ವಿಕಲಚೇತನರಿಗೆ ಸಚಿವರಿಂದ ತ್ರಿಚಕ್ರ ವಾಹನ ವಿತರಣೆ

ಕೊಪ್ಪಳ ಏ. ಶಿವರಾಜ್-ತಂಗಡಗಿ-ಕೊಪ್ಪಳ-ಉಸ್ತುವಾರಿ-ಸಚಿವ: ಜಿಲ್ಲಾ ಪಂಚಾಯತಿ ಶಾಸನಬದ್ಧ ಅನುದಾನ ಹಾಗೂ ೧೩ನೇ ಹಣಕಾಸು ನಿಧಿಯಡಿ ಮಂಜೂರು ಮಾಡಲಾದ ತ್ರಿಚಕ್ರ ವಾಹನಗಳನ್ನು ಜಿಲ್ಲೆಯ ೨೪ ವಿಕಲಚೇತನ ಫಲಾನುಭವಿಗಳಿಗೆ ಜಿಲ್ಲಾ ಉಸ್ತುವಾರಿ ಮತ್ತು ಸಣ್ಣ ನೀರಾವರಿ ಸಚಿವ ಶಿವರಾಜ ಎಸ್ ತಂಗಡಗಿ ಬುಧವಾರದಂದು ವಿತರಿಸಿದರು. ೨೦೧೪-೧೫ ಹಾಗೂ ೨೦೧೫-೧೬ನೇ ಸಾಲಿನ ೧೩ ನೇ ಹಣಕಾಸು ನಿಧಿ ಹಾಗೂ ಜಿಲ್ಲಾ ಪಂಚಾಯತಿ ಶಾಸನಬದ್ಧ ಅನುದಾನದಡಿ ಮಂಜೂರಾದ ತ್ರಿಚಕ್ರ ವಾಹನಗಳನ್ನು ಜಿಲ್ಲಾ ಉಸ್ತುವಾರಿ ಹಾಗೂ ಸಣ್ಣ ನೀರಾವರಿ ಸಚಿವ ಶಿವರಾಜ್ ತಂಗಡಗಿ ಅವರು ಜಿಲ್ಲೆಯ ೨೪ ವಿಕಲಚೇತನ ಫಲಾನುಭವಿಗಳಿಗೆ ಜಿಲ್ಲಾ ಪಂಚಾಯತ್, ಆವರಣದಲ್ಲಿ ಏ. ೦೬ ಬುಧವಾರದಂದು ವಿತರಿಸಿದರು. ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ, ನಗರಸಭೆ ಅಧ್ಯಕ್ಷ ಮಹೇಂದ್ರ ಛೋಪ್ರಾ, ಜಿ.ಪಂ. ಸದಸ್ಯ ವಿಶ್ವನಾಥ ರೆಡ್ಡಿ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಆರ್. ರಾಮಚಂದ್ರನ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತ್ಯಾಗರಾಜನ್ ಉಪಸ್ಥಿತರಿದ್ದರು.

Related posts

Leave a Comment