ಯುವಕ ಕಾಣೆ.

ಕೊಪ್ಪಳ ಏ.೨೨ ಯಲಬುರ್ಗಾ ತಾಲೂಕಿನ ತಿಪ್ಪರಸನಾಳ ಗ್ರಾಮದ ಈರಣ್ಣ ತಂ.ಭರಮಪ್ಪ (೨೭) ಎಂಬ ಯುವಕ ಕಾಣೆಯಾಗಿದ್ದು, ಯವಕನ ಪತ್ತೆಗೆ ಸಹಕರಿಸುವಂತೆ ಕುಕನೂರು ಠಾಣೆಯ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಈರಣ್ಣ ಎಂಬ ಯುವಕ ವೃತ್ತಿಯಿಂದ ಡ್ರೈವರ್ ಆಗಿದ್ದು ಕಳೆದ ೨೦೧೫ ರ ಜೂ.೧೩ ರಂದು ಮನೆಯಿಂದ ಹೋಗಿದ್ದು ವಾಪಸ್ ಬಂದಿರುವುದಿಲ. ಸಂಬಂಧಿಕರ ಊರುಗಳಲ್ಲಿ ವಿಚಾರಿಸಿದರೂ ಈತನ ಪತ್ತೆ ಆಗಿರುವುದಿಲ್ಲ. ಕಾಣೆಯಾದ ಯುವಕನ ಚಹರೆ ವಿವರ ಇಂತಿದೆ: ಹೆಸರು ಈರಣ್ಣ ತಂ. ಭರಮಪ್ಪ(೨೭), ಜಾತಿ-ವಾಲ್ಮೀಕಿ, ಉದ್ಯೋಗ-ಡ್ರೈವರ್, ಎತ್ತರ ೫.೪ ಅಡಿ, ಸಾದಾರನ ಮೈಕಟ್ಟು, ಸಾದಾಗೆಂಪು ಮೈಬಣ್ಣ, ದುಂಡುಮುಖ, ತಲೆಯಲ್ಲಿ ೨ ಇಂಚು ಕಪ್ಪು ಕೂದಲು, ಬಲಗೈERANNAಯಲ್ಲಿ ವಿಜಯ ಎಂದು ಹಚ್ಚೆ ಹಾಕಿಸಿಕೊಂಡ ಗುರುತು ಇದೆ, ಹಸಿರು ಬಣ್ಣದ ಟೀ-ಶರ್ಟ್ ಕಪ್ಪು ಬಣ್ಣದ ಪ್ಯಾಂಟು ಧರಿಸಿದ್ದಾನೆ. ಕನ್ನಡ ಭಾಷೆ ಮಾತನಾಡುತ್ತಾನೆ. ಈ ಯುವಕನ ಬಗ್ಗೆ ಮಾಹಿತಿ ದೊರೆತಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಕೊಪ್ಪಳ-೦೮೫೩೯-೨೩೦೧೧೧, ಡಿಎಸ್‌ಪಿ, ಕೊಪ್ಪಳ-೦೮೫೩೯-೨೩೦೪೩೨, ಸಿಪಿಐ ಯಲಬುರ್ಗಾ ವೃತ್ತರವರ ಕಛೇರಿ -೦೮೫೩೪-೨೨೦೧೩೩ ಅಥವಾ ಕುಕನೂರು ಪೊಲೀಸ್ ಠಾಣೆ ೦೮೫೩೪-೨೩೦೪೩೮, ೯೪೮೦೮೦೩೭೫೦ ಗೆ ಸಂಪರ್ಕಿಸುವಂತೆ ತಿಳಿಸಿದೆ.

Please follow and like us:
error