ರಾಣಿ ಚನ್ನಮ್ಮ ಅಧ್ಯಯನ ಪೀಠವನ್ನು ವಿವಿಗಳಲ್ಲಿ ಸ್ಥಾಪಿಸುವಂತೆ ಮನವಿ

rayareddy_koppal
ಕೊಪ್ಪಳ : ರಾಣಿ ಚನ್ನಮ್ಮ ಅಧ್ಯಯನಪೀಠವನ್ನು ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಸ್ಥಾಪಿಸುವಂತೆ ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಶ್ರೀಬಸವಜಯಮೃತ್ಯುಂಜಯ ಸ್ವಾಮೀಜಿ ಅವರು ನಗರದ ಜಿಲ್ಲಾಡಳಿತ ಭವನಕ್ಕೆ ಆಗಮಿಸಿ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.
ಸೂರ್ಯ ಮುಳಗದ ಸಾಮ್ರಾಜ್ಯವಾಗಿದ್ದ ಬ್ರಿಟಿಷರನ್ನು ಪ್ರಪ್ರಥಮವಾಗಿ ಸೋಲಿಸಿ, ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೆ ನಾದಿ ಹಾಡಿದ ಮೊದಲ ಮಹಿಳಾ ರಾಣಿ, ಚನ್ನಮ್ಮ ಎಂಬುದು ನಮ್ಮೆಲ್ಲರಿಗೆ ತಿಳಿದಿರುವ ವಿಷಯವಾಗಿದೆ. ರಾಣಿ ಚನ್ನಮ್ಮ ನಮ್ಮ ರಾಜ್ಯದ ವೀರ ಮಹಿಳೆ ಎಂಬುವುದು ನಮ್ಮಗೆಲ್ಲ ಹೆಮ್ಮಯ ವಿಷಯ. ಆದರೆ, ಭಾರತದ ಇತಿಹಾಸದಲ್ಲಿ ರಾಣಿ ಚನ್ನಮ್ಮ ತಾಯಿಗೆ ಐತಿಹಾಸಿಕವಾಗಿ ಸಿಗಬೇಕಾದ ರಾಷ್ಟ್ರ ಮನ್ನಣೆ ಇದುವರೆಗೆ ಸಿಗದೆ ಇರುವುದರಿಂದ ಕನ್ನಡಿಗರ ಅಭಿಮಾನ ಶ್ಯೂನ್ಯತೆಗೆ ನೋವಿನ ಸಂಗತಿಯಾಗಿದೆ. ಇದಕ್ಕೆ ಕಾರಣ ರಾಣಿ ಚನ್ನಮ್ಮಳ ಇತಿಹಾಸದ ಅಧ್ಯಯನ ಹಾಗೂ ಪ್ರಚಾರ ಕೊರತೆಯಾಗಿದೆ. ಇಂದಿನ ಪೀಳಿಗೆಗೆ ರಾಷ್ಟ್ರ ಪ್ರೇರಣೆ, ಸ್ವಾಭಿಮಾನ ಹಾಗೂ ಸ್ವಾತಂತ್ರ್ಯದ ಅರಿವನ್ನು ಚನ್ನಮ್ಮನ ಇತಿಹಾಸ ಮೂಲಿ ದೇಶಕ್ಕೆ ಪರಿಚಯಿಸುವುದು ಸರಕಾರಗಳ ಕರ್ತವ್ಯವಾಗಿದೆ. ಕೂಡಲೇ ರಾಣಿ ಚನ್ನಮ್ಮ ಅಧ್ಯಯನ ಪೀಠವನ್ನು ರಾಜ್ಯದ ಎಲ್ಲಾ ವಿವಿಗಳಲ್ಲಿ ಸ್ಥಾಪಿಸಬೇಕು. ಅಲ್ಲದೇ ಬಹಳ ವರ್ಷಗಳವರೆಗೆ ಕನ್ನಡಿಗರ ಕನಸಾಗಿದ್ದ ವಿಜಯಪುರ ಮಹಿಳಾ ವಿಶ್ವವಿದ್ಯಾಲಯಕ್ಕೆ ಅಕ್ಕಮಹಾದೇವಿ ಹೆಸರನ್ನು ನಾಮಕರಣ ಮಾಡಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತೇವೆ. ಇನ್ನೂ ಕಲಬುರಗಿ ವಿಶ್ವವಿದ್ಯಾಲಯಕ್ಕೆ ವಿಶ್ವಗುರು ಬಸವೇಶ್ವರ ವಿವಿ ಹಾಗೂ ಶಿಗ್ಗಾವಿ ಜಾನಪದ ವಿವಿಗೆ ಸಂತ ಶಿಶೂನಾಳ ಶರೀಫರ ಹೆಸರನ್ನು ನಾಮಕರಣ ಮಾಡಬೇಕೆಂದು ಒತ್ತಾಯಿಸಿದರು.
ಸಮಾಜದ ಮುಖಂಡರಾದ ಬಸವರಾಜ ಉಳ್ಳಾಗಡ್ಡಿ, ಈರಣ್ಣ ಹಳ್ಳಿಕೇರಿ, ಬಿ.ಕಿಶೋರಿ, ಪಂಚಮಸಾಲಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸೋಮನಗೌಡ ಪಾಟೀಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ವಿ.ಮೇಳಿ ಇತರರು ಇದ್ದರು.

Leave a Reply