ರಮ್ಯಾ ಹೇಳಿದ್ದರಲ್ಲಿ ತಪ್ಪೇನಿಲ್ಲ- ಕೃಷಿ ಸಚಿವ ಕೃಷ್ಣ ಬೈರೇಗೌಡ

ಹಿಂದುತ್ವದಲ್ಲಿ  ಹೆಸರಿನಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿ ಕ್ಕಲಾಗುತ್ತಿದೆ .ಹಿಂದೂ ಸಂಸ್ಕೃತಿ ಸಿಂಧೂ ಕಣಿವೆಯಲ್ಲಿ ಹುಟ್ಟಿದೆ.ಮಾಜಿ ಸಂಸದೆ ರಮ್ಯಾ ಹೇಳಿದ್ದರಲ್ಲಿ ತಪ್ಪೇನಿಲ್ಲ ಎಂದು  ಕೃಷಿ ಸಚಿವ ಕೃಷ್ಣ ಬೈರೇಗೌಡ ಕೊಪ್ಪಳದಲ್ಲಿ ಹೇಳಿದರು.  ಇದೇ ತಿಂಗಳ 29ರಂದು ಕೊಪ್ಪಳದಲ್ಲಿ ನಡೆಯುತ್ತಿರುವ 12 ಜಿಲ್ಲೆಗಳ ಕೃಷಿ ಭಾಗ್ಯ ಫಲಾನುಭವಿಗಳ ಸಮಾವೇಶದ ಸಿದ್ದತೆಗಳನ್ನು ಪರಿಶೀಲಿಸಿದ ನಂತರ ಮಾತನಾಡಿದ ಸಚಿವರು  ಪಾಕಿಸ್ತಾನದಲ್ಲಿ ಒಳ್ಳೆಯವರು ಇದ್ದಾರೆ ಕೆಟ್ಟವರೂ ಇದ್ದಾರೆ ಪಾಕಿಸ್ತಾನ ಭಯೋತ್ಪಾದನೆಯನ್ನು ಹಬ್ಬಿಸುತ್ತಿದೆ, ಹಬ್ಬಿಸಿದೆ ಅದರ ಫಲವನ್ನು ಅದೇ ಈಗ ಅನುಭವಿಸುತ್ತಿದೆ. ಹಾಗಂತ ಪಾಕಿಸ್ತಾನದ ಭಯೋತ್ಪಾದನೆಯನ್ನು ಯಾರೂ ಸಮರ್ಥನೆ ಮಾಡಿಕೊಳ್ಳುತ್ತಿಲ್ಲ. ಬಿಜೆಪಿ, ಆರ್ ಎಸ್ ಎಸ್ ಪಾಕಿಸ್ತಾನ ನರಕ ಅಂತ ಹೇಳಿದ್ದಾರೆ.ಆದರೆ ಸಿಂಧೂ ಕಣಿವೆಯಲ್ಲಿಯೇ ಹಿಂದೂ ಸಂಸ್ಕೃತಿ ಹುಟ್ಟಿದೆ.ಹಾಗಿದ್ದರೆ ಹಿಂದೂ ಸಂಸ್ಕೃತಿ ನರಕನಾ ಅಂತ ಬಿಜೆಪಿ ನಾಯಕರು ಮೊದಲು ಸ್ಪಷ್ಟನೆ ನೀಡಲಿ

Leave a Reply