ರಾಜ್ಯದ ಬರ ಪರಿಸ್ಥಿತಿ ಅಧ್ಯಯನಕ್ಕೆ ಜಮಾಅತೆ ಇಸ್ಲಾಮೀ ಹಿಂದ್ ತಂಡ

bara-adyayana-tanda

ಬೆಂಗಳೂರು : ರಾಜ್ಯದ ಬರ ಪರಿಸ್ಥಿತಿ ಯ ಬಗ್ಗೆ ಅಧ್ಯಯನ ನಡೆಸಲು ಜಮಾಅತೆ ಇಸ್ಲಾಮಿನ ಹಿಂದ್ ನ ಕರ್ನಾಟಕ ರಾಜ್ಯ ಕಾರ್ಯದರ್ಶಿ ಯೂಸುಫ್ ಕನ್ನಿ ನೇತೃತ್ವದ ಹಾಗೂ ಹ್ಯುಮ್ಯಾನಿಟೇರಿಯನ್ ರಿಲೀಫ್ ಸೊಸೈಟಿಯ ಒಟ್ಟು 7 ಮಂದಿಯ ತಂಡ ಎಪ್ರಿಲ್ 11ರಿಂದ 4 ದಿನಗಳ ಕಾಲ ಬರ ಪೀಡಿತ ಪ್ರದೇಶಗಳಾದ ಬೆಳಗಾಂ, ಧಾರವಾಡ, ಗದಗ, ಬಳ್ಳಾರಿ, ಕೊಪ್ಪಳ, ಬಾಗಲಕೋಟೆ, ಬಿಜಾಪುರ, ಕಲಬುರ್ಗಿ, ಯಾದಗಿರಿ ಮುಂತಾದ ಜಿಲ್ಲೆಯ ಬರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಸಮೀಕ್ಷೆ ನಡೆಸಲಿದೆ.
ಈ ಸಂದರ್ಭದಲ್ಲಿ ಆಯಾ ಜಿಲ್ಲೆಯ ಜಿಲ್ಲಾಧಿಕಾರಿ ಮತ್ತು ತಹಶೀಲ್ದಾರರನ್ನು ಭೇಟಿ ಮಾಡಿ ಸಮೀಕ್ಷೆಯ ವರದಿಯನ್ನು ಹಾಗೂ ಸೂಕ್ತ ಪರಿಹಾರಕ್ಕಾಗಿ ಮನವಿ ಮಾಡಲಾಗುವುದು.
ಈ ಸಂದರ್ಭದಲ್ಲಿ ಸರಕಾರದಿಂದ ಘೋಷಣೆಯಾದ ಬರ ಪರಿಹಾರ ಸೂಕ್ತ ರೀತಿಯಲ್ಲಿ ವಿತರಣೆ ಹಾಗೂ ಸೌಲಭ್ಯಗಳನ್ನು ಜನರಿಗೆ ಸಿಗುವಂತಾಗಲು ಶ್ರಮಿಸುವುದು.
ಹೀಗಾಗಲೇ ಕೆರೆ ಬಾವಿ ಬತ್ತಿ ಹೋಗಿದ್ದು, ಜಲಾಶಯಗಳಲ್ಲಿ ನೀರು ಖಾಲಿಯಾಗಿವೆ. ಇಷ್ಟೇ ಅಲ್ಲದೆ,
ಬಿಸಿಲಿನ ಬೇಗೆಗೆ ಜನ, ಜಾನುವಾರುಗಳು ಸಾಯುವ ಪರಿಸ್ಥಿತಿ ಉಂಟಾಗಿದೆ. ಕುಡಿಯುವ ನೀರಿಗಾಗಿ ಎಲ್ಲೆಡೆ ಹಾಹಾಕಾರ ಆರಂಭವಾಗಿದೆ. ಜನರು ತಮ್ಮ ತಮ್ಮ ಜಾನುವಾರುಗಳು ಹಾಗೂ ಸಾಮಾನು ಸರಂಜಾಮುಗಳೊಂದಿಗಗೆ ವಲಸೆ ಹೋಗುವಂತಹ ಪರಿಸ್ಥಿತಿ ತಲೆದೂರಿದೆ. ಈ ನಿಟ್ಟಿನಲ್ಲಿ ಜಮಾಅತ್ ಹಾಗೂ ಹ್ಯೂಮ್ಯಾನಿಟೇರಿಯನ್ ರಿಲೀಫ್ ಸೊಸೈಟಿ, ಬರ ಪೀಡಿತ ಪ್ರದೇಶಗಳಲ್ಲಿ ನೀರಿನ ಸೌಲಭ್ಯಕ್ಕಾಗಿ ಕೊಳವೆ ಬಾವಿಯನ್ನು ಕೊರೆಯುವ ಯೋಜನೆ ಹಾಗೂ ಕೆಲವು ಪ್ರದೇಶಗಳಿಗೆ ಟ್ಯಾಂಕರ್ ಗಳ ಮೂಲಕ ಹಳ್ಳಿಯ ಜನರಿಗೆಲ್ಲ ನೀರನ್ನು ಒದಗಿಸಲಾಗುವುದು ಹಾಗೂ ಆರೋಗ್ಯ ಶಿಬಿರ, ಜಾನುವಾರುಗಳ ಸಂರಕ್ಷಣೆ ,ರೈತರಿಗೆ ಸಲಹೆ ಸೂಚನೆಗಳು ಮತ್ತು ಜನ ಜಾಗೃತಿ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುವುದು.
ಈ ಕಾರ್ಯದಲ್ಲಿ ಸಾರ್ವಜನಿಕರಿಂದ ಎಲ್ಲಾ ರೀತಿಯ ಸಹಾಯ ಮತ್ತು ಸಹಕಾರವನ್ನು ಜಮಾಅತೆ ಇಸ್ಲಾಮೀ ಹಿಂದ್ ಕೋರುತ್ತದೆ.
ಈ ತಂಡದಲ್ಲಿ ಹ್ಯೂಮ್ಯಾನಿಟೇರಿಯನ್ ರಿಲೀಫ್ ಸೊಸೈಟಿಯ ಪ್ರಧಾನ ಕಾರ್ಯದಶಿ೯ ಮುಹಮ್ಮದ್ ಮರಕಡ, ಫಾರೂಕ್ ನಸ್ತರ್, ಸ್ಥಳೀಯ ಜಮಾಅತ್ ಹೊಣೆಗಾರರು ಭಾಗವಹಿಸಲಿದ್ದಾರೆ

Please follow and like us:
error