ಲಾರಿ ಟ್ರ್ಯಾಕ್ಟರ್ ಹಿಂಬದಿಗೆ ಡಿಕ್ಕಿ -7 ಜನ ಸ್ಥಳದಲ್ಲೆ ಮೃತ

bv

ಕೊಪ್ಪಳ ಜಿಲ್ಲಾ ಜನತೆಗೆ ಅದ್ಯಾರ ಶಾಪ ತಟ್ಟಿದೆಯೋ ಏನೋ ಮದುವೆ ಮಗಿಸಿಕೊಂಡು ಮರಳುವವರು ಮಸಣ ಸೇರುವಂತಾಗಿದೆ.ಕಳೆದ ಎರಡು ದಿನಗಳ ಹಿಂದೆಯಷ್ಟೇ ಕೊಪ್ಪಳ ತಾಲೂಕಿನ ಹಲಗೇರ ಗ್ರಾಮದ ಬಳಿ ಯಾರು ಕಂಡು ಕೇಳರಿಯದ ರೀತಿಯಲ್ಲಿ ಟಂ ಟಂ ಮತ್ತು ಲಾರಿ ಮುಖಾ ಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಸ್ಥಳದಲ್ಲೆ 11 ಜನ ಪ್ರಾಣ ಬಿಡುವಂತಾಗಿತ್ತು,ಈ ಅಪಘಾತ ಕೊಪ್ಪಳ ಜಿಲ್ಲೆಯ ಜನತೆ ಬೆಚ್ಚಿ ಬಿದ್ದಿದ್ದರು. ಆ ಅಫಘಾತ ಮಾಸುವ ಮುನ್ನವೇ ರಾತ್ರಿ ಕೊಪ್ಪಳ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 13koppal-accidentರ ಮೇತಗಲ್ಲ ಗ್ರಾಮದ ಬಳಿ ಮದುವೆ ಮುಗಿಸಿಕೊಂಡು ಮರಳಿ ತಮ್ಮ ಗ್ರಾಮ ಸೇರುವ ಮುನ್ನವೇ ಜವರಾಯನಂತೆ ಬಂದ ಲಾರಿ ಟ್ರ್ಯಾಕ್ಟರ್ ಹಿಂಬದಿಗೆ ಡಿಕ್ಕಿ ಹೊಡೆದ ಪರಿಣಾಮ 6 ವರ್ಷದ ಬಾಲಕೀ ಸೇರಿದಂತೆ ಮೂವರು ಮಹಿಳೆಯರು ಸೇರಿದಂತೆ 7 ಜನರು ಸ್ಥಳದಲ್ಲೆ ಸಾವಿಗೀಡಾದ ಘಟನೆ ನಡೆದಿದೆ.ಮೃತರೆಲ್ಲ ಕೊಪ್ಪಳ ತಾಲೂಕಿನ ವಣಬಳ್ಳಾರಿ ಗ್ರಾಮದವರಾಗಿದ್ದು ಗಂಗಾವತಿ ತಾಲೂಕಿನ ಕನ್ನೆರಮಡು ಗ್ರಾಮಕ್ಕೆ ಮದುವೆಗೆ ತೆರಳಿದ್ದರು,ವದು ವರರಿಗೆ ಆಶೀರ್ವದಿಸಿ ಊಟ ಉಪಚಾರ ಮಾಡಿಕೊಂಡು ಮರಳಿ ಗ್ರಾಮಕ್ಕೆ ಆಗಮಿಸುತ್ತಿರುವಾಗ ಈ ಬೀಕರ ಅವಘಡಕ್ಕೆ ತುತ್ತಾಗಿದ್ದಾರೆ. ಇನ್ನೂ ಟ್ರ್ಯಾಕ್ಟರ್ ನಲ್ಲಿ ಸುಮಾರು 25ಕ್ಕು ಹೆಚ್ಚು ಜನರು ಇದ್ದರು,7 ಜನ ಸ್ಥಳದಲ್ಲೆ ಮೃತ ಪಟ್ಟಿದ್ದಾರೆ,ಇನ್ನೂಳಿದ ಮಕ್ಕಳು ಸೇರಿದಂತೆ 18ಕ್ಕು ಹೆಚ್ಚು ಜನ ಗಂಬೀರವಾಗಿ ಗಾಯಗೊಂಡಿದ್ದು ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೇ ಪಡೆಯುತ್ತಿದ್ದಾರೆ.ಘಟನೆ ವಿಷಯ ತಿಳಿದ ಗಂಗಾವತಿ ಶಾಸಕ ಇಕ್ಬಾಲ್ ಅನ್ಸಾರಿ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಸಾಂತ್ವಾನ ಹೇಳಿದ್ರು,ಗಾಯಾಳುಗಳ ಪರಿಸ್ಥಿಯನ್ನ ವಿಚಾರಿಸಿದ್ರು,ಸಿಎಂ ಸಿದ್ದರಾಮಯ್ಯನವರಿಗೆ ಘಟನೆ ವಿಷಯ ತಿಳಿಸಿ ಮೃತರಿಗೆ ಸಿಎಂ ಪರಿಹಾರ ನಿಧಿಯಿಂದ ತಲಾ ಒಂದು ಲಕ್ಷ್ಯ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಹೇಳಿದ್ರು.

Please follow and like us:
error