ರಾಷ್ಟೀಯ ಬಸವದಳ ,ಲಿಂಗಾಯತ ಧರ್ಮಮಹಾಸಭಾ-ಐದು ದಿನಗಳ ಕಾರ್ಯಕ್ರಮ

೮೮೩ ನೇ ಬಸವ ಜಯಂತಿ ಅಂಗವಾಗಿ ದಿನಾಂಕ ೦೫-೦೬-೨೦೧೬ ರಂದು ರಾಷ್ಟೀಯ ಬಸವದಳ ಹಾಗೂ ಲಿಂಗಾಯತ ಧರ್ಮಮಹಾಸಭಾ ಹಮ್ಮಿಕೊಂಡಿದ್ದ ಐದು ದಿನಗಳ ಕಾರ್ಯಕ್ರಮಕ್ಕೆ ಚಾಲನೆ ದೊರಕಿತು.

basavadal-koppal basavadal-koppal-programme
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶರಣ ಚನ್ನಬಸಪ್ಪನವರು ಬಳ್ಳಾರಿ ಪ್ರಾಚಾರ್ಯರು ಸರಕಾರಿ ಐ.ಟಿ.ಐ ಕಾಲೇಜ್ ಕುಕನೂರ ಅವರು ಬಸವಣ್ಣನವರು ಎಲ್ಲಾ ಜಾತಿ, ವರ್ಗ, ವರ್ಣದ ಜನರಿಗೆ ತಲಪುವ ಕೆಲಸವಾಗಬೇಕು ಬಸವಣ್ಣನವರು ಕೇವಲ ಲಿಂಗಾಯತರ ಸ್ವತ್ತಲ್ಲ ಆ ನಿಟ್ಟಿನಲ್ಲಿ ಹೆಜ್ಜೆಗಳನ್ನು ಹಾಕುತ್ತಿರುವ ರಾಷ್ಟೀಯ ಬಸವದಳ ಜಿಲ್ಲಾದ್ಯಾಂತ ಶಾಖೆಗಳನ್ನ ಸ್ಥಾಪಿಸಿ ಇಂತಹ ಕಾರ್ಯಕ್ರಮಗಳನ್ನು ರೂಪಿಸಬೇಕು
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶರಣ ಶ್ರೀ ವೆಂಕಟೇಶ ಕಟ್ಟಿಮನಿ ನಿವೃತ್ತ ಪ್ರಾಚಾರ್ಯರು ಮಾತನಾಡಿ ಬಸವಣ್ಣನವರು ಸಾಮಾಜಿಕ ಕ್ರಾಂತಿಯ ಹರಿಕಾರರು, ಪೂರೋಹಿತ ಶಾಹಿಯ ವಿರುದ್ದ ದಿಟ್ಟತನದ ಧ್ವನಿ ಎತ್ತಿದ ಈ ಜಗತ್ತಿನ ಮೊದಲಿಗರು, ಜಗತ್ತಿನ ಯಾವ ಮೂಲೆಯಲ್ಲಿಯೂ ಇಂತಹ ಸಮಗ್ರ ಕ್ರಾಂತಿ ಮಾಡಿದ ಉದಾಹರಣೆಗಳು ಇಲ್ಲಾ, ಕೆಲಸಕ್ಕೆ ಕಾಯಕ ವೆಂದು ಹೆಸರಿಟ್ಟು ಧೈವತ್ವವನ್ನ ತಂದುಕೊಟ್ಟವರು ಎಂದು ನುಡಿದರು
ದಲಿತ ಕೇರಿಗಳಿಗೂ ಬಸವಣ್ಣನವರನ್ನ ಹಾಗೂ ಬಸವ ಸಾಹಿತ್ಯವನ್ನ ತಲುಪಿಸಿದಾಗ ಮಾತ್ರ ಇಂತಹ ಕಾರ್ಯಕ್ರಮಗಳಿಗೆ ಅರ್ಥ ಬರುತ್ತದ ಎಂದರು.
ಗಾಣಿಗ ಸಮಾಜದ ಮುಖಂಡರಾದ ರುದ್ರಮನಿ ಗಾಳಿ ಅವರು ಮಾತನಾಡಿ ಈ ಜಗತ್ತು ಕಂಡ ಅಪರೂಪದ ವ್ಯಕ್ತಿತ್ವ ಬಸವಣ್ಣನವರದು ಸಾಮಾನ್ಯ ಜನರನ್ನು ದೇವರೆಂದ ಮೊದಲ ಪ್ರವಾದಿ, ಪ್ರಜಾಪ್ರಭುತ್ವದ ಮೂಲ ಆಶೆಯವನ್ನ್ನು ೧೨ ನೇ ಶತಮಾನದಲ್ಲಿ ವಚನಗಳ ಮೂಲಕ ಜನ ಬದುಕಲಿ ಜಗ ಬದುಕಲಿ ಎಂದು ಮನುಕುಲದ ಏಳಿಗೆಗಾಗಿ ಜೀವನವನ್ನು ಸವೆಸಿದವರು ಬಸವಣ್ಣನವರು, ಸರಕಾರ ಕೇವಲ ರಜೆ ಘೋಷಣೆ ಮಾಡಿದರೆ ಸಾಲದು ಬಸವಣ್ಣನವರ ವಿಚಾರ ಧಾರೆಯನ್ನು ಕಾರ್ಯಂಗ ಹಾಗೂ ಶಾಸಕಾಂಗ ದಲ್ಲಿ ತಪ್ಪದೆ ಅನುಷ್ಠಾನಗೊಳಿಸಬೇಕಿದೆ ಎಂದು ಅಭಿಪ್ರಾಯ ಪಟ್ಟರು
ಕಾರ್ಯಕ್ರಮವು ನೀಲಾವತಿ ಹಾದಿಮನಿ ಹಾಗೂ ಇನ್ನಿತರ ಶರಣೆಯರಿಂದ ಬಸವಗುರು ಪೂಜೆಯ ಮಾಡುವ ಮೂಲಕ ಪ್ರಾರಂಭ ಗೊಂಡಿತು. ರೇಣಕಪ್ಪ ಮಂತ್ರಿ ವ್ಯಾಪಾರಿಗಳು ಧ್ವಜಾ ರೋಹಣವನ್ನು ನೆರವೇರಿಸದರು, ನಗರಸಭೆ ಸದಸ್ಯರಾದ ಪ್ರಾಣೇಶ ಮಾದಿನೂರ, ವಿಜಯ ಸೇನೆ ಜಿಲ್ಲಾಧ್ಯಕ್ಷರಾದ ವಿಜಯಕುಮಾರ ಕವಲೂರ, ಹೂಗಾರ ಸಮಾಜದ ಮುಖಂಡರಾದ ರಮೇಶ ಹೂಗಾರ ಕುಣಕೇರಿಯ ಶಿದ್ದನಗೌಡ ಪೂಲೀಸ್ ಪಾಟೀಲ, ಅಕ್ಕ ನಾಗಲಾಂಭಿಕೆ ಮಹಿಳಾ ಘಟಕದ ಅಧ್ಯಕ್ಷರಾದ ಶಾಂತಮ್ಮ ಕವಲೂರ ವೇದಿಕೆಯಲ್ಲಿ ಉಪಸ್ಥಿತರಿದ್ದರು ಹಿರಿಯ ಶರಣೆ ಪಾರ್ವತೆಮ್ಮ ಶೆಟ್ಟರ, ಹನಮಂತಪ್ಪ ಸಂಗೆನಹಳ್ಳಿ, ರುದ್ರಪ್ಪ ಬೆಲ್ಲದ ಹಾಗೂ ಗವಿಸಿದ್ದಪ್ಪ ಎಕಲಾಸಪೂರ ಇವರನ್ನು ಸನ್ಮಾನಿಸಲಾಯಿತು
ದಿವ್ಯ ಸಾನಿದ್ಯವನ್ನು ಪೂಜ್ಯ ಶ್ರೀ ಸದ್ಗುರು ಚನ್ನಬಸವರಾಜ ಸ್ವಾಮಿಜಿ ಬಸವ ಧi ಪೀಠ ಕೂಡಲಸಂಗಮ ವಹಿಸಿದ್ದರು
ಯಲಬುರ್ಗಾ ತಾಲೂಕಿನ ಬಳೂಟಗಿ ಗ್ರಾಮದ ರಾಜ್ಯ ಪ್ರಶಸ್ತಿ ವಿಜೇತ ಮಕ್ಕಳಿಂದ ಕೋಲಾಟ ಪ್ರದರ್ಶನ ದೊಂದಿಗೆ ಕಾರ್ಯಕ್ರಮವು ಸಮಾರೊಪಗೊಂಡಿತು.

Please follow and like us:
error

Related posts

Leave a Comment