ರಂಗ ಕಲಾವಿದರ ಕೃತಿಗೆ ಕಲಾವಿದರ ಮಾಹಿತಿ ಆಹ್ವಾನ

ಕೊಪ್ಪಳ, ಸೆ. ೦೫ : ಕೊಪ್ಪಳ ಜಿಲ್ಲೆಯು ರಂಗಭೂಮಿ ಚಟುವಟಿಕೆಗೆ ಹೆಸರಾಗಿದೆ. ಜಿಲ್ಲೆಯ ನಾಲ್ಕೂ ತಾಲೂಕಿನಲ್ಲಿ ಅನೇಕ ಕಲಾವಿದರು ರಂಗ ಭೂಮಿಯಲ್ಲಿ ನಿರಂತರ ತೊಡಗಿಸಿಕೊಂಡು ಜಿಲ್ಲೆಯ ರಂಗಭೂಮಿಯನ್ನು ಶ್ರೀಮಂತಗೊಳಿಸಿದ್ದಾರೆ. ಅವರ ಪರಿಚಯವನ್ನು ಮಾಡಿಕೊಡುವ ಉದ್ಧೇಶದಿಂದ ದ್ವಾರಕಾ ಪ್ರಕಾಶನದಿಂದ ’ಕೊಪ್ಪಳ ಜಿಲ್ಲೆಯ ರಂಗಕಲಾವಿದರು’ ಕೃತಿಯನ್ನು ಹೊರತರಲಾಗುತ್ತಿದೆ.
ಜಿಲ್ಲೆಯ ರಂಗ ಕಲಾವಿದರು ತಮ್ಮ ಸ್ವಪರಿಚಯ, ರಂಗಭೂಮಿಗೆ ತಾವು ಸಲ್ಲಿಸಿದ ಸೇವೆ, ಸಂದಗೌರವ, ಸನ್ಮಾನ ಕುರಿತು ಬರೆದು ತಮ್ಮ ಇತ್ತೀಚಿನ ಭಾವಚಿತ್ರ, ಸಂಪರ್ಕ ವಿಳಾಸ, ದೂರವಾಣಿ ಸಂಖ್ಯೆಯನ್ನು ಸಪ್ಟಂಬರ್ ೨೫ರ ಒಳಗಾಗಿ ದ್ವಾರಕಾ ಪ್ರಕಾಶನ, ನಂ. ೨೪, ಸಿ.ಎಂ.ಸಿ. ಕಾಂಪ್ಲೆಕ್ಸ್ ನಗರಸಭೆ ಹತ್ತಿರ ಕೊಪ್ಪಳ ಈ ವಿಳಾಸಕ್ಕೆ ಕಳಿಸಿಕೊಡಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊ. ೯೫೩೮೮೨೫೧೭೩ಯನ್ನು ಸಂರ್ಕಿಸಬಹುದಾಗಿದೆ.

Leave a Reply