ವಿಶ್ವಕ್ಕೆ ಮಾದರಿ ಕೊಪ್ಪಳದ ಈ ಜೋಡಿ

ಜಾತಿ, ಧರ್ಮ , ಮೇಲು ಕೀಳು ಹೆಸರಿನಲ್ಲಿ ಮನುಷ್ಯರು ಹೊಡೆದಾಡುತ್ತಿದ್ದರೆ ಅವರಿಗೆಲ್ಲಾ ಪಾಠ ಕಲಿಸುವಂತೆ ಈ ಪ್ರಾಣಿಗಳು ಒಂದಾಗಿ ಬಾಳುತ್ತಿವೆ. ಕೋತಿ ಮತ್ತು ಹಂದಿಗಳು ಒಟ್ಟಾಗಿ ಬದುಕುವ ಮೂಲಕ ಬೇರೆಯವರಿಗೆ ಮಾದರಿಯಾಗಿವೆ.  ಮುಳ್ಳು ಕಂಟಿಯಲ್ಲಿರೋ ಹಂದಿಗಳ ಹಿಂಡು. ಆ ಹಿಂಡುಗಳ ಮಧ್ಯೆ ಗಮನಸೆಳೆಯುತ್ತಿರೋ ಒಂದು ಮಂಗ. ಮಂಗ ಹಾಗೂ ಹಂದಿಗಳ ನಡುವಿನ ಅವಿನಾಭಾವ ಸಂಬಂಧ ಇದನ್ನು ಕಂಡು ಕಣ್ತುಂಬಿಕೊಳ್ತಿರೋ ಮಕ್ಕಳು.  ಕೊಪ್ಪಳದ ಬಿ.ಟಿ ಪಾಟೀಲ್ ಬಡಾವಣೆಯಲ್ಲಿ. ಅಂದಹಾಗೆ ಮಂಗ ಹಂದಿಯ ಮೇಲೆ ರಾಜನಂತೆ ಕುಳಿತು ವಿಹರಿಸ್ತಿರೋ ದೃಶ್ಯವಂತೂ ಮಂಗನ ರಾಜವೈಭವವನ್ನ ತೋರಿಸುತ್ತಿದೆ. ಹಂದಿಗಳ ಮೇಲೆ ಜನರಾರಾದರೂ ಕಲ್ಲು ಎಸೆದರೆ ಸಾಕು ಮಂಗ ಹಂದಿಗಳ ಬೆನ್ನೇರಿ ಹಂದಿಗಳೋಂದಿಗೆ ಓಡಿ ಹೋಗುತ್ತದೆ. ಇನ್ನು ಈ ಬಡಾವಣೆಯ ಹಂದಿಗಳ ಪಾಲಿಗಂತು ಮಂಗ ರಕ್ಷಕವಾಗಿದೆ. ಮೊದಮೊದಲು ಜನರಿಗೆ ಇದು ಗಮನಕ್ಕೆ ಬಂದಿರಲಿಲ್ಲ.

ಆದರೆ ದಿನಗಳೆದಂತೆ ನಿರಂತರವಾಗಿ ಕೋತಿ ಮತ್ತು ಹಂದಿಗಳು ಜೊತೆಯಲ್ಲಿ ಏರಿಯಾದಲ್ಲಿ ತಿರುಗಾಡುವುದು, ಚಿನ್ನಾಟವಾಡುವುದು ಕಂಡು ಬಂದಿದೆ. ಕೋತಿ ತನಗೆ ಯಾರಾದರೂ ಏನಾದ್ರೂ ತಿನ್ನಲು ಕೊಟ್ಟರೆ ಅದkoppal-monkey-pig-story-friendship-splನ್ನು ತಂದು ಹಂದಿಗಳ ಜೊತೆ ಹಂಚಿಕೊಂಡು ತಿನ್ನುತ್ತದೆ. ಅದೇ ರೀತಿ ಹಂದಿಗಳು ಸಹ ಯಾವುದೇ ರೀತಿಯಲ್ಲಿ ಗಲಾಟೆ ಮಾಡದೇ ಕೋತಿಯೊಂದಿಗೆ ಹಂಚಿಕೊಂಡು ತಿನ್ನುತ್ತಿವೆ  ಕಳೆದ ಹಲವಾರು ತಿಂಗಳಿಂದ ಒಂದಾಗಿ ಬಾಳುತ್ತಿರುವ ಹಂದಿ ಮತ್ತು ಕೋತಿ  ಸ್ಥಳೀಯರಿಗೆ ಆಕರ್ಷಣೆಯ ಕೇಂದ್ರಬಿಂದುವಾಗಿವೆ. ಹಂದಿಗಳ ಹಿಂಡಿನೊಳಗೊಂದಾಗಿ ಜೀವಿಸುತ್ತಿರೋ ಮಂಗ. ಕಳೆದ ಮೂರು ತಿಂಗಳಿಂದ ಹಂದಿ ಪರಿವಾರದಲ್ಲಿ ಜೀವನ ಸಾಗಿಸ್ತಿದೆ. ಪ್ರತಿ ದಿನ ಕೂಡಾ ಈ ಮಂಗ ಹಿರಿಯ ಹಂದಿಯ ಹಾಲನ್ನ ಕುಡಿಯುತ್ತದೆ. ಇನ್ನು ಮಂಗಕ್ಕೆ ಯಾವದೇ ತೊಂದ್ರೇ ಮಾಡದೆ ದೋಡ್ಡ ಹಂದಿ ತನ್ನ ಮರಿಗೆ ಹೇಗೆ ಹಾಲು ಕುಡಿಸುತ್ತೆ ಹಾಗೆ ಮಂಗಕ್ಕೂ ಹಾಲು ಕುಡಿಯಲು ಅನುವು ಮಾಡಿಕೊಡುತ್ತದೆ. ಇನ್ನು ಮಂಗ ಹಂದಿಯ ಬೆನ್ನಿನ ಮೇಲೆ ಕೈಯಾಡಿಸಿ, ಬೆನ್ನಿನ ಮೇಲಿರುವ ಹುಳಗಳನ್ನ ಹೆಕ್ಕಿ ತೆಗೆಯುತ್ತೇ. ಇನ್ನೋಂದು ವಿಶೇಷತೆ ಅಂದರೆ ಈ ಮಂಗಕ್ಕೆ ಯಾರಾದರೂ ಆಹಾರ ಏನಾದರೂ ತಿನ್ನಲು ಕೊಟ್ಟರೆ ಹಂದಿಗಳೊಂದಿಗೆ ಹಂಚಿಕೊಂಡು ತಿನ್ನುತ್ತದೆ, ಅದೇ ರೀತಿ ಹಂದಿಗಳು ಸಹ ಯಾವದೇ ರೀತಿಯ ಗಲಾಟೆ ಮಾಡದೇ ಮಂಗನನೋಂದಿಗೆ ಹಂಚಿಕೋಂಡು ತಿನ್ನುತ್ತವೆ.ಮಂಗ ಮತ್ತು ಹಂದಿ ಒಟ್ಟೊಟ್ಟೊಗೆ ಬದುಕುತ್ತಿರೋದನ್ನ ಕಂಡ ಬಡಾವಣೆಯ ಜನರಂತೂ  ಸಂತಸ ಪಡ್ತಿದ್ದಾರೆ. ಇನ್ನು ಈ ಕೋತಿ ಬಡಾವಣೆಯಲ್ಲಿ ಯಾವದೇ ರೀತಿಯ ಗಲಾಟೆ ಮಾಡದೇ ಇರುವದರಿಂದ ಬಡಾವಣೆಯ ಜನರ ನೆಚ್ಚಿನ ಪ್ರಾಣಿಯಾಗಿದೆ. ಮನೆಯ ಮೇಲೆ, ಮಕ್ಕಳ ಮೇಲೆ ಯಾವತ್ತೂ ಹಲ್ಲೆ ಮಾಡುವುದಾಗಲಿ, ಅಟ್ಟಿಸಿಕೊಂಡು ಬರುವುದಾಗಲಿ ಮಾಡಿಲ್ಲ. ಸಾಕಿದ ಕೋತಿಯಂತೆ ವರ್ತಿಸುತ್ತಿದೆ. ಹೀಗಾಗಿ ಸ್ಥಳೀಯರು ಅದಕ್ಕೆ ಆಗಾಗ ಏನಾದರೂ ತಿನ್ನಲು ಕೊಟ್ಟೆ ಕೊಡುತ್ತಾರೆ. ಕಚ್ಚಾಡುವವರಿಗೆ ಪಾಠ ಹೇಳುವಂತೆ ವರ್ತಿಸುತ್ತಿರುವ ಈ ಪ್ರಾಣಿಗಳು ಮನುಷ್ಯನಿಗೆ ಮನುಷ್ಯತ್ವ  ಎಂದರೇನು ಎಂದು ಪಾಠ ಹೇಳಿಕೊಡುತ್ತಿವೆ.

Please follow and like us:
error