ರಾಜೀವಗಾಂಧಿ ಮಾಹಿತಿ ತಂತ್ರಜ್ಞಾನದ ಹರಿಕಾರ- ತಿಮ್ಮಾರೆಡ್ಡಿ ಮೇಟಿ

ಕೊಪ್ಪಳ – ದೇಶದಲ್ಲಿ ಮಾಹಿತಿ ತಂತ್ರಜ್ಞಾನ ಅಭಿವೃದ್ಧಿಗೆ ಸ್ಪಂದಿಸಿದ ಮೊದಲ ಪ್ರಧಾನಿಯಾಗಿದ್ದು, ಯುವಶಕ್ತಿಯ ಸದ್ಬಳಕೆಗೆ ಯೋಚಿಸಿದ ಧೀಮಂತ ಎಂದು ಸ.ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ತಿಮ್ಮಾರೆಡ್ಡಿ ಮೇಟಿ ಹೇಳಿದರು.

ಅವರು ಇಂದು ನಗರದ ಪ್ರಥಮ ದರ್ಜೆ ಕಾಲೇಜಿನಲ್ಲಿ ಎನ್‌ಎಸ್‌ಯುಐ ವತಿಯಿಂದ ರಾಜೀವ ಗಾಂಧಿ ಮತ್ತು ದೇವರಾಜ ಅರಸುರವರ ಜನ್ಮದಿನದ ನಿಮಿತ್ಯ ಹಮ್ಮಿಕೊಂಡಿದ್ದ ರಾಜೀವ ಗಾಂಧಿಯವರ ಜೀವನ ಸಾಧನೆ ಕುರಿತ ಭಾಷಣ ಸ್ಪರ್ಧೆಯನ್ನು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಉನ್ನತ ಶಿಕ್ಷಣ ಪಡೆಯುವ ಯುವಜನರ ಕನಸಿಗೆ ಸಾಕಾರಗೊಳ್ಳಲು ಹೊಸ ರಾಷ್ಟ್ರೀಯ ಶಿಕ್ಷಣ ಪಾಲಿಸಿ ಮಾಡಿದರು, ಎಂಟಿಎನ್‌ಎಲ್ ಮೂಲಕ ಇವತ್ತಿನ ದೂರ ಸಂಪರ್ಕ ಕ್ರಾಂತಿಗೆ ನಾಂದಿ ಹಾಡಿದರು ಎಂದರು. ಇದೇ ವೇಳೆ ಮಾತನಾಡಿದ ಕೊಪ್ಪಳ ಸ್ನಾತಕೋತ್ತರ ಕೇಂದ್ರದ ಸಂಚಾಲಕ ಡಾ|| ಮನೋಜ ಕುಮಾರ ಡೊಳ್ಳಿ ಅಧ್ಯಕ್ಷತೆವಹಿಸಿ ಮಾತನಾಡುತ್ತ, ಯುವಜನರ ಮತದಾನದ ಹಕ್ಕನ್ನು ೧೮ಕ್ಕೆ ತಂದವರು, ರಾಜಕೀಯಕ್ಕೂ ಮೊದಲು ಪೈಲಟ್ ಆಗಿದ್ದವರು, ಆರ್ಥಿಕವಾಗಿ ಭಾರತವನ್ನು ಮೇಲೆತ್ತುವ ಕನಸನ್ನು ಕಂಡವರು, ಆದರೆ ಅಕಾಲಿಕ ಮರಣ ದೇಶಕ್ಕೆ ದೊಡ್ಡ ನಷ್ಟವನ್ನು ತಂದಿತು ಎಂದರು. ಕನ್ನಡಪರ ಹೋರಾಟಗಾರ ಶಿವಾನಂದ ಹೊದ್ಲೂರ ಮಾತನಾಢಿದರು, ದೈಹಿಕ ನಿರ್ದೇಶಕಿ ಶೋಭಾ ಇದ್ದರು.ಬಸವರಾಜ ಪ್ರಾರ್ಥಿಸಿದರು, ನಾಗರಾಜ ಕೊಡಾಲ ಸ್ವಾಗತಿಸಿದರು, ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ ಪ್ರಾಸ್ತಾವಿಕವಾಗಿ ಮಾತನಾಡಿದರು, ಬಸವರಾಜ ಸಜ್ಜನ ವಂದಿಸಿದರು. ಸ್ಪರ್ಧಾ ವಿಜೇತರು : ಮೌಲಾಸಾಬ ಕೆ.ಎನ್. (ಪ್ರಥಮ), ಹೆಚ್.ಡಿ. ಚನ್ನದಾಸರ (ದ್ವಿತಿಯ), ಗಂಗಮ್ಮ ಮಾಲಿಪಾಟೀಲ (ತೃತೀಯ) ಮತ್ತು ಶರಣಮ್ಮ ಮಾಲಿಪಾಟೀಲ (ಚತುರ್ಥ), ವರ್ಷಾ ಪವಾರ (ಸಮಾಧಾನಕರ) ಬಹುಮಾನ ಪಡೆದುಕೊಂಡರು.

?
?

Leave a Reply