You are here
Home > Koppal News-1 > ರಾಯಲ್ ರಡ್ಡಿ ಕ್ಷೇತ್ರದಲ್ಲಿ ಕುಡಿಯುವ ನೀರಿಗಾಗಿ ಜನರ ಪರದಾಟ

ರಾಯಲ್ ರಡ್ಡಿ ಕ್ಷೇತ್ರದಲ್ಲಿ ಕುಡಿಯುವ ನೀರಿಗಾಗಿ ಜನರ ಪರದಾಟ

ಬಿರುಕೆರೆ-ಸಮಸ್ಯೆಕು ಬಿಟ್ಟ ಕೆರೆಯ ಅಂಗಳ ಗ್ರಾಫಿಕ್ಸ್ ನಲ್ಲಿ ಡಿಜೈನ್ ಮಾಡಿದಂತಿದೆ. ಕೇಕ್ ಕತ್ತರಿಸಿ ಇಟ್ಟಂತಾಗಿದೆ. ಇದು ಬೀಕರ ಬರಗಾಲದ ಪ್ರಾತಿನಿಧ್ಯಚಿತ್ರ ಎನ್ನುವಂತಿದೆ.

ವಿಧಾನಸೌದದಲ್ಲಿ ಇಡೀ ಸರಕಾರವನ್ನೇ ಸಮರ್ಥಿಸಿಕೊಂಡು ಮಾತನಾಡುವ ಶಾಸಕನ ಕ್ಷೇತ್ರದಲ್ಲಿ ಕುಡಿಯುವ ನೀರಿಗಾಗಿ ಹಾಹಾಕರ ಎದ್ದಿದೆ.ಅಧಿಕಾರಿಗಳು ಎಸಿ ರೂಂನಲ್ಲಿ ತಣ್ಣಗೆ ಕುಳಿತಿದ್ದರೆ, ಜನತೆ ಬೀಕರ ಬರಗಾಲದಿಂದ ತತ್ತರಿಸಿ ಹೋಗಿದೆ   ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಮಾಳೆಕೊಪ್ಪ ಮತ್ತು ಸೋಂಪೂರ್ ಗ್ರಾಮದಲ್ಲಿ  ಜನತೆ ಕುಡಿಯುವ ನೀರಿಗಾಗಿ 6ರಿಂದ 12 ಕಿಮಿ ದೂರ ಹೋಗಬೇಕು . ವಾಹನ ಇರುವವರೂ ಹೇಗೋ ತಂದುಕೊಳ್ಳುತ್ತಾರೆ ಇಲ್ಲದವರು ಅನಿವಾರ್ಯವಾಗಿ ಪ್ಲೋರೈಡ್ ನೀರು ಕುಡಿಯುತ್ತಿದ್ದಾರೆ. ಕೇವಲ ಆಶ್ವಾಸನೆಗಳಲ್ಲಿಯೇ ಕಾಲತಳ್ಳುತ್ತಿರುವವರ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ  . ಮಾತೆತ್ತಿದ್ದರೆ ನೂರಾರು ಕೋಟಿ ರೂಪಾಯಿಗಳ ಯೋಜನೆಗಳ ಬಗ್ಗೆ ಮಾತನಾಡುವ ರಾಯಲ್ ರಾಯರಡ್ಡಿ ಎಂದೇ ಖ್ಯಾತರಾಗಿರುವ ಕಾಂಗ್ರೆಸ್ನ ಹಿರಿಯ ಶಾಸಕ ಬಸವರಾಜ್ ರಾಯರಡ್ಡಿ ಕ್ಷೇತ್ರದಲ್ಲಿ ಕುಡಿಯುವ ನೀರಿಗಾಗಿ ಜನರು ಪರದಾಡುತ್ತಿದ್ದಾರೆ  ಎಲ್ಲ ಜನಪ್ರತಿನಿಧಿಗಳಿಗೆ , ಅಧಿಕಾರಿಗಳಿಗೆ ಹೀಗೆ ಎಲ್ಲರಿಗೂ ಮನವಿ ಸಲ್ಲಿಸಿ ಸಲ್ಲಿಸಿ ಬೇಸತ್ತು ಹೋಗಿರುವ ಜನತೆ ಕುಡಿಯುವ ನೀರು ಕೊಡಿಸಾಕು ನಿಮ್ಮ ಕೋಟಿಗಳ ಮಾತು ನಿಮ್ಮಲ್ಲಿರಲಿ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

 

 

Leave a Reply

Top