ರಾಜ್ಯ ಮಟ್ಟದ ಮ್ಯಾರಾಥಾನ್ ಸ್ಪರ್ಧೆ

ದಕ್ಷಿಣ ಭಾರತದ ಕುಂಭಮೇಳ ಎಂದೇ ಖ್ಯಾತವಾಗಿರುವ ಗವಿಮಠದ ಶ್ರೀ ಗವಿಸಿದ್ದೇಶ್ವರ ಜಾತ್ರೆ ಪ್ರಯುಕ್ತ ನಗರದಲ್ಲಿ ರಾಜ್ಯ ಮಟ್ಟದ ಮ್ಯಾರಾಥಾನ್ ಸ್ಪರ್ಧೆ ನಡೆಯಿತು. ಜಿಲ್ಲಾ ಅಥ್ಲೆಟಿಕ್ಸ್ ಸಂಸ್ಥೆ ಸತತವಾಗಿ ಎರಡನೇ ವರ್ಷ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಮ್ಯಾರಾಥಾನ್  ಸ್ಪರ್ಧೆಗೆ ಸಂಸದ ಸಂಗಣ್ಣ ಕರಡಿ  ಚಾಲನೆ ನೀಡಿದರು.   ಆರ್‌ಟಿಒ ಕಚೇರಿ ಬಳಿಯ ರಾಷ್ಟ್ರೀಯ ಹೆದ್ದಾರಿ 63 ರಿಂದ ಗದಗ ರಸ್ತೆಯಲ್ಲಿರುವ ಮಳೆ ಮಲ್ಲೇಶ್ವರ ದೇವಸ್ಥಾನದ ಕ್ರಾಸ್‍ವರೆಗೆ 6 ಕಿಲೋ ಮೀಟರ್ ಗುರಿಯನ್ನು ಮ್ಯಾರಾಥಾನ್‍ಗೆ ನಿಗಡಿಪಡಿಸ ಲಾಗಿತ್ತು. ಕೊಪ್ಪಳ ನಗರ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಬಂದಿದ್ದ ಓಟಗಾರರು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. 16 ವರ್ಷದೊಳಗಿನ ಹಾಗೂ 16 ವರ್ಷ ಮೇಲ್ಪಟ್ಟವರಿಗೆಂದು ಬಾಲಕರು ಮತ್ತು ಬಾಲಕಿಯರಿಗಾಗಿ ಪ್ರತ್ಯೇಕವಾಗಿ ಸ್ಪರ್ಧೆ ನಡೆಯಿತು. ಜಿಲ್ಲಾ ಪಂಚಾಯತ್ ಸದಸ್ಯ ಕೆ. ರಾಜಶೇಖರ್ ಹಿಟ್ನಾಳ್ ಸೇರಿದಂತೆ ಜಿಲ್ಲಾ ಅಥ್ಲೆಟಿಕ್ ಸಂಸ್ಥೆಯ ಪದಾಧಿಕಾರಿಗಳ  ನೇತೃತ್ವದಲ್ಲಿ  ನಡೆದ ಮ್ಯಾರಾಥಾನ್ ವಿಜೇತರಿಗೆ ಬಹುಮಾನ ವಿತರಣೆ ಹಾಗೂ ರಾಷ್ಟ್ರಮಟ್ಟದ ಅಥ್ಲೀಟ್ ಗಳಿಗೆ ಸನ್ಮಾನ ಕಾರ್ಯಕ್ರಮ ಬಾಲಕಿಯರ ಪ್ರೌಢಶಾಲಾ ಮೈದಾನದಲ್ಲಿ ನಡೆಯಿತು. ಶಾಸಕ ರಾಘವೇಂಧ್ರ ಹಿಟ್ನಾಳ ಬಹುಮಾನ ವಿತರಣೆ ಮಾಡಿದರು.

 

Leave a Reply