ರೈತರತ್ತ ಮುಖಮಾಡಿದ ಸಿದ್ದು ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಬರ ಪ್ರವಾಸ.

ಕೊಪ್ಪಳ-15- ಭೀಕರ ಬರಗಾಲ… ಮೇವೂ ಇಲ್ಲ, ನೀರೂ ಇಲ್ಲ. ಹೌದು, ಬಿಸಲ ನಾಡು ಖ್ಯಾತಿಯ ಕೊಪ್ಪಳ ಜಿಲ್ಲೆಯಲ್ಲಿ ಭೀಕರ ಬರಗಾಲ ರೈತರನ್ನು ಕತ್ತು ಹಿಸುಕುತ್ತಿದೆ. ಮಳೆ ಬಾರದೆ ಒಣ ಭೂಮಿಯಲ್ಲಿ ಕುಳಿತು ರೈತ ಕಂಬನಿ ಮಿಡಿಯುತ್ತಿದ್ದಾನೆ. ಮತ್ತೊಂದೆಡೆ ಸದಾ ತನ್ನ ಹೆಗಲಿಗೆ ಹೆಗಲು ನೀಡುವ ಹೆತ್ತ ಮಕ್ಕಳಿಗಿಂತ ಹೆಚ್ಚಾಗಿ ನೋಡಿಕೊಂಡ ಎತ್ತುಗಳನ್ನು ಅನಿವಾರ್ಯವಾಗಿ ಕಟುಕರ ಕೈಗೆ ಕೊಡುತ್ತಿದ್ದಾನೆ. ಹೀಗಾಗಿ ಜಿಲ್ಲೆಯಲ್ಲಿ ದನಕರಗಳ ಮಾರಾಟ ಜೋರಾಗಿದೆ. ಮೇವು ನೀರು ಇಲ್ಲದೆ ದನಕರಗಳು ಮರುಗುವುದನ್ನು ನೋಡಲು ಆಗದೆ ಬಂದ ಬೆಲೆಗೆ ದನಗಳನ್ನು ಮಾರಾಟ ಮಾಡ್ತಿದ್ದಾರೆ.

????????????????????????????????????

ಜಿಲ್ಲೆಯ ಬಹುತೇಕ ತಾಲೂಕುಗಳಲ್ಲಿ ಬರಗಾಲದ ಛಾಯೆ ಆವರಿಸಿದೆ. ದನಕರುಗಳಿಗೆ ಸಮರ್ಪಕ ಮೇವು ನೀರು ಒದಗಿಸಲು ಬೇಡಿಕೆ ಇಟ್ಟರೂ ಸರ್ಕಾರ ಮಾತ್ರ ಕ್ಯಾರೆ ಅಂತಿಲ್ಲ. ಇನ್ನಾದ್ರೂ ಸರ್ಕಾರ ಜಿಲ್ಲೆಯ ರೈತರತ್ತ ಕಣ್ಣು ಹಾಯಿಸಬೇಕಿದೆ.

 

Related posts

Leave a Comment