ರಕ್ತದಾನ ಶಿಬಿರ

ಕೊಪ್ಪಳ. ದಿನಾಂಕ ೧೬/೦೭/೨೦೧೬ ಶನಿವಾರದಂದು ಕಿನ್ನಾಳ ಗ್ರಾಮ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಜಿಲ್ಲಾ ಶಾಖೆ, ಕೊಪ್ಪಳದ ವತಿಯಿಂದ ರಕ್ತದಾನ ಶಿಬಿರ ಆಯೋಜಿಸಲಾಗಿದೆ.

ಕಿನ್ನಾಳ ಗ್ರಾಮದ ಬಸವೇಶ್ವರ ಸರ್ಕಲ್‌ನಲ್ಲಿ ಇರುವ ಶ್ರೀ ಮಾರುತೇಶ್ವರ ದೇವಸ್ಥಾನದ ಆವರಣದಲ್ಲಿ, ದಿನಾಂಕ ೧೬/೦೭/೨೦೧೬ ಬೆಳಿಗ್ಗೆ ೦೮:೦೦ ರಿಂದ ೦೪:೦೦ ರವರೆಗೆ ಶಿಬಿರ ಜರುಗಲಿದ್ದು ರಕ್ತದಾನಿಗಳು ಸ್ವಯಂ ಪ್ರೇರಿತರಾಗಿ ಆಗಮಿಸಿ ರಕ್ತದಾನ ಮಾಡಬೇಕೆಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳು ಡಾ. ಶ್ರೀನಿವಾಸ ಹ್ಯಾಟಿ ಪ್ರಕಟಣೆಯಲ್ಲಿ ಕೋರಿದ್ದಾರೆ.

Related posts

Leave a Comment