ವಿಜ್ಞಾನ ಕೌಶಲ ಶಿಕ್ಷಕ ಪ್ರಶಸ್ತಿಗೆ ಮಾಹಿತಿ ಆಹ್ವಾನ

ಕೊಪ್ಪಳ, ಡಿ. ೮. ನಗರದ ಸ್ವರಭಾರತಿ ಗ್ರಾಮೀಣಾಬಿವೃದ್ಧಿ ಮತ್ತು ಸಾಂಸ್ಕೃತಿಕ ಸಂಸ್ಥೆ ಹಾಗೂ ವಿಶ್ವ ಪ್ರಿಂಟರ‍್ಸ್ ಮತ್ತು ಪಬ್ಲೀಷರ‍್ಸ್ ವತಿಯಿಂದ ಮೊದಲ ಬಾರಿಗೆ ವಿಜ್ಞಾನ ಮತ್ತು ವೈಜ್ಞಾನಿಕ ಕಾರ್ಯಗಳನ್ನು ಕ್ರಿಯಾಶೀಲವಾಗಿ ಅಳವಡಿಸಿಕೊಂಡಿರುವ ವಿಜ್ಞಾನ ಶಿಕ್ಷಕ ಪ್ರಶಸ್ತಿಗೆ ಮಾಹಿತಿ ಆಹ್ವಾನಿಸಲಾಗಿದೆ.
ಈ ಕುಇರಿತು ಪ್ರಕಟಣೆ ನೀಡಿರುವ ಸಂಘಟಕ ಮಂಜುನಾಥ ಜಿ. ಗೊಂಡಬಾಳ ಮೊದಲ ಬಾರಿಗೆ ಜಿಲ್ಲಾ ಮತ್ತು ತಾಲೂಕ ಮಟ್ಟದ ಉತ್ತಮ ವಿಜ್ಞಾನ ಕೌಶಲ ಶಿಕ್ಷಕ ಪ್ರಶಸ್ತಿಯನ್ನು ಜನೇವರಿಯಲ್ಲಿ ಪ್ರದಾನ ಮಾಡಲಾಗುವದು.
ಅದಕ್ಕಾಗಿ ಶಿಕ್ಷಕರು ತಮ್ಮ ವೈಜ್ಞಾನಿಕ ಕಾರ್ಯಚಟುವಟಿಕೆಗಳ ಮಾಹಿತಿಯನ್ನು ಡಿಸೆಂಬರ್ ೧೮ರೊಳಗೆ ನೀಡಲು ಕೋರಿದ್ದಾರೆ. ಇದೇ ವೇಳೆ ೧೦ನೇ ತರಗತಿ ವಿದ್ಯಾರ್ಥಿಗಳಿಗೆ ವಿಶ್ವ ವಿಜ್ಞಾನ ಪ್ರತಿಭಾ ಪರೀಕ್ಷೆಯನ್ನು ಹಮ್ಮಿಕೊಂಡಿದ್ದು ಜಿಲ್ಲಾ ಮತ್ತು ತಾಲೂಕ ಮಟ್ಟದಲ್ಲಿ ವಿಜೇತರಿಗೆ ನಗದು ಬಹುಮಾನ ನೀಡಲಿದೆ ಎಂದು ತಿಳಿಸಿದ್ದಾರೆ.
ಮೊದಲ ಬಾರಿಗೆ ಪುಸ್ತಕವನ್ನು ನೀಡಿ ಪರೀಕ್ಷೆ ನಡೆಸುತ್ತಿದೆ. ರಾಜ್ಯದ ಏಕೈಕ ಸಂಸ್ಥೆಯಾಗಿದ್ದು, ವಿದ್ಯಾರ್ಥಿಗಳಿಗೆ ಅದರಲ್ಲೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸೂಕ್ತ ವೇದಿಕೆ ನೀಡುವ ಉದ್ದೇಶದೊಂದಿಗೆ ಪರೀಕ್ಷಾ ಶುಲ್ಕವಿಲ್ಲದೇ ಕನ್ನಡ ಮತ್ತು ಇಂಗ್ಲೀಷ ಭಾಷೆಯಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ.
ವಿಜಯಕುಮಾರ ಜಿ. ಗೊಂಡಬಾಳ ರಚಿಸಿರುವ ಎಸ್‌ಎಸ್‌ಎಲ್‌ಸಿ ವಿಜ್ಞಾನ ಪುಸ್ತಕವನ್ನು ಆಧರಿಸಿ ಪರೀಕ್ಷೆ ನಡೆಸಲಾಗುತ್ತಿದೆ, ಪರೀಕ್ಷೆಯನ್ನು ಆಯಾ ಶಾಲೆಯಲ್ಲಿಯೇ ನಡೆಸಿ ನಂತರ ತಾಲೂಕ ಹಾಗೂ ಜಿಲ್ಲಾಮಟ್ಟದ ವಿಜೇತರನ್ನು ಬಹುಮಾನಕ್ಕೆ ಆಯ್ಕೆ ಮಾಡಿ ಭವ್ಯವಾದ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಪ್ರಶಸ್ತಿ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಯನ್ನು ಆನಂದ ಜಿ. ಗೊಂಡಬಾಳ, ಐಶ್ವರ್ಯ ಪ್ರಿಂಟರ‍್ಸ್, ಡಾ|| ಅಂಬೇಡ್ಕರ್ ಸರ್ಕಲ್, ಕೊಪ್ಪಳ-ಮೊ: ೮೧೪೭೩೪೮೪೪೦ ಇಲ್ಲವೇ ಖುದ್ದಾಗಿ ಸಂಪರ್ಕಿಸಬಹುದು .

Leave a Reply