಣ್ಣುಗಳನ್ನು ಕೊಡುವುದರ ಮೂಲಕ ಹೊಸ ವರ್ಷವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಅಕ್ಕಮಹಾದೇವಿ ಮಹಿಳಾ ಮಂಡಳಿ ಅಧ್ಯಕ್ಷೆಯಾದ ಕೋಮಲಾ ಕುದರಿಮೋತಿ, ಕವಿತಾ ಸೋಮಲಾಪೂರ, ಜಯಶ್ರೀ ಶಿವಶೆಟ್ಟರ, ಗಿರಿಜಕ್ಕ ಬಳ್ಳೊಳ್ಳಿ, ಪ್ರೇಮಾ ಮಟ್ಟಿ, ಶಾರಕ್ಕ ಪಾವಲಿ ಶೆಟ್ಟರ, ಕಾಳಮ್ಮ, ಸುಶಿಲಕ್ಕ, ಸುಶ್ಮಾ ವಿಜಕ್ಕ, ಸುಮಾ, ಶೇಕುಂತಲಾ, ಹೇಮಾ, ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Leave a Reply