fbpx

ರಾಜೀವಗಾಂಧಿ ಸಬ್‌ಮಿಷನ್ ಸ್ಕೀಮ್ ಕುಡಿಯುವ ನೀರಿನ ಯೋಜನೆ ಪೂರ್ಣಗೊಳಿಸಲು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಒತ್ತಾಯ

ಕೊಪ್ಪಳ : ರಾಜೀವಗಾಂಧಿ ಸಬ್‌ಮಿಷನ್ ಸ್ಕೀಮ್ ಕುಡಿಯುವ ನೀರಿನ ಯೋಜನೆಯನ್ನು ಪೂರ್ಣಗೊಳಿಸಲು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕೊಪ್ಪಳ ವತಿಯಿಂದ ಸರ್ಕಾರವನ್ನು ಒತ್ತಾಯಿಸಿದೆ.
೨೦೦೭-೦೮ನೇ ಸಾಲಿನಲ್ಲಿ ೮೩ ಹಳ್ಳಿಗಳಿಗೆ ರಾಜೀವಗಾಂಧಿ ಸಬ್‌ಮಿಷನ್ ಸ್ಕೀಮ್ ಕುಡಿಯುವ ನೀರಿನ ಯೋಜನೆಯನ್ನು ಅನುಷ್ಠಾನಗೋಳಿಸಲಾಗಿದ್ದು ೧೦ ವರ್ಷಗಳಾಗುತ್ತಾ ಬಂದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಗ್ರಾಮೀಣ ಜನರು ಪ್ಲೋರೈಡ್ ನೀರನ್ನು ಕುಡಿಯುವುದರಿಂದ ಮೂಳೆ ಸವೆತದಂತಹ ಮಾರಕ ಕಾಯಿಲೆಗಳು ವಿಶೆಷವಾಗಿ ಮಹಿಳೆಯರು ಮತ್ತು ಮಕ್ಕಳಲ್ಲಿ ಸರ್ವೇಸಾಮಾನ್ಯವಾಗಿವೆ ದಿನ ನಿತ್ಯ ಜನರು ಕೊಪ್ಪಳ ನಗರದಿಂದ ಕುಡಿಯುವನೀರನ್ನು ತಗೆದುಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ ಈ ಹಿಂದೆ ಸನ್ಮಾನ್ಯ ಸಚಿವರುಗಳಿಗೆ ಮತ್ತು ಸಬಂಧಪಟ್ಟ ಅಧಿಕಾರಿಗಳಿಗೆ ಮನವಿ ನೀಡಿದರೂ ಎನು ಪ್ರಯೋಜನೆಯಾಗಿಲ್ಲ ಸರ್ಕಾರ ಗ್ರಾಮಿಣ ಜನತೆಗೆ ಪ್ರತಿಯೊಬ್ಬರಿಗೆ ದಿನ ಒಂದಕ್ಕೆ ೫೫ ಲೀಟರ್ ಶುದ್ಧ ಕುಡಿಯುವ ನೀರನ್ನು ನೀಡುವುದಾಗಿ ಹೇಳಿದ್ದರು ಈ ತನಕ ಯಾವುದೇ ಪ್ರಗತಿಯಾಗದಿರುವುದು ವಿರ್ಪಯಾಸ ಈ ಹಿಂದೆ ಪ್ರತಿಭಟನೆ ಮಾಡಿದಾಗ ಸರ್ಕಾರವೂ ಯೋಜನೆಗೆ ಸಂಬಂಧ ಪಟ್ಟ ಗುತ್ತಿಗೆದಾರರ ಗುತ್ತಿಗೆಯನ್ನು ರದ್ದು ಪಡಿಸಿ ಗುತ್ತಿಗೆದಾರರ ಮೇಲೆ ಕ್ರಿಮಿನಲ್ ಮೊಕ್ಕದಮ್ಮೆಯನ್ನು ಹಾಕುವುದಾಗಿ ಹೇಳಿತ್ತು ಆದರೆ ಈ ತನಕ ಯಾವುದೇ ಕ್ರಮ ತಗೆದುಕೊಂಡಿರುವುದಿಲ್ಲ ಆದ ಕಾರಣ ಸರ್ಕಾರ ಈ ಕೂಡಲೇ ಸಬಂಧಪಟ್ಟ ಗುತ್ತಿಗೆದಾರರ ಗುತ್ತಿಗೆಯನ್ನು ರದ್ದುಪಡಿಸಬೇಕು ಹಾಗೂ ಗುತ್ತಿಗೆದಾರರ ಮೇಲೆ ಕ್ರೀಮಿನಲ್ ಮೊಕದಮ್ಮೆಯನ್ನು ದಾಖಲಿಸಬೇಕು ಮತ್ತು ಯೋಜನೆಯ ವಿಳಂಬಕ್ಕೆ ಕಾರಣರಾದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಯೋಜನೆಯು ಪೂರ್ಣಗೊಳ್ಳದಿರುವುದರ ಕುರಿತು ನಡೆದಿರುವ ಅವ್ಯವಹಾರದ ತನಿಖೆ ನಡೆಸಬೇಕು ಮತ್ತು ಡಿಸೆಂಬರ್ ಅಂತ್ಯದೊಳಗೆ ಕಾಮಗಾರಿಯನ್ನು ಪೂರ್ಣಗೋಳಿಸಲು ಮರುಟೆಂಡರ್ ಕರೆದು ಶೀಘ್ರ ಕಾಮಗಾರಿಯನ್ನು ಪೂರ್ಣಗೊಳಿಸಿ ಗ್ರಾಮೀಣ ಜನರಿಗೆ ಶುದ್ಧ ಕುಡಿಯುವ ನೀರನ್ನು ಪೂರೈಸಬೇಕು ಇಲ್ಲವಾದಲ್ಲಿ ವಿವಿಧ ಸಂಘ ಸಂಸ್ಥೆಗಳು ಮತ್ತು ೮೩ ಹಳ್ಳಿಗಳ ಜನರ ಸಹಯೋಗದೊಂದಿಗೆ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕೊಪ್ಪಳ ಮಹಾದಾಯಿ ಮಾದರಿಯಲ್ಲಿ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಈ ಮೂಲಕ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕೊಪ್ಪಳ ಜಿಲ್ಲಾ ಅಧ್ಯಕ್ಷರಾದ ನಜೀರ ಅಹ್ಮದ ಮುದಗಲ್ಲ್ ಹಾಗೂ ಗ್ರಾ.ಪಂ ಸದಸ್ಯರು ಬಹದ್ದೂರಬಂಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Please follow and like us:
error

Leave a Reply

error: Content is protected !!