ವಸತಿ ನಿಲಯಗಳ ಖಾಲಿ ಇರುವ ಸ್ಥಾನಗಳಿಗೆ ಪ್ರವೇಶಕ್ಕೆ ಅರ್ಜಿ ಆಹ್ವಾನ.

ಕೊಪ್ಪಳ, ಯಲಬುರ್ಗಾ ತಾಲೂಕ ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಕೆಯಿಂದ ಮೆಟ್ರಿಕ್ ಪೂರ್ವ ಬಾಲಕ/ಬಾಲಕಿಯ ವಿವಿಧ ವಸತಿ ನಿಲಯಗಳಲ್ಲಿ ಖಾಲಿ ಇರುವ ಸ್ಥಾನಗಳಿಗೆ ಪ್ರಸಕ್ತ ಸಾಲಿಗೆ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಬಾಲಕರ ವಸತಿ ನಿಲಯಗಳಾದ ಯಲಬುರ್ಗಾ, ಬಂಡಿ, ಬಂಡಿಹಾಳ, ಕುಕನೂರು, ಮಂಡಲಗೇರಿ, ಯರೆಹಂಚಿನಾಳ, ತಳಕಲ್ಲ, ಮಂಗಳೂರು, ಬೇವೂರು, ಹಿರೇವಂಕಲಕುಂಟಾ, ಬಳೂಟಗಿ, ಗಾಣದಾಳ ಹಾಗೂ ಬಾಲಕಿಯರ ವಸತಿ ನಿಲಯಗಳಾದ ಗುನ್ನಾಳ, ಇಟಗಿ ಮತ್ತು ಯಲಬುರ್ಗಾ ಮೆಟ್ರಿಕ್ ಪೂರ್ವ ವಸತಿ ನಿಲಯಗಳಲ್ಲಿ ಖಾಲಿ ಇರುವ ಸ್ಥಾನಗಳಿಗೆ ೫ ರಿಂದ ೧೦ ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹು11KGR2epದಾಗಿದೆ. ನವೀಕರಣ ವಿದ್ಯಾರ್ಥಿಗಳು ಕಳೆದ ಸಾಲಿನಲ್ಲಿ ಪಾಸಾದ ಅಂಕಪಟ್ಟಿ ಜಾತಿ ಆದಾಯ ಪ್ರಮಾಣ ಪತ್ರಗಳ ದೃಢೀಕೃತ ಪ್ರತಿಗಳೊಂದಿಗೆ ಸಂಬಂದಪಟ್ಟ ನಿಲಯಗಳ ಮೇಲ್ವಿಚಾರಕರಲ್ಲಿ ಸಲ್ಲಿಸಬಹುದಾಗಿದೆ.
ನಿಗದಿತ ಅರ್ಜಿಗಳನ್ನು ಯಲಬುರ್ಗಾ ತಾಲೂಕ ಹಿಂದುಳಿದ ವರ್ಗಗಳ ವಿಸ್ತೀರ್ಣಾಧಿಕಾರಿಗಳ ಕಾರ್ಯಾಲಯದಲ್ಲಿ ಪಡೆದು ಭರ್ತಿ ಮಾಡಿ ಕೆಳಕಂಡ ದಾಖಲೆಗಳೊಂದಿಗೆ ಜೂ.೧೦ ರೊಳಗಾಗಿ ಸಲ್ಲಿಸಬಹುದಾಗಿದೆ. ಅರ್ಜಿಯೊಂದಿಗೆ ಪ್ರವರ್ಗ-೧, ೨ಎ,೨ಬಿ, ೩ಎ,೩ಬಿ ಹಾಗೂ ಪ.ಜಾತಿ/ಪ.ಂಗಡದ ಅಭ್ಯರ್ಥಿಗಳು ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಲಗತ್ತಿಸಬೇಕು. (೨ಎ, ೨ಬಿ, ೩ಎ, ೩ಬಿ ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ವರಮಾನ ರೂ.೪೪೫೦೦ ದೊಳಗಿರಬೇಕು) ಹಾಗೂ (ಪ್ರವರ್ಗ-೧ ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ವರಮಾನ ರೂ.೧ ಲಕ್ಷದೊಳಗಿರಬೇಕು) ಶಾಲೆಗಳಲ್ಲಿ ಪ್ರವೇಶ ಪಡೆದಿರುವ ಬಗ್ಗೆ ಮುಖ್ಯೋಪಾದ್ಯಾಯರಿಂದ ದೃಢೀಕರಣ ಪತ್ರ. ಗ್ರಾಮ ಪಂಚಾಯತಿಯಿಂದ ನೀಡಲಾಗುವ ಸ್ಥಳ ಅಂತರ ಪ್ರಮಾಣ ಪತ್ರ, ಹಿಂದಿನ ತರಗತಿಯಲ್ಲಿ ಪಾಸಾದ ಅಂಕಪಟ್ಟಿ, ಭಾವಚಿತ್ರ ಹಾಗೂ ಎಲ್ಲಾ ದಾಖಲೆಗಳೊಂದಿಗೆ ಜೂನ್ .೧೦ ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಎಂದು ಯಲಬುರ್ಗಾ ತಾಲೂಕ ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳು ತಿಳಿಸಿದ್ದಾರೆ.

Please follow and like us:
error

Related posts

Leave a Comment