ಯುವ ಪೀಳಿಗೆ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು

kasapa-koppal
ಕೊಪ್ಪಳ- ತಾಲೂಕಿನ ಅಳವಂಡಿ ಗ್ರಾಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತ ಅಳವಂಡಿ ಹೋಬಳಿ ಘಟಕದ ಪದಾಧಿಕಾರಿಗಳ ಪದಗ್ರಹಣ ಕ.ಸಾ.ಪ ದ ೧೦೧ ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಇತ್ತೀಚಿಗೆ ಜರುಗಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಪೊ|| ಎ.ವಾಯ್. ನವಲಗುಂದ ಅವರು ಇಂದಿನ ಯುವ ಪೀಳಿಗೆ ಬರೀ ಮೊಬೈಲ್ ಲೋಕದಲ್ಲೇ ಮುಳುಗಿ ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೊಗುತ್ತಿರುವುದು ಖೇದನೀಯ. ಬದಲಾಗಿ ಮಾನವೀಯ ಮೌಲ್ಯಗಳನ್ನು ಬೆಳಸಿ ಕೊಳ್ಳುವುದರ ಜೊತೆಗೆ ಕನ್ನಡ ಪ್ರಗತಿಗೆ ಗ್ರಾಮ ಗ್ರಾಮದಲ್ಲೂ ಕ್ರಿಯಾಶೀಲವಾಗಬೇಕಾಗಿದೆ ಎಂದು ಕರೆ ನೀಡಿದರು.
ರಾಜಶೇಖರ ಅಂಗಡಿ ಜಿಲ್ಲಾ ಕಸಾಪ ಅಧ್ಯಕ್ಷರು ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ಕನ್ನಡ ಕಟ್ಟುವ, ಬೆಳೆಸುವ ಕಾರ್ಯಕ್ಕೆ ಒತ್ತು ನೀಡುತ್ತೇನೆ ಜೊತೆಗೆ ಬೆಟಗೇರಿಯಲ್ಲಿ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳುತ್ತೇವೆ ಎಂದರು.ಶೇಖರಗೌಡ ಮಾಲಿಪಾಟೀಲ ಅವರು ಉದ್ಘಾಟಿಸಿ ಮಾತಾಡುತ್ತಾ ಕನ್ನಡಕ್ಕೆ ಎತ್ತರದ ಸ್ಥಾನವಿದೆ ಅದು ಇನ್ನೂ ಬೆಳೆಯಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶ್ರೀ.ಷ.ಬ್ರ.೧೦೮ ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ಶ್ರೀ.ಷ.ಬ್ರ.೧೦೮ ಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯ ಸಾನಿಧ್ಯವಹಿಸಿ ಆರ್ಶೀವಚನ ನೀಡಿದರು. ಗಿರೀಶ ಪಾನಗಂಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡರೆ ಎಂ.ಎಸ್ ಹೊಟ್ಟಿನ್ ಕಾರ್ಯಕ್ರಮವನ್ನು ನಿರೂಪಿಸಿದರು.
ಘಟಕದ ಅಧ್ಯಕ್ಷರಾದ ರಾಮಚಂದ್ರಶೇಖರಗೌಡ ಗೊಂಡಬಾಳ ಸ್ವಾಗತಿಸಿದರು. ಸುರೇಶ ದಾಸರಟ್ಟಿ ವಂದಿಸಿದರು. ಸಂತೋಷ ದೇಶಪಾಂಡೆ ಅವರು ಮಾತನಾಡುತ್ತಾ ’೩೭೧ ಜೆ ವಿಧಿ’ ಹೈದ್ರಾಬಾದ್ ಕರ್ನಾಟಕದ ಗಡಿ ಭಾಗದಲ್ಲಿ ಬೇರೆ ಜಿಲ್ಲೆಯವರು ಒಳ ನುಸುಳಿ ಸೌಲಭ್ಯ ದುರುಪಯೋಗಪಡಿಸಿಕೊಳ್ಳುತ್ತಿದ್ದ ಬಗ್ಗೆ ಎಚ್ಚರವಹಿಸಲು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿಯಲ್ಲಿ ಕನ್ನಡದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.ಸಮಾರಂಭದಲ್ಲಿ ರಮೇಶ ತುಪ್ಪದ, ಗವಿಸಿದ್ದೇಶ ಹುಡೇಜಾಲಿ, ಎಸ್.ಬಿ.ಗೊಂಡಬಾಳ, ಬಸವರಾಜ ಆಡೂರು. ರಾಮಕೃಷ್ಣ ಕರ್ಣಂ, ನಾಗಪ್ಪ ಸವಡಿ, ಇತರರು ಉಪಸ್ಥಿತರಿದ್ದರು.

Leave a Reply