ವಯಸ್ಸಾಗುವುದನ್ನು ತಡೆಯಲು ಏನು ತಿನ್ನಬೇಕು ಗೊತ್ತಾ…!

ದಾಳಿಂಬೆ ಯಾರಿಗೆ ಇಷ್ಟವಾಗಲ್ಲ ಹೇಳಿ, ಈ ವಿಚಾರವನ್ನು ಹೇಳಿದರೆ ನೀವು ದಾಳಿಂಬೆಯನ್ನು ಇನ್ನಷ್ಟು ಇಷ್ಟಪಡುತ್ತೀರಿ. ಅದೇನಪ್ಪಾ ಅಂತಹ ವಿಚಾರ ಅಂತಿರಾ.ದಾಳಿಂಬೆ ಹಣ್ಣನ್ನು ಹೆಚ್ಚು ತಿನ್ನುವುದರಿಂದ ಚರ್ಮ ಬಹುಬೇಗ ಸುಕ್ಕುಗಟ್ಟುವುದು, ವಯಸ್ಸಾದ ಲಕ್ಷಣಗಳು ಬೇಗ ಕಾಣಿಸಿಕೊಳ್ಳುವುದಿಲ್ಲ ಎಂದು ಅಧ್ಯಯನವೊಂದು ತಿಳಿಸಿದೆ. ಇದನ್ನು ಹೆಚ್ಚು ತಿನ್ನುವುದರಿಂದ ಕರುಳಿನಲ್ಲಿ ಸೂಕ್ಷ್ಮ ಜೀವಿಗಳು ರೂಪಾಂತರಗೊಳ್ಳುತ್ತದೆ.  ಈ ಸೂಕ್ಷ್ಮ ಜೀವಿಗಳು ಸ್ನಾಯುಗಳ ಜೀವಕೋಶಗಳನ್ನು ಸಕ್ರಿಯಗೊಳಿಸುತ್ತದೆ. ಇದರಿಂದ ವಯಸ್ಸಾದ ಕುರುಹು ಬೇಗ ಕಾಣಿಸಿಕೊಳ್ಳುವುದಿಲ್ಲ. dddವಯಸ್ಸಾದಂತೆ ಸ್ನಾಯುಗಳ ಕಾರ್ಯಕ್ಷಮತೆ ಕುಂದುವುದನ್ನು ದಾಳಿಂಬೆಯಿಂದ ತಡೆಯಬಹುದು. ಇದು ಪ್ರಾಕೃತಿಕ ಔಷಧ ಎಂದು ಸ್ವಿಡ್ಜರ್’ಲೆಂಡಿನ ಇಪಿಎಫ್ ಎಲ್, ಆಮಜೆಂಟಿಸ್ ಕಂಪನಿ ನಡೆಸಿದ ಸಂಶೋಧನೆ ತಿಳಿಸಿದೆ.

Leave a Reply