ಯುವತಿ ಕಾಣೆ ಪತ್ತೆಗೆ ಸಹಕರಿಸಲು ಸೂಚನೆ.

ಕೊಪ್ಪಳ ಏ.೨೦  ಕೊಪ್ಪಳ ತಾಲೂಕಿನ ಗುನ್ನಾಳ (ಹಾ/ವ ಹೊಸನಿಂಗಾಪೂರ) ಗ್ರಾಮದ ಮಂಜುಶ್ರೀ (೨೦) ಎಂಬ ಯುವತಿ ಕಾಣೆಯಾಗಿದ್ದು, ಯುವತಿಯ ಪತ್ತೆಗೆ ಸಹಕರಿಸುವಂತೆ ಮುನಿರಾಬಾದ ಠಾಣೆಯ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಜಯಪ್ರಕಾಶ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಮಂಜುಶ್ರೀ ತಂದೆ ಪ್ರಮೋದ ಜೋಶಿ(೨೦) ಎಂಬ ಯುವತಿ ಕಳೆದ ಮಾ.೧೮ ರಂದು ಮನೆಯಲ್ಲಿ ಯಾರಿಗೂ ಹೇಳದೇ ಕೇಳದೆ ಹೋದವಳು ವಾಪಸ್ ಬರದೆ ಕಾಣೆಯಾಗಿರುತ್ತಾಳೆ.  ಕಾMANJUSHRIಣೆಯಾದ ಯುವತಿಯ ಚಹರೆ ವಿವರ ಇಂತಿದೆ: ಹೆಸರು ಮಂಜುಶ್ರೀ ತಂದೆ ಪ್ರಮೋದ ಜೋಶಿ(೨೦), ಜಾತಿ-ಬ್ರಾಹ್ಮಣ, ಎತ್ತರ ೫.೪ ಅಡಿ, ದುಂಡುಮುಖ, ಸಾಧಾರಣ ಮೈಕಟ್ಟು, ಬಿಳಿ ಮೈಬಣ್ಣ, ಕೆಂಪು ಬಣ್ಣದ ಚೂಡಿದಾರ ಧರಿಸಿದ್ದು, ಕನ್ನಡ, ಇಂಗ್ಲೀಷ್ ಭಾಷೆ ಮಾತನಾಡುತ್ತಾಳೆ. ಈ ಯುವತಿಯ ಬಗ್ಗೆ ಮಾಹಿತಿದೊರೆತಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಕೊಪ್ಪಳ-೦೮೫೩೯-೨೩೦೧೧೧, ಡಿಎಸ್‌ಪಿ, ಕೊಪ್ಪಳ-೦೮೫೩೯-೨೨೨೪೩೩, ಸಿಪಿಐ ಕೊಪ್ಪಳ ಗ್ರಾಮೀಣ ವೃತ್ತರವರ ಕಛೇರಿ -೦೮೫೩೯-೨೨೧೩೩೩ ಅಥವಾ ಮುನಿರಾಬಾದ ಪೊಲೀಸ್ ಠಾಣೆ ೦೮೫೩೯-೨೭೦೩೩೩ ಗೆ ಸಂಪರ್ಕಿಸುವಂತೆ ತಿಳಿಸಿದೆ.

Please follow and like us:
error

Related posts

Leave a Comment