ರಾಜ್ಯ ಉಪಾಧ್ಯಕ್ಷರಾಗಿ ಮುಸ್ತಾಕ ಅಹಮ್ಮದ ಮುಲ್ಲಾ ರವರನ್ನು ನೇಮಕ

human_rights_koppal_newsಕೊಪ್ಪಳ : ಅಂತರಾಷ್ಟ್ರೀಯ ಮಾನವ ಹಕ್ಕು ಹಾಗೂ ಕಲ್ಯಾಣ ಸಂಸ್ಥೆ ಅಲ್ಪಸಂಖ್ಯಾತರ ಘಟಕದ ರಾಜ್ಯ ಉಪಾಧ್ಯಕ್ಷರನ್ನಾಗಿ ಕುಕನೂರಿನ ಮುಸ್ತಾಕ ಅಹಮ್ಮದ ಮುಲ್ಲಾ ಇವರನ್ನು ಆಯ್ಕೆ ಮಾಡಲಾಗಿದೆ ಎಂದು ಮಾನವ ಹಕ್ಕು ಹಾಗೂ ಕಲ್ಯಾಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಡಾ. ಎಲ್ ಬಾಬು ಪ್ರಕಟಣೆಯಲ್ಲಿ ತಿಳಿಸಿದ್ದಾರೆ ಬಡವರು, ನಿರ್ಗತಿಕರು, ಶೋಷಿತರು, ಕೂಲಿ ಕಾರ್ಮಿಕರು, ಅನ್ಯಾಯಕ್ಕೆ ಒಳಗಾದವರ ಹಕ್ಕುಗಳ ರಕ್ಷಣೆಗಾಗಿ ಸಾಮಾಜಿಕ ಹೋರಾಟದ ಹಿನ್ನೆಯಲ್ಲಿ ಈ ಸಂಸ್ಥೆ ಅನುಷ್ಠಾನಗೊಂಡಿದ್ದು ಡಾ. ಎಲ್ ಬಾಬು ವಹಿಸಿರುವ ಜವಬ್ಧಾರಿಯನ್ನು ಸಮರ್ಥವಾಗಿ ನಿಭಾಯಿಸುವುದಾಗಿ ನೂತನ ರಾಜ್ಯಾ ಉಪಾಧ್ಯಕ್ಷರಾದ ಮುಸ್ತಾಕ ಅಹಮ್ಮದ ಮುಲ್ಲಾ ತಿಳಿಸಿದ್ದಾರೆ.

Leave a Reply