ವಿದೇಶಕ್ಕೆ ಹೋಗಿಬರುವುದೆ ಪ್ರಧಾನಿಯ ೨ ವರ್ಷದ ಸಾದನೆ – ಶಾಸಕ ಕೆ,ರಾಘವೇಂದ್ರ ಹಿಟ್ನಾಳ

modikoppal=mla
ಕೊಪ್ಪಳ ೧೮. ಕ್ಷೇತ್ರದ ಚುಕ್ಕನಕಲ್ಲ ,ಮುದ್ದಾಬಳ್ಳಿ ಹೊಸಗೊಂಡಬಾಳ, ಹ್ಯಾಟಿ ಮಳ್ಳಿಕೇರಿ ,ಬಿ ಹೊಸಳ್ಳಿ ಹಾಗೂ ಬಹದ್ದುರಬಂಡಿ ಹೂವಿನನಾಳ ಗ್ರಾಮದಲ್ಲಿ ವಿವಿಧ ಯೋಜನೆ ಅಡಿಯಲ್ಲಿ ರೂ ೩.೬೦ಕೊಟಿಯ ಸಿ,ಸಿ,ರಸ್ತೆ ಗ್ರಂಥಾಲಯ ಅಂಗನವಾಡಿ ಕಟ್ಟಡ ಶುದ್ದ ಕುಡಿಯು ನೀರಿನ ಘಟಕ ಚಂರಡಿ ಕಾಮಗಾರಿಗಳ ಭೂಮಿ ಪೂಜೆ ನೇರವೇರಿಸಿ ಮಾತನಾಡಿದ ಶಾಸಕ ಕೆ,ರಾಘವೆಂದ್ರ ಹಿಟ್ನಾಳರವರು ಪ್ರಧಾನಿ ನರೇಂದ್ರ ಮೊದಿಯವರು ದೇಶದ ಜನತೆಗೆ ನೀಡಿದ ಆಶೋತ್ತರಗಳನ್ನು ಸಂಪೂರ್ಣ ವಿಫಲರಾಗಿ ಕೇವಲ ವಿದೇಶಕ್ಕೆ ಹೋಗಿಬರುವುದೆ ಇವರ ಸಾಧನೆಯಾಗಿದೆ. ಜನ್‌ದನ್ ಯೋಜನೆ ಮುಂಖಾತರ ದೇಶದ ಬಡವರಿಗೆ ಹಾಗೂ ಮದ್ಯಮ ವರ್ಗದ ಜನರ ಖಾತೆಗೆ ರೂ೧೫ಲಕ್ಷ ಜಮಾ ಮಾಡುತ್ತೆವೆ ಎಂದು ಹೇಳಿದ ಪ್ರಧಾನಿ ಮೋದಿಯವರು ಎರಡು ವರ್ಷ ಗತಿಸಿದರು ಇನ್ನು ಯಾರ ಖಾತೆಗೂ ಬೋಣಿಗೆ ಮಾಡಿಲ್ಲಾ ,ನಾನು ತಿನ್ನುವದಿಲ್ಲಾ ಬೇರೆಯವರಿಗು ತಿನ್ನೂವದಕ್ಕೆ ಬಿಡುವದಿಲ್ಲಾ ಎಂದು ಹೇಳಿದ ಪ್ರಧಾನಿಯವರು ದೇಶದ ಉದ್ದಗಲಕ್ಕು ದಿನ ನಿತ್ಯ ಊಟಕ್ಕೆ ಬಡವರು ಬಳಸುವ ಬೇಳೆಕಾಳುಗಳ ಬೆಲೆ ಗಗನಕ್ಕೆ ಏರಿಸಿ ಕೇವಲ ವಿದೇಶಿ ಊಟ ಸವಿಯುತ್ತಿದ್ದಾರೆ ಲಲಿತ ಮೋದಿ ಹಾಗೂ ವಿಜಯ ಮಲ್ಯನನ್ನು ದೇಶಕ್ಕೆ ಕರೆತರದ ಇವರು ದಾವುದ ಇಬ್ರಾಂಹಿಂನ್‌ನ್ನು ೧೦೦ ದಿನದಲ್ಲಿ ಕನಸಿನ ಮಾತೆಂದು ಲೇವಡಿ ಮಾಡಿದರು. ಕೊಪ್ಪಳದ ಹಿಂದಿನ ಬಿಜೆಪಿ ಶಾಸಕರು ವ್ಶೆದ್ಯಕಿಯ ಕಾಲೇಜು ಭೂಮಿ ಖರೀದಿಗೆ ರೂ ೭ಕೋಟಿ ಅನುದಾನ ತಂದಿರುವದು ಮಾತ್ರವಾಗಿದ್ದು ನಾವು ಯಾವುದೆ ಕೆಲಸ ಮಾಡಿದರು ಅದು ನಮ್ಮ ಅನುದಾನ ಎಂದು ಹೇಳುತ್ತಿದ್ದಾರೆ. ಹಾಗದರೆ ನೀವು ಏಕೆ ಕ್ಷೇತ್ರದ ಅಭಿವೃದ್ದಿಗೆ ಕೆಲಸ ಮಾಡಲಿಲ್ಲಾ ಎಂದು ಹಿಂದಿನ ಶಾಸಕರ ಕಾರ್ಯವೈಖರ್ಯದ ಬಗ್ಗೆ ಪ್ರಶ್ನಾತಿತವಾಗಿ ಜನರಿಗೆ ಮನದಟ್ಟು ಮಾಡಿದರು.
ಈ ಸಂದರ್ಬದಲ್ಲಿ ಜಿ ಪಂ ಅದ್ಯಕ್ಷರಾದ ಎಸ್ ಬಿ ನಾಗರಳ್ಳಿ ಜಿ ಪಂ ಸದಸ್ಯ ಗೂಳಪ್ಪ ಹಲಗೆರಿ ಶರಣಪ್ಪ ಸಜ್ಜನ ಅಮರೇಶ ಉಪುಲಾಪುರ ರಾಜುರೆಡ್ಡಿ ಸುರೇಶ ರೆಡ್ಡಿ ಮಾದಿನೂರು ಚಾಂದಪಾಷ ಕೀಲ್ಲೆದಾರ ಗೊವಿಂದರಡ್ಡಿ ವಾಸಪ್ಪ ಮುದ್ದಿ ಶಂಕ್ರಪ್ಪ ಬಟಗೇರಿ ಶರಣಗೌಡ ಪಾಟೀಲ ಹನುಮೇಶ ಹೊಸಳ್ಳಿ ರಾಮನಗೌಡ್ರ ಸಣ್ಣ ಹನುಮಂತಪ್ಪ ದೇವಪ್ಪ ಹೊಸಳ್ಳಿ ಅಧಿಕಾರಿಗಳಾದ ಕ್ರಿಷ್ಣ ಮೂರ್ತಿ ಜೇಸ್ಕಾಂ ಅಧಿಕಾರಿ ಗಂಗಾಧರ ಪಂಚಾಯತಗಳ ಪಿಡಿಒಗಳು ವಕ್ತಾರ ಅಕ್ಬರ ಪಾಷ ಪಲ್ಟನ ಉಪಸ್ಥಿತರಿದ್ದರು

Please follow and like us:
error