ರಾಜ್ಯಾದ್ಯಕ್ಷರನ್ನಾಗಿ ಬಿ.ಎಸ್ ಯಡಿಯೂರಪ್ಪ : ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಬ್ರಮಾಚರಣೆ

ಬಿಜೆಪಿkoppal-bjp koppal-bjp-yadiyurappa ಪಕ್ಷದ ರಾಜ್ಯಾದ್ಯಕ್ಷರನ್ನಾಗಿ ಬಿ.ಎಸ್ ಯಡಿಯೂರಪ್ಪನವರನ್ನು ಆಯ್ಕೆ ಘೋಷಣೆ ಮಾಡಿದ ಹಿನ್ನಲೆಯಲ್ಲಿ ಇಂದು ಕೋಪ್ಪಳದಲ್ಲಿ ಸಂಸದ ಸಂಗಣ್ಣ ಕರಡಿ ಹಾಗೂ ಬಿಜೆಪಿ ಕಾರ್ಯಕರ್ತರು ನಗರದ ಅಶೋಕಾ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಬ್ರಮಾಚರಣೆ ನಡೆಸಿದರು. ಇದೇ ಸಂದರ್ಭದಲ್ಲಿ ಮಾತನಾಡುತ್ತಾ ಸಂಸದ ಕರಡಿ ಯಡಿಯೂರಪ್ಪ ನವರನ್ನು ರಾಜ್ಯಾದ್ಯಕ್ಷನನ್ನಾಗಿ ಘೋಷಣೆ ಮಾಡಿದ್ದು ತುಂಬಾ ಸಂತಸ ತಂದಿದೆ. ಯಡಿಯೂರಪ್ಪ ಅದ್ಯಕ್ಷರಾಗಿರುವದು ಆನೆ ಬಲ ಬಂದಿದೆ, ಮುಂದಿನ ಚುನಾವಣೆಯಲ್ಲಿ ಮತ್ತೆ ಬಿಜೆಪಿ ವಿಜಯೋತ್ಸವ ಆಚರಣೆ ಮಾಡತ್ತೆ ಆಗ ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಿರುತ್ತಾರೆ. ಇನ್ನು ಯಡಿಯೂರಪ್ಪನವರ ಮೇಲಿನ ಕೇಸುಗಳು ನ್ಯಾಯಾಲಯದಲ್ಲಿ ವಜಾ ಆಗಿವೆ ಹೀಗಾಗಿಕೇಸುಗಳ ಪರಿಣಾಮ ಚುನಾವಣೆಯಲ್ಲಿ ಬೀರಲ್ಲ ಎಂದರು.

Please follow and like us:
error