ರಸ್ತೆ ತಡೆದು ಪ್ರತಿಭಟನೆ

ಕೊಪ್ಪಳ:  ಕಿನ್ನಾಳ ರಸ್ತೆಯ ದುರಸ್ಥಿ ಕುರಿತು ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆ ಕಿನ್ನಾಳಿನ ನೇತೃತ್ವದಲ್ಲಿ ಗ್ರಾಮದ ಬಸವೇಶ್ವರ ವೃತ್ತದಲ್ಲಿ ರಸ್ತೆ ತಡೆ ಮಾಡುವುದರ ಮೂಲಕ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು. ಎರಡು ಗಂಟೆಗಳ ಕಾಲ ರಸ್ತೆ ತಡೆ ನಡೆಸಲಾಯಿತು.
ಪ್ರತಿಭಟನೆ ನೇತೃತ್ವವನ್ನು ವಹಿಸಿದ್ದ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆಯ ಅಧ್ಯಕ್ಷ ಮೌನೇಶ್ ಕಿನ್ನಾಳ ಮಾತನಾಡಿ ಕಿನ್ನಾಳ ಗ್ರಾಮವು ಜಿಲ್ಲಾ ಕೇಂದ್ರದಿಂದ ಕೇವಲ ಹತ್ತು ಕೀಲೋ ಮೀಟರ್ ದೂರವಿದ್ದು ಇಬ್ಬರು ಸಚಿವರಿದ್ದು, ಗಂಡ ಹೆಂಡತಿ ಜಗಳದಲ್ಲಿ ಕೂಸು ಬಡವಾಯಿತು ಎನ್ನುವ ಹಾಗೇ ಕಿನ್ನಾಳಿನ ಪರಿಸ್ಥಿತಿ ಆಗಿದೆ. ಅನೇಕ ಮೂಲಭೂತ ಸಮಸ್ಯೆಗಳ ಗೂಡಾಗಿರುವ ಗ್ರಾಮದಲ್ಲಿ ಕೊಪ್ಪಳ ಕಿನ್ನಾಳ ರಸ್ತೆಯು ತೀರಾ ಹದಗೆಟ್ಟಿದ್ದು, ಸಾರ್ವಜನಿಕರು ಮನವಿ ನೀಡಿದರು ಜನ ಪ್ರತಿನಿಧಿಗಳು ಯಾವುದೇ ರೀತಿಯ ಸ್ಪಂದನೆ ನೀಡದಿರುವುದು ದುರದೃಷ್ಟಕರ. ೨೦ ನಿಮಿಷಗಳಲ್ಲಿ ತಲುಪುಬೇಕಾದ ರಸ್ತೆ ೪೫ ನಿಮಿಷ ಬೇಕಾಗುತ್ತಿದೆ. ರಸ್ತೆಗಳೆಲ್ಲಾ ಗುಂಡಿಗಳು ಅಲ್ಲಲ್ಲಿ ಗುಂಡಿಗಳಲ್ಲಿರುವ ಸ್ವಲ್ಪ ರಸ್ತೆಯಲ್ಲಿ ಅನೇಕ ಅಪಘಾತವಾಗುತ್ತಿದ್ದು ಅನೇಕ ಗರ್ಭೀಣಿ ಮಹಿಳೆಯರ ಹೆರಿಗೆಗಳು ರಸ್ತೆಯಲ್ಲೆ ಆಗಿವೆ. ಅನೇಕ ಅನಾರೋಗ್ಯ ಪೀಡಿತರು ಜಿಲ್ಲಾ ಆಸ್ಪತ್ರೆಗೆ ಸೇರಿಸುವ ಮುನ್ನವೇ ಪ್ರಾಣಬಿಟ್ಟಿದ್ದಾರೆ. ಇಷ್ಟು ಸಮಸ್ಯೆಗಳಿದ್ದರು ಗಮನಿಸದ ಜನಪ್ರತಿನಿಧಿಗಳು ಸಾರ್ವಜನಿಕರು ಪ್ರತಿಭಟನೆ ಮಾಡುತ್ತಾರೆ ಎನ್ನುವ ಸುದ್ದಿ ತಿಳಿಯುತ್ತಿದ್ದಂತೆ ಅಲ್ಲಲ್ಲಿ ಗುಂಡಿಗಳನ್ನು ಮುಚ್ಚಿಸುವ ಕೆಲಸವನ್ನು (ಪ್ಯಾಚ್ ವರ್ಕ) ಮಾಡಲಾಗುತ್ತಿದೆ. ಆದ್ದರಿಂದ ದಯಮಾಡಿ ಗಂಗಾವತಿ ವಿಧಾನಸಭಾ ಕ್ಷೇತ್ರದ ಸಚಿವರಾದ ಇಕ್ಬಾಲ್ ಅನ್ಸಾರಿ ಹಾಗೂ ಕೊಪ್ಪಳ ವಿಧಾನಸಭಾ ಕ್ಷೇತ್ರ ಸಚಿವರಾದ ರಾಘವೇಂದ್ರ ಹಿಟ್ನಾಳ ಮತ್ತು ಸಂಭಂಧಪಟ್ಟ ಅಧಿಕಾರಿಗಳಲ್ಲಿ ನಾವು ಮನವಿ ಮಾಡುತ್ತಿದ್ದೇವೆ ಈ ಕೂಡಲೇ ಕೊಪ್ಪಳ ಕಿನ್ನಾಳ ರಸ್ತೆಯನ್ನು ಆರಂಭಿಸಬೇಕು ಇಲ್ಲದಿದ್ದರೇ ಮುಂದಿನ ದಿನಮಾನಗಳಲ್ಲಿ ಉಗ್ರವಾದ ಹೋರಾಟವನ್ನು ಕೈಗೊಳ್ಳಲಾಗುವುದು ಎಂದರು.
ನಂತರ ಕೊಪ್ಪಳದ ತಹಸಿಲ್ದಾರರು ಪ್ರತಿಭಟನಾ ಸ್ಥಳಕ್ಕೆ ಬಂದು ಮನವಿಯನ್ನು ಸ್ವೀಕರಿಸಿದರು.ಈ ಪ್ರತಿಭಟನೆಯಲ್ಲಿ ಕಿನ್ನಾಳ ಗ್ರಾಮದ ಡಾ.ಬಿ.ಆರ್. ಅಂಬೇಡ್ಕರ್ ಆಟೋಚಾಲಕರ ಸಂಘದ ಸರ್ವ ಸದಸ್ಯರು ಹಾಗೂ ಗ್ರಾಮದ ಯುವಕರಾದ ಉದಯ ಚಿತ್ರಗಾರ, ಮಂಜುನಾಥ ಶಿರಗೇರಿ, ಮಹಾದೇವಯ್ಯ ಹೀರೇಮಠ, ಲಿಂಗರಾಜ ಶಿರಗೇರಿ, ಪವನ ಬಣ್ಣದ, ಗವಿಸಿದ್ದಪ್ಪ ವಡ್ಡರ್, ಪೋಸ್ಟ್ ರಾಮು, ನವೀನ ಬಳೂಚಗಿ, ಹನುಮಂತಪ್ಪ ಕುಂಬಾರ್, ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆಯ ಎಲ್ಲಾ ಪಧಾಧಿಕಾರಿಗಳು ಹಾಗೂ ಸಾರ್ವಜನಿಕರು ಪಾಲ್ಗೋಂಡಿದ್ದರು.

Leave a Reply