ವಚನ ಪಿತಾಮಹ ಶರಣ-ಫ.ಗು ಹಳಕಟ್ಟಿಯವರು ಜಯಂತಿ

basavadal-koppal ಹಾಗೂ ಜ್ಞಾನ ದಾಸೋಹಿ ಜಂಗಮಜ್ಯೋತಿ ಮಹಾ ಜಗದ್ಗುರು ಲಿಂಗಾನಂದ ಮಹಾಸ್ವಾಮಿಗಳ ಲಿಂಗೈಕ್ಯ ಸಂಸ್ಮರಣೆ ಕಾರ್ಯಕ್ರಮ ನಗರದ ಕಿನ್ನಾಳ ರಸ್ತೆಯ ಗುರು ಬಸವಮಂಟಪದಲ್ಲಿ ರಾಷ್ಟ್ರೀಯ ಬಸವದಳ ಟ್ರಸ್ಟ್ ಹಾಗೂ ಲಿಂಗಾಯತ ಧರ್ಮ ಮಹಾಸಭೆ ಸಂಯುಕ್ತ ಆಶ್ರಯದಲ್ಲಿ ನೆರವೇರಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಶರಣ ರುದ್ರಪ್ಪ ಬೆಲ್ಲದ ಮುಖ್ಯ ಶಿಕ್ಷಕರು ಕೆ.ಪಿ.ಸಿ.ಕದ್ರಾ, ಕಾರವಾರ ಜಿಲ್ಲೆ ಬಸವ ಧರ್ಮದ ಅಭ್ಯುದಯಕ್ಕೆ ಹಾಗೂ ಶರಣರ ಚಿಂತನ-ಮಂಥನ ಪುನರ ಪ್ರಾರಂಭವಾಗಿದ್ದು ಶರಣ ಫ.ಗು.ಹಳಕಟ್ಟಿ ಶರಣರ ಪರಿಶ್ರಮದಿಂದ ಅವರನ್ನು ಲಿಂಗಾಯತ ಧರ್ಮಿಯರು ಯಾವತ್ತೂ ಮರೆಯಬಾರದು ಎಂದರು ಅವರ ಜಯಂತಿಯನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ವಿಜೃಂಭಣೆಯಿಂದ ಮಾಡಬೇಕು ಎಂದು ಅಭಿಪ್ರಾಯ ಪಟ್ಟರು.
ಶರಣ ಸುಂಕಪ್ಪ ಅಮರಾಪುರ ನಿವೃತ್ತ ಕಂದಾಯ ಅಧಿಕಾರಿಗಳು ಮತನಾಡುತ್ತಾ ಶರಣ ಫ.ಗು. ಹಳಕಟ್ಟಿಯವರು ಮುದ್ರಿಸಿ ಕೊಟ್ಟಂತಹ ವಚನ ಸಾಹಿತ್ಯವನ್ನ ನಾಡಿನ ಉದ್ದಗಲಕ್ಕೂ ಪ್ರಚಾರ ಪಡಿಸಿದ ಕೀರ್ತಿ ಮಹಾಜಗದ್ಗುರು ಲಿಂಗಾನಂದ ಸ್ವಾಮಿಗಳಿಗೆ ಸಲ್ಲಿಸಿದೆ, ವಾಹನ ಸೌಕಯ್ಯೂ- ದೃಶ್ಯಮಾದ್ಯಮ ಇಲ್ಲದ ಆಕಾಲದಲ್ಲಿಯೂ ಹಳ್ಳಿ ಹಳ್ಳಿಗೆ ಹೋಗಿ ಪ್ರಚಾರ ಮಾಡಿದ್ದು ಬಸವ ಭಕ್ತಿಯನ್ನು ಬೆಳಸಿದ ಪರಿ ಅತ್ಯಬ್ದುತ ಎಂದು ನುಡಿದರು, ಗುರು ಬಸವಪುಜೆಯೊಂದಿಗೆ ಕಾರ್ಯಕ್ರಮ ಪಾರಂಭಗೊಂಡು ಪ್ರಸಾದ ದಾಸೋಹದೊಂದಿಗೆ ಮುಕ್ತಾಯಗೊಂಡಿತು.

Please follow and like us:
error