ರಾಷ್ಡ್ರೀಯ ಕಾನೂನು ಸೇವೆಗಳ ದಿನಚರಣೆ

koppal_advocates
ಕೊಪ್ಪಳ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕೊಪ್ಪಳ ಜಿಲ್ಲಾ ವಕಿಲರ ಸಂಘ ಕೊಪ್ಪಳ ಇವರ ಜಂಟಿ ಸಹಯೋಗದಲ್ಲಿ ಬೆಳಗ್ಗೆ ೧೦.೩೦ ಕ್ಕೆ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚಾರಣೆ ನೆರವೇರಿತು ಸಭೆಯ ನಾಡಗೀತೆಯೊಂದಿಗೆ ಪ್ರಾರಂಭವಾಯಿತು. ಸಭೆಯ ಅಧ್ಯಕ್ಷತೆಯನ್ನು ವಕೀಲರ ಸಂಘದ ಅಧ್ಯಕ್ಷರಾದ ಶ್ರೀ ಆರ್.ಬಿ ಪಾನಘಂಟಿ ವಕೀಲರು ಹಾಗೂ ಉದ್ಘಾಟನೆಯನ್ನು ಜಿಲ್ಲಾ ನ್ಯಾಯಾಧಿಶರಾದ ಶ್ರೀಮತಿ ವಿಜಯಲಷ್ಮಿ ಉಪನಾಳ, ಇವರು ನೆರವೇರಿಸಿದರು. ಸಭೆಯಲ್ಲಿ ಸ್ವಾಗತ ಭಾಷಣಾವನ್ನು ಆಯ್.ಬಿ ಪತ್ತಾರ ವಕೀಲರು ನೇರವೇರಿಸಿದರು.
ಈ ಕಾರ್ಯಕ್ರಮದಲ್ಲಿ ಮುಖ್ಯತಿಥಿಗಳಾಗಿ ಬಿ, ದಶರಥ ಹಿರಿಯ ಸಿವ್ಹ್ಹಿಲ್ ನ್ಯಾಯದಿಶರು, ವಿಜಯಕುಮಾರ ಕನ್ನೂರ ಸಿವ್ಹಿಲ್ ನ್ಯಾಯದಿಶರು, ಆಸಿಪ್ ಅಲಿ ಜಿಲ್ಲಾ ಸರ್ಕಾರಿ ವಕೀಲರು, ಆರ್. ಉಮಾ ಕಿಲ್ಲೆದಾರ, ಉಪಾದ್ಯಕ್ಷರು ವಕೀಲರ ಸಂಘ, ಬಸವರಾಜ ಜಂಗ್ಲಿ ಜಂಟಿ ಕಾರ್ಯದರ್ಶಿಗಳು ವಕೀಲರ ಸಂಘ, ಸೋಮಲಿಂಗಪ್ಪ ಮೆಣಸಿನಕಾಯಿ ಖಚಾಂಚಿಗಳು ವಕೀಲರ ಸಂಘ ಇವರು ವಹಿಸಿದ್ದರು.
ಅಲ್ಲದೇ ಒಂದು ದಿನದ ಕಾನೂನು ಕಾರ್ಯಗಾರದ ವಿಶೇಷ ಉಪನ್ಯಾಸಕರಾಗಿ ಹಿರಿಯ ವಕೀಲರಾದ ವ್ಹಿ.ಎಮ್ ಬೂಸನೂರ ಮಠ ಅವರು ಕಾನೂನು ಸೇವೆಗಳ ಪ್ರಾಧಿಕಾರದ ಉದ್ದೇಶ ಹಾಗೂ ಸದುಪಯೋಗ ಕುರಿತು ಹಾಗೂ ರವಿ ಎಸ್.ಬೇಟಗೇರ , ವಕೀಲರು ಬಾಲಾಪರಾಧಿಗಳ ಹಕ್ಕುಗಳು ಕುರಿತು ಸುದೀರ್ಘ ಉಪನ್ಯಾಸ ನೀಡಿದರು.
ಸಭೆಯಲ್ಲಿ ಉಧ್ಘಾಟನಾ ಬಾಷಣದಲ್ಲಿ ವಿಜಯಲಕ್ಷ್ಮಿ ಎಸ್. ಉಪನಾಳ ಇವರು೦೯-೧೧-೨೦೧೬ ರಂದು ಭಾರತದ ಸರ್ವೊಚ್ಛ ನ್ಯಾಯಾಲಯ ಕರೆಕೊಟ್ಟ ಹಿನ್ನಲೆಯಲ್ಲಿ ಈ ದಿನಾಚಾರಣೆ ಆಚರಿಸಲಾಗುತ್ತದೆ.
ಈ ಆಚರಣೆಯ ಉದ್ದೇಶ ಮಹಿಳೆಯರು, ಬಡವರು, ಶೋಷಿತರು ಕಾನೂನಿನ ಸೇವೆಯಿಂದ ವಂಚಿತರಾಗಬಾರದು ಎಂಬ ವಿಷಯವನ್ನು ವಿವರಿಸಿದರು.
ಮುಖ್ಯ ಅತಿಥಿಗಳಾದ ಆಸಿಪ್ ಅಲಿ ಹಿರಿಯ ವಕೀಲರು/ಸರ್ಕಾರಿ ವಕೀಲರು ಕಾನೂನು ಸೇವಾ ದಿನಾಚಾರಣೆಯ ಉಗಮ ಹಾಗೂ ಬೆಳವನಿಗೆಯನ್ನು ವಿವರಿಸಿದರು.
ಸಭೇಯ ಅಧ್ಯಕ್ಷೆಯ ಭಾಷಣವನ್ನು ಆರ್.ಬಿ ಪಾನಘಂಟಿ ವಕೀಲರ ಸಂಘದ ಅಧ್ಯಕ್ಷರು ಕೊಪ್ಪಳ ಇವರು ನೆರವೆರಿಸಿದರು ಕೊನೆಗೆ ವಕೀಲರ ಸಂಘದ ಜಂಟಿ ಕಾರ್ಯದರ್ಶಿಗಲಾದ ಬಸವರಾಜ ಜಂಗ್ಲಿ ವಕೀಲರು ಸಭೆಗೆ ವಂದನಾರ್ಪನಾ ಸಲ್ಲಿಸಿದರು.

Leave a Reply