ರಾಷ್ಟ್ರೀಯ ವೈದ್ಯಕೀಯ ಆಯೋಗ ಮಸೂದೆ ಕೈಬಿಡಲು ಒತ್ತಾಯ – ಕೊಪ್ಪಳ ವೈದ್ಯರಿಂದ ಪ್ರತಿಭಟನೆ

‘ರಾಷ್ಟ್ರೀಯ ವೈದ್ಯಕೀಯ ಆಯೋಗ ಮಸೂದೆ ಕೈಬಿಡಬೇಕು’ ಎಂದು ಒತ್ತಾಯಿಸಿ ಭಾರತೀಯ ವೈದ್ಯಕೀಯ ಸಂಘದ ಕರೆ ಮೇರೆಗೆ  ಘಟಕದ ಸದಸ್ಯರು, ಜಿಲ್ಲಾಧಿಕಾರಿಗಳ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು ಚುನಾಯಿತ ವಿಧಾನದಿಂದ ಜಾರಿಯಲ್ಲಿರುವ ಭಾರತೀಯ ವೈದ್ಯಕೀಯ ಪರಿಷತ್‌ (ಎಂ.ಸಿ.ಐ) ರದ್ದುಗೊಳಿಸಿ, ಅಲ್ಲಿಯ ಸ್ಥಾನಗಳಿಗೆ ನಾಮನಿರ್ದೇಶಿತ ಸದಸ್ಯರನ್ನು ನೇಮಕ ಮಾಡಲು ಸರ್ಕಾರ ಮುಂದಾಗಿರುವುದು ಖಂಡನೀಯ’ ಎಂದು ಪ್ರತಿಭಟನಾನಿರತರು ಅಸಮಾಧಾನ ವ್ಯಕ್ತಪಡಿಸಿದರು.ಗ್ರಾಹಕ ರಕ್ಷಣಾ ಕಾನೂನಿನಡಿ ವೈದ್ಯರು ನೀಡಬೇಕಾದ ಪರಿಹಾರ ಧನಕ್ಕೆ ಮಿತಿ ನಿಗದಿಪಡಿಸಬೇಕು. ಏಕವೈದ್ಯ ಆಸ್ಪತ್ರೆಗಳನ್ನು ಕಾನೂನಿನಿಂದ ಹೊರಗಿಟ್ಟು, ಲೈಸೆನ್ಸ್‌ ರಾಜ್‌ ಪದ್ಧತಿಯನ್ನು ರದ್ದುಪಡಿಸಬೇಕು’‘ವೈದ್ಯರ ಸಣ್ಣ ತಪ್ಪುಗಳಿಗೆ ಗಂಭೀರ ಶಿಕ್ಷೆ ನೀಡುವುದನ್ನು ಬಿಟ್ಟು, ಲಿಂಗಪತ್ತೆ ಹಾಗೂ ಭ್ರೂಣ ಹತ್ಯೆ ಪ್ರಕರಣಗಳಲ್ಲಿ ಮಾತ್ರ ಅಂಥ ಶಿಕ್ಷೆ ವಿಧಿಸಬೇಕು. ವೈದ್ಯರ ಮೇಲಿನ ದೌರ್ಜನ್ಯ ತಡೆಗೆ ರಾಜ್ಯದಲ್ಲಿರುವ ಕಾಯ್ದೆಯನ್ನು ಸಮಪರ್ಕವಾಗಿ ಜಾರಿಗೆ ತರಬೇಕು’ ಎಂದು ಆಗ್ರಹಿಸಿದರು.

koppal_doctors (1) koppal_doctors (2)

Leave a Reply